​ಸಂಚಾರಿ ವಿಜಯ್​ ಬಗ್ಗೆ ಸುಳ್ಳುಗಳ ಸರಮಾಲೆ? ತಪ್ಪು ಮಾಹಿತಿ ಹಬ್ಬಿಸುವವರಿಗೆ ಲಿಂಗದೇವರು ಧಿಕ್ಕಾರ

BS Lingadevaru: ‘ಜಾತಿ ವ್ಯವಸ್ಥೆಯನ್ನು ಸರಕನ್ನಾಗಿಸಿಕೊಂಡು, ಒಡೆದು ಆಳುವ ನೀತಿಗೆ ಪುಷ್ಟಿ ಕೊಟ್ಟಿರುವ ಲೇಖನಕ್ಕೆ ನನ್ನ ದಿಕ್ಕಾರ’ ಎಂದು ನಿರ್ದೇಶಕ ಬಿ.ಎಸ್​. ಲಿಂಗದೇವರು ಕಿಡಿಕಾರಿದ್ದಾರೆ. ಅವರು ಸಂಚಾರಿ ವಿಜಯ್​ ಜೊತೆ ಆಪ್ತ ಒಡನಾಟ ಹೊಂದಿದ್ದರು.

​ಸಂಚಾರಿ ವಿಜಯ್​ ಬಗ್ಗೆ ಸುಳ್ಳುಗಳ ಸರಮಾಲೆ? ತಪ್ಪು ಮಾಹಿತಿ ಹಬ್ಬಿಸುವವರಿಗೆ ಲಿಂಗದೇವರು ಧಿಕ್ಕಾರ
ಸಂಚಾರಿ ವಿಜಯ್​
Follow us
TV9 Web
| Updated By: ಮದನ್​ ಕುಮಾರ್​

Updated on:Jun 22, 2021 | 1:12 PM

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸಂಚಾರಿ ವಿಜಯ್​ ಅವರು ನಿಧನರಾಗಿದ್ದು ನಿಜಕ್ಕೂ ನೋವಿನ ಸಂಗತಿ. ಒಬ್ಬ ಅದ್ಭುತ ಕಲಾವಿದನನ್ನು ಕಳೆದುಕೊಂಡು ಸ್ಯಾಂಡಲ್​ವುಡ್​ ಬಡವಾಗಿದೆ. ಈ ನೋವಿನ ನಡುವಲ್ಲೇ ಸಂಚಾರಿ ವಿಜಯ್​ ಬಗ್ಗೆ ಹಲವು ಮಾಹಿತಿಗಳು ಹರಿದಾಡುತ್ತಿವೆ. ಅದರ ಸತ್ಯಾಸತ್ಯತೆ ಬಗ್ಗೆ ಈಗ ಪ್ರಶ್ನೆ ಉದ್ಭವ ಆಗಿದೆ. ಈ ಕುರಿತು ‘ನಾನು ಅವನಲ್ಲ ಅವಳು’ ಸಿನಿಮಾದ ನಿರ್ದೇಶಕ ಬಿ.ಎಸ್​. ಲಿಂಗದೇವರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಚಾರಿ ವಿಜಯ್​ ಬಗ್ಗೆ ಸುಳ್ಳುಗಳ ಸರಮಾಲೆ ಹೊಸೆದವರಿಗೆ ಅವರು ತಿರುಗೇಟು ನೀಡಿದ್ದಾರೆ.

ಸಂಚಾರಿ ವಿಜಯ್​ ನಿಧನದ ನಂತರ ಕೆಲವು ಲೇಖನಗಳು ವೈರಲ್​ ಆದವು. ಅದರಲ್ಲಿ ವಿಜಯ್​ಗೆ ಅವಕಾಶಗಳ ಕೊರತೆ ಇತ್ತು, ಆರ್ಥಿಕ ಸಂಕಷ್ಟ ಇತ್ತು, ಜಾತಿಯಿಂದ ಅವಮಾನ ಆಗಿತ್ತು ಎಂಬಿತ್ಯಾದಿ ವಿವರಗಳು ಇದ್ದವು. ಸಂಚಾರಿ ವಿಜಯ್​ಗೆ ಆಪ್ತರು ಎಂದು ಹೇಳಿಕೊಂಡ ಕೆಲವು ನಟರು ಕೂಡ ಇದೇ ರೀತಿ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಬಿ.ಎಸ್​. ಲಿಂಗದೇವರು ಪ್ರತಿಕ್ರಿಯಿಸಿದ್ದಾರೆ.

‘ಅನಿರೀಕ್ಷಿತ ಘಟನೆಯಿಂದ ಒಬ್ಬ ವ್ಯಕ್ತಿ ಸತ್ತಾಗ ಆ ವ್ಯಕ್ತಿಯ ತಂದೆ-ತಾಯಿಯ ಪೂರ್ವಾಪರಗಳನ್ನು ಕೆದಕಿ, ಬದುಕಿ ಉಳಿದವರ ಬದುಕನ್ನೇ ಪ್ರಶ್ನೆ ಮಾಡುವ ನೀವು ಮನುಷ್ಯರೇ? ತನ್ನ ತಂದೆ ತಾಯಿಯವರು ನಮಗಿಂತಲೂ ಕಷ್ಟ, ಚಿಂತೆ, ಹತಾಶೆಗಳನ್ನು ಅನುಭವಿಸಿದ್ದರೂ ಕೂಡ ಅದನ್ನು ಮೀರಿ ಸಮಾಜದಲ್ಲಿ ಮತ್ತು ನಾನು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ನನ್ನ ಅಸ್ಮಿತೆಗಾಗಿ ಹುಡುಕುತ್ತಿರುತ್ತೇನೆ. ಈ ಸಮಾಜ ಎಷ್ಟೊಂದು ನಾಗರಿಕ, ಸ್ವಸ್ಥ, ಜೀವಪರ ಎಂದೆಲ್ಲ ಹೇಳುವ ಜನಗಳೇ ಅನಾಗರಿಕ, ಅಸ್ವಸ್ಥ ಮತ್ತು ಜೀವ ವಿರೋಧಿ ಲೇಖನವನ್ನು ಬರೆದು, ಬೇರೆಯವರ ಮನೆಗೆ ಬೆಂಕಿ ಬಿದ್ದಾಗ ಇವರು ಚಳಿ ಕಾಯಿಸುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಮತ್ತು ಸಾವಿನಲ್ಲೂ ಸಾರ್ಥಕತೆ ಮೆರೆದ ಸುಸಂಸ್ಕೃತ ಕುಟುಂಬವನ್ನು ಅಂಗಡಿಗಳಲ್ಲಿ ಬಿಕರಿಯಾಗುವ ಸರಕನ್ನಾಗಿಸಿ, ಧರ್ಮ ಮತ್ತು ಜಾತಿಗಳನ್ನು ತಳಕು ಮಾಡಿಕೊಂಡು ರಾಡಿ ಮಾಡುತ್ತಿದ್ದಾರೆ’ ಎಂದು ಲಿಂಗದೇವರು ಹೇಳಿದ್ದಾರೆ.

‘ಮೇಲ್ನೋಟಕ್ಕೆ ಜಾತಿ ಸಂಘರ್ಷದ ಬಗ್ಗೆ ತಿಳಿಸುವ ಆಶಯದಿಂದ ಕೂಡಿದೆ ಅನಿಸುತ್ತದೆ. ಆದರೆ ಆ ನೆಪದಲ್ಲಿ ಜಾತಿ ಸಂಘರ್ಷವನ್ನು ಬಿತ್ತಲು ಹೊರಟಿದೆ. ಸಾವನ್ನು ಬಳಸಿ ಜಾತಿ ಜಗಳ ಹುಟ್ಟುಹಾಕಲು ಹೊರಟ ನಿಮ್ಮಂತವರ ಬಗ್ಗೆ ಹೇಸಿಗೆಯಾಗುತ್ತದೆ. ಮನುಷ್ಯತ್ವವನ್ನು ಮೈಗೂಡಿಸಿಕೊಂಡಿದ್ದ ವಿಜಯ್ ಒಬ್ಬ ಶ್ರೇಷ್ಠ ಕಲಾವಿದ‌ ಮಾತ್ರವಲ್ಲ ಅವರ ಇಡೀ ಕುಟುಂಬವೇ ನಮಗೆಲ್ಲ ಮಾದರಿಯಾಗಿರುವ ಈ ಸಂದರ್ಭದಲ್ಲಿ ಗತಿಸಿರುವ ತಂದೆ-ತಾಯಿಗಳು ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ಊಹಿಸಲು ಅಸಾಧ್ಯ’ ಎಂದಿದ್ದಾರೆ ಲಿಂಗದೇವರು.

‘ಇನ್ನೂ ಕೆಲವರ ಸುಳ್ಳುಗಳ ಸರಮಾಲೆಯ ಲೇಖನದ ಶೈಲಿಗೆ ಮಾರುಹೋಗಿ ಅದೇ ಸತ್ಯ ಎಂದು ವಾದಿಸುತ್ತಿದ್ದಾರೆ. ವಿಜಯ್ ಅವರಿಗೆ ಅವಕಾಶಗಳೇ ಇರಲಿಲ್ಲ ಎಂದು ಭಾವಿಸಿದ್ದಾರೆ. ಅಂತಹವರಿಗೆ ನಾನು ಹೇಳೋದು ಇಷ್ಟೇ, ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ಬಂದ ನಂತರ ಸುಮಾರು 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಒಂದು ಮಲಯಾಳಂ ಸಿನಿಮಾ ಕೂಡ ಚಿತ್ರೀಕರಣ ಮುಗಿದಿದೆ. 2014ಕ್ಕೂ ಮುಂಚೆ ಸುಮಾರು 9 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅವುಗಳಲ್ಲಿ ನಾನು ಅವನಲ್ಲ ಅವಳು ಮತ್ತು ಹರಿವು ಕೂಡ ಸೇರಿದೆ. ಒಟ್ಟು 33ಕ್ಕೂ ಹೆಚ್ಚು ಸಿನಿಮಾ ಪಯಣ ವಿಜಯ್ ಅವರದ್ದು’ ಎಂದು ಲಿಂಗದೇವರು ಹೇಳಿದ್ದಾರೆ.

‘ಕಲಾವಿದನಾದ ವಿಜಯ್ ಇದಕ್ಕಿಂತ ಹೆಚ್ಚು ಅವಕಾಶ ಬಯಸಲಿಲ್ಲ, ಅವನಿಗೆ ಇದ್ದ ಕೊರಗು ಒಂದೇ ಒಂದು. ಅದು, ನನ್ನಲ್ಲಿರುವ ಕಲೆಗೆ ಸರಿಯಾದ ಪಾತ್ರಗಳು ಸಿಗುತ್ತಿಲ್ಲ ಎಂಬುದಾಗಿತ್ತು. ಇದು 99% ಕಲಾವಿದರ ಕೊರಗು ಕೂಡ. ಪ್ರತಿಯೊಂದು ಸಿನಿಮಾವೂ ಪ್ರಶಸ್ತಿ ತರುವುದಿಲ್ಲ ಮತ್ತು ಪ್ರತಿ ಸಿನಿಮಾಗೂ ಯಶಸ್ಸು ಕೂಡ ಸಿಗಲ್ಲ ಎನ್ನುವ ಸತ್ಯ ಅರಿತಿದ್ದ ವಿಜಯ್, ತನ್ನ ಇತಿ ಮಿತಿಯೊಳಗೆ ಇದ್ದಷ್ಟು ದಿನ ನಾಲ್ಕು ಜನರಿಗೆ ಮಾದರಿಯಾಗಿ ಬದುಕಿದ್ದಾನೆ. ಅಂತಹ‌ ಮಾನವತಾವಾದಿಯನ್ನು ತಮ್ಮ ಸಂಕುಚಿತ ಮನೋಭಾವ ದಿಂದ ನೋಡಬೇಡಿ’ ಎಂದು ಲಿಂಗದೇವರು ತಿರುಗೇಟು ನೀಡಿದ್ದಾರೆ.

‘ಕೆಲ ನಟ-ನಟಿಯರು ವಿಜಯ್​ಗೆ ನಾನು ತುಂಬಾ ಹತ್ತಿರ ಇದ್ದೆ, ನನಗೆ ಅದು ಗೊತ್ತು, ಇದು ಗೊತ್ತು. ಅವನು ಅನುಭವಿಸಿದ ಅವಮಾನವೆಲ್ಲಾ ಗೊತ್ತು ಎಂದು ಬಾಯಿ ಬಡ್ಕೋಬೇಡಿ. ವಿಜಯ್ ಆತ್ಮೀಯರು ಮತ್ತು ಬಂದು ಬಳಗ ಇನ್ನೂ ಬದುಕಿದ್ದಾರೆ. ಯಾರು ಹತ್ತಿರ ಇದ್ದವರು? ಯಾರು ಕಷ್ಟದಲ್ಲಿ ಆದವರು? ಎಲ್ಲವೂ ಗೊತ್ತಿದೆ’ ಎಂದು ಲಿಂಗದೇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಿಜಯ್ ಕನ್ನಡಿಗರ ಮನೆ ಮನೆಗಳಲ್ಲಿ ಶಾಶ್ವತವಾಗಿ ಇದ್ದಾನೆ ಎನ್ನುವುದಕ್ಕೆ ನಾನು ಅವನಲ್ಲ ಅವಳು ಚಿತ್ರ ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಕೇವಲ ನಾಲ್ಕು ದಿನಕ್ಕೆ ಸುಮಾರು 17 ಲಕ್ಷ ಜನ ನೋಡಿದ್ದಾರೆ. ಇದು ಅಧಿಕೃತವಾಗಿ ಸಿರಿ ಕನ್ನಡ ಚಾನಲ್​ನವರ ಯೂಟ್ಯೂಬ್​ನಲ್ಲಿನ ಸಂಖ್ಯೆ. ಅನಧಿಕೃತವಾಗಿ ಅಪ್ಲೋಡ್ ಆಗಿದ್ದ ಲಿಂಕ್ ಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಕಳೆದ ಒಂದು ವಾರದಲ್ಲಿ ನೋಡಿದ್ದಾರೆ. ವೀಕ್ಷಕರ ಸಂಖ್ಯೆಯನ್ನು ನೋಡಿ ಈಗ ಹೇಗೆ ಪ್ರತಿಕ್ರಿಯಿಸಬೇಕು ಅಂತಲೇ ತಿಳಿಯುತ್ತಿಲ್ಲ. ಸಿನಿಮಾ ನೋಡಿದ ಎಲ್ಲರೂ ವಿಜಯ್ ಮೇಲಿಟ್ಟ ಅಭಿಮಾನವನ್ನು ತೋರಿಸುತ್ತದೆ. ಒಂದು ವೇಳೆ ಈಗ ವಿಜಯ್ ಇದ್ದಿದ್ದರೆ ಎಂದು ಒಂದು ಕ್ಷಣ ಅನ್ನಿಸುತ್ತದೆ. ಒಬ್ಬ ನಿರ್ದೇಶಕನಾಗಿ ನನಗೆ ನಾನು ಅವನಲ್ಲ ಅವಳು ಸಿನಿಮಾ ಮುಖ್ಯ. ಅದೇ ವೇಳೆ ವಿಜಯ್ ನಟಿಸಿರದಿದ್ದರೆ ಆ ಸಿನಿಮಾ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿತ್ತು ಎಂದು ಊಹಿಸುವುದು ಕೂಡ ಕಷ್ಟವಾಗುತ್ತದೆ. ನನಗೆ ಈಗಲೂ ಅನ್ನಿಸುವುದು ಒಂದೇ, ವಿಜಯ್ ನಮ್ಮ ಜೊತೆ ಇರಬೇಕಿತ್ತು’ ಎಂದಿದ್ದಾರೆ ಲಿಂಗದೇವರು.

‘ಜಾತಿ ವ್ಯವಸ್ಥೆಯನ್ನು ಸರಕನ್ನಾಗಿಸಿಕೊಂಡು, ಒಡೆದು ಆಳುವ ನೀತಿಗೆ ಪುಷ್ಟಿ ಕೊಟ್ಟಿರುವ ಲೇಖನಕ್ಕೆ ನನ್ನ ಧಿಕ್ಕಾರ’ ಎಂದಿರುವ ಲಿಂಗದೇವರು ಅವರು ಸಂಚಾರಿ ವಿಜಯ್​ ಜೊತೆ ಆಪ್ತ ಒಡನಾಟ ಹೊಂದಿದ್ದರು.

ಇದನ್ನೂ ಓದಿ:

ನಿಧನರಾದ ಮೇಲೂ ಸಂಚಾರಿ ವಿಜಯ್​ಗೆ ಅಗೌರವ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಡವಟ್ಟು

Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ

Published On - 12:55 pm, Tue, 22 June 21

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್