ಗೂಗಲ್ನಿಂದ ಮತ್ತೊಂದು ಎಡವಟ್ಟು; ತಮಿಳು ಚಿತ್ರದಲ್ಲಿ ರಾಜ್ಕುಮಾರ್ ಹೆಸರು
ಗೂಗಲ್ನಲ್ಲಿ Vikram Vedha Cast ಎಂದು ಸರ್ಚ್ ಮಾಡಿದರೆ ವಿಜಯ್ ಸೇತುಪತಿ, ಆರ್. ಮಾಧವನ್, ಶ್ರದ್ಧಾ ಶ್ರೀನಾಥ್ ಜತೆಗೆ ರಾಜ್ಕುಮಾರ್ ಹೆಸರು ಕೂಡ ತೋರಿಸುತ್ತಿದೆ.
Ugliest Language of India ಎಂದು ಸರ್ಚ್ ಮಾಡಿದರೆ ಕನ್ನಡ ಎಂದು ಬರುತ್ತಿತ್ತು. ಈ ಬಗ್ಗೆ ಕನ್ನಡಿಗರು ಸಿಟ್ಟಿಗೆದ್ದು, ದೊಡ್ಡ ಆಂದೋಲನವನ್ನೇ ನಡೆಸಿದರು. ಪರಿಣಾಮ ಗೂಗಲ್ ಈ ತಪ್ಪನ್ನು ಸರಿಪಡಿಸಿಕೊಂಡಿತ್ತು. ಅಲ್ಲದೆ, ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿತ್ತು. ಈಗ ಗೂಗಲ್ ಮತ್ತೊಂದು ಅಂಥದ್ದೇ ಎಡವಟ್ಟು ಮಾಡಿದ್ದು, ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹೌದು, ಡಾ. ರಾಜ್ಕುಮಾರ್ ವಿಚಾರದಲ್ಲಿ ಗೂಗಲ್ ಎಡವಟ್ಟೊಂದನ್ನು ಮಾಡಿಕೊಂಡಿದೆ. ವಿಜಯ್ ಸೇತುಪತಿ ನಟಿಸಿದ ‘ವಿಕ್ರಮ್ ವೇದ’ ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ರಾಜ್ಕುಮಾರ್ ನಟಿಸಿದ್ದಾರೆ ಎಂದು ಗೂಗಲ್ ಹೇಳುತ್ತಿದೆ. ಪುಷ್ಕರ್-ಗಾಯತ್ರಿ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಚಿತ್ರ ವಿಜಯ್ ಸೇತುಪತಿ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿತ್ತು. ಈ ಚಿತ್ರದಲ್ಲಿ ರಾಜ್ಕುಮಾರ್ ನಟಿಸಿದ್ದಾರೆ ಎಂದು ಗೂಗಲ್ ಹೇಳುತ್ತಿದೆ. ಈ ಎಡವಟ್ಟಿಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಗೂಗಲ್ನಲ್ಲಿ Vikram Vedha Cast ಎಂದು ಸರ್ಚ್ ಮಾಡಿದರೆ ವಿಜಯ್ ಸೇತುಪತಿ, ಆರ್. ಮಾಧವನ್, ಶ್ರದ್ಧಾ ಶ್ರೀನಾಥ್ ಜತೆಗೆ ರಾಜ್ಕುಮಾರ್ ಹೆಸರು ಕೂಡ ತೋರಿಸುತ್ತಿದೆ. ಹಾಫ್ ಬಾಯ್ಲ್ ಅನ್ನೋದು ಪಾತ್ರದ ಹೆಸರು. ಈ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಅಂದಹಾಗೆ, ವಿಕ್ರಮ್ ವೇದಾ ಸಿನಿಮಾದಲ್ಲಿ ಹಾಫ್ ಬಾಯ್ಲ್ ಎನ್ನುವ ಪಾತ್ರವನ್ನು ರಾಜ್ಕುಮಾರ್ ಹೆಸರಿನ ವ್ಯಕ್ತಿ ಮಾಡಿದ್ದಿರಬಹುದು. ಈ ಕಾರಣಕ್ಕೆ ಗೂಗಲ್ ತಪ್ಪಾಗಿ ಅರ್ಥೈಸಿಕೊಂಡು ವರನಟ ರಾಜ್ಕುಮಾರ್ ಹೆಸರು ತೋರಿಸುತ್ತಿದೆ ಎನ್ನಲಾಗುತ್ತಿದೆ.
Ugliest Language of India ಎಂದು ಸರ್ಚ್ ಮಾಡಿದರೆ ಕನ್ನಡ ಎಂದು ಪ್ರದರ್ಶಿಸುತ್ತಿದ್ದ ಬಗ್ಗೆ ಅಪಾರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗೂಗಲ್ ಈ ಬಗ್ಗೆ ಕ್ಷಮೆ ಯಾಚಿಸಿತ್ತು. ‘ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್ನೆಟ್ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತದೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ನಾವು ಕ್ಷಿಪ್ರವಾಗಿ ಕ್ರಮ ಕೈಗೊಳ್ಳುತ್ತೇವೆ. ಮತ್ತು ನಮ್ಮ ಅಲ್ಗೋರಿಧಂ ಅನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿರುವುದನ್ನು ಮುಂದುವರೆಸುತ್ತೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದಕ್ಕೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ’ ಎಂದು ಗೂಗಲ್ ಹೇಳಿತ್ತು.
Ugliest Language of India: ಕನ್ನಡಿಗರ ಕ್ಷಮೆ ಕೇಳಿದ ಗೂಗಲ್; ಕನ್ನಡದಲ್ಲೇ ಟ್ವೀಟ್ ಮಾಡಿ ತಪ್ಪೊಪ್ಪಿಕೊಂಡ ಸಂಸ್ಥೆ