Dr. Rajkumar: ಗೂಗಲ್ನಲ್ಲಿ ಡಾ. ರಾಜ್ಕುಮಾರ್ ಬಗ್ಗೆ ತಪ್ಪು ಮಾಹಿತಿ; ಪಾಠ ಕಲಿಸಲು ಈಗ ಕನ್ನಡಿಗರು ಮಾಡಬೇಕಿರೋದು ಏನು?
Vikram Vedha: ರಿಷಬ್ ಶೆಟ್ಟಿ ಅವರ ಮಾತಿಗೆ ಸ್ಪಂದಿಸಿರುವ ಅನೇಕರು ರಿಪೋರ್ಟ್ ಮಾಡಿದ್ದಾರೆ. ‘ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ರಿಪೋರ್ಟ್ ಮಾಡಿದ್ದೇವೆ’ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಭಾಷೆ, ಕನ್ನಡದ ಧ್ವಜ ಸೇರಿದಂತೆ ಅನೇಕ ವಿಚಾರಗಳಲ್ಲಿ ಪರಭಾಷಿಕರು ಕಿರಿಕ್ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಆನ್ಲೈನ್ನಲ್ಲಿ ಕೆಲವು ಅಚಾತುರ್ಯಗಳು ನಡೆಯುತ್ತಿವೆ. ಕೆಲವೇ ದಿನಗಳ ಹಿಂದೆ ಕನ್ನಡವನ್ನು ಭಾರತದ ಅತಿ ಕೆಟ್ಟ ಭಾಷೆ ಎಂಬಂತೆ ಗೂಗಲ್ ಸರ್ಚ್ ರಿಸಲ್ಟ್ ತೋರಿಸುತ್ತಿತ್ತು. ಈಗ ವರನಟ ಡಾ. ರಾಜ್ಕುಮಾರ್ ಅವರ ವಿಚಾರದಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ನೀಡಲು ಅಭಿಮಾನಿಗಳು ಮತ್ತು ಚಿತ್ರರಂಗದವರು ಪ್ರಯತ್ನಿಸುತ್ತಿದ್ದಾರೆ.
ತಮಿಳಿನ ‘ವಿಕ್ರಂ ವೇದ’ ಸಿನಿಮಾದ ಪಾತ್ರವರ್ಗದ (Vikram Vedha Cast) ಬಗ್ಗೆ ಇಂಗ್ಲಿಷ್ನಲ್ಲಿ ಸರ್ಚ್ ಮಾಡಿದರೆ ಅದರಲ್ಲಿ ಅಣ್ಣಾವ್ರ ಹೆಸರು ಕಾಣಿಸಿಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ರಾಜ್ಕುಮಾರ್ ಅವರು ಹಾಫ್ ಬಾಯ್ಲ್ ಎಂಬ ಪಾತ್ರ ಮಾಡಿದ್ದಾರೆ ಎಂದು ತೋರಿಸುತ್ತಿದೆ. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣ ಆಗಿದೆ.
ಈ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಇದರ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡು, ಈ ಬಗ್ಗೆ ಎಲ್ಲರೂ ರಿಪೋರ್ಟ್ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ‘ಎಲ್ಲರಲ್ಲೂ ಒಂದು ಮನವಿ. ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜ್ಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ಅಂತ ನಮೂದಿಸಲಾಗಿದೆ. ದಯಮಾಡಿ ಅದನ್ನು ಗೂಗಲ್ಗೆ ರಿಪೋರ್ಟ್ ಮಾಡಿ. ತಪ್ಪು ಸರಿ ಹೋಗಲಿ’ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.
ರಿಷಬ್ ಅವರ ಮಾತಿಗೆ ಸ್ಪಂದಿಸಿರುವ ಅನೇಕರು ರಿಪೋರ್ಟ್ ಮಾಡಿದ್ದಾರೆ. ‘ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ರಿಪೋರ್ಟ್ ಮಾಡಿದ್ದೇವೆ’ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಾವು ರಿಪೋರ್ಟ್ ಮಾಡಿದ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಎಲ್ಲರಲ್ಲೂ ಒಂದು ಮನವಿ, ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ಅಂತ ನಮೂದಿಸಲಾಗಿದೆ, ದಯಮಾಡಿ ಅದನ್ನು ಗೂಗಲ್ ಗೆ report ಮಾಡಿ, ತಪ್ಪು ಸರಿ ಹೋಗಲಿ… pic.twitter.com/ah8p7Ish8H
— Rishab Shetty (@shetty_rishab) June 21, 2021
2017ರಲ್ಲಿ ತೆರೆಕಂಡ ತಮಿಳಿನ ‘ವಿಕ್ರಂ ವೇದ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮುಖ್ಯ ಪಾತ್ರದಲ್ಲಿ ವಿಜಯ್ ಸೇತುಪತಿ ಮತ್ತು ಆರ್. ಮಾಧವನ್ ನಟಿಸಿದ್ದರು. ಕನ್ನಡದ ಕಲಾವಿದರಾದ ಅಚ್ಯುತ್ ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ಕೂಡ ಅಭಿನಯಿಸಿದ್ದರು.
ಇದನ್ನೂ ಓದಿ:
Kannada Language: ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು
ಕನ್ನಡಕ್ಕೆ ಅನ್ಯಾಯ ಆಗುತ್ತಿರುವ ಬಗ್ಗೆ ಸದನದಲ್ಲಿ ಮಾತನಾಡುವವರೇ ಇಲ್ಲವಾಗಿದ್ದಾರೆ: ವಾಟಾಳ್ ನಾಗರಾಜ್
Published On - 9:56 am, Tue, 22 June 21