AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nikhil Kumarswamy: ಕುಮಾರಸ್ವಾಮಿ ಕುಟುಂಬದಿಂದ ಸಿಹಿ ಸುದ್ದಿ; ಶೀಘ್ರವೇ ತಂದೆ ಆಗಲಿದ್ದಾರೆ ನಿಖಿಲ್​ ​

ರೇವತಿ ಐದು ತಿಂಗಳು ಗರ್ಭಿಣಿ. ರೇವತಿ ಜನ್ಮದಿನದಂದು ಈ ವಿಚಾರ ಹೊರ ಬಿದ್ದಿರುವ ಬಗ್ಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂಭ್ರಮಿಸುತ್ತಿದ್ದಾರೆ.

Nikhil Kumarswamy: ಕುಮಾರಸ್ವಾಮಿ ಕುಟುಂಬದಿಂದ ಸಿಹಿ ಸುದ್ದಿ; ಶೀಘ್ರವೇ ತಂದೆ ಆಗಲಿದ್ದಾರೆ ನಿಖಿಲ್​ ​
ನಿಖಿಲ್​-ರೇವತಿ ದಂಪತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 21, 2021 | 6:12 PM

ನಿಖಿಲ್​ ಕುಮಾರಸ್ವಾಮಿ ಕಳೆದ ವರ್ಷ ರೇವತಿ ಅವರನ್ನು ವರಿಸಿದ್ದರು. ಈಗ ಈ ಜೋಡಿ ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿದೆ. ಅರ್ಥಾತ್​, ನಿಖಿಲ್​ ಕುಮಾರಸ್ವಾಮಿ​ ಶೀಘ್ರವೇ ತಂದೆ ಆಗಲಿದ್ದಾರೆ. ರೇವತಿ ಜನ್ಮದಿನದಂದೇ ಈ ಸುದ್ದಿ ಹೊರಬಿದ್ದಿದೆ.

ನಿಖಿಲ್​ ಹಾಗೂ ರೇವತಿ ಕಳೆದ ವರ್ಷ ಅದ್ದೂರಿಯಾಗಿ ಮದುವೆ ಆಗಲು ನಿರ್ಧರಿಸಿದ್ದರು. ಮಂಡ್ಯದಲ್ಲಿ ಸಾವಿರಾರು ಜನರಿಗೆ ಊಟ ಹಾಕೋಕೆ ಸಿದ್ಧತೆ ನಡೆದಿತ್ತು. ಆದರೆ, ಆಗ ಕೊರೊನಾ ವೈರಸ್​ ಕಾಣಿಸಿಕೊಂಡಿತ್ತು. ಹೀಗಾಗಿ, ಮದುವೆ ಸಮಾರಂಭ ಸಿಂಪಲ್​ ಆಗಿ ನಡೆದಿತ್ತು. ಕುಟುಂಬದವರ ಸಮ್ಮುಖದಲ್ಲಿ ನಿಖಿಲ್​ ಹಾಗೂ ರೇವತಿ ಮದುವೆ ಆದರು. ಈಗ ನಿಖಿಲ್​ ತಂದೆ ಆಗುತ್ತಿದ್ದಾರೆ.

ರೇವತಿ ಐದು ತಿಂಗಳು ಗರ್ಭಿಣಿ. ರೇವತಿ ಜನ್ಮದಿನದಂದು ಈ ವಿಚಾರ ಹೊರ ಬಿದ್ದಿರುವ ಬಗ್ಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂಭ್ರಮಿಸುತ್ತಿದ್ದಾರೆ. ಇನ್ನು, ನಾಲ್ಕು ತಿಂಗಳಲ್ಲಿ ನಿಖಿಲ್​ ತಂದೆ ಆಗಲಿದ್ದಾರೆ.

ನಿಖಿಲ್​ ಕುಮಾರಸ್ವಾಮಿ ರೈಡರ್​ ಸಿನಿಮಾದ ಶೂಟಿಂಗ್​ಗಾಗಿ ಕೆಲ ತಿಂಗಳ ಹಿಂದೆ ಲೇಹ್​-ಲಡಾಕ್​ಗೆ ತೆರಳಿದ್ದರು. ಈಗ ಅವರು ಪರೀಕ್ಷೆಗೆ ಒಳಗಾಗಿದ್ದು ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ‘ನಾನು ಇಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು ಪ್ರಾಥಮಿಕ ವರದಿ ಪಾಸಿಟಿವ್ ಬಂದಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಿ’ ಎಂದು ಮನವಿ ಮಾಡಿಕೊಂಡಿದ್ದರು. ನಂತರ ನಿಖಿಲ್​ ಗುಣಮುಖರಾಗಿದ್ದರು.

ನಿಖಿಲ್​ ರೈಡರ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.  ‘ಸೀತಾರಾಮ ಕಲ್ಯಾಣ’ ಚಿತ್ರದ ನಂತರ ಅವರ ನಟನೆಯ ಬೇರೆ ಯಾವುದೇ ಸಿನಿಮಾಗಳು ತೆರೆಕಂಡಿಲ್ಲ.

ಇದನ್ನೂ ಓದಿ: Nikhil & Revathi Nikhil Kumaraswamy : ನಟ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಇದೀಗ 5 ತಿಂಗಳ ಗರ್ಭಿಣಿ

Published On - 6:05 pm, Mon, 21 June 21