Updated on: Jun 21, 2021 | 4:09 PM
fathers day 2021 wishes ideas for father's day special
ಈ ವಿಶೇಷ ದಿನದಂದು ಯಶ್ ಮಕ್ಕಳ ಜತೆ ಇರುವ ಫೋಟೋ ಹಂಚಿಕೊಂಡಿರುವ ರಾಧಿಕಾ, ‘ಯಶ್ ಉತ್ತಮ ಬಾಯ್ಫ್ರೆಂಡ್, ಅದಕ್ಕಿಂತ ಹೆಚ್ಚಾಗಿ ಉತ್ತಮ ಗಂಡ ಕೂಡ ಹೌದು. ಆದರೆ, ಯಶ್ ಬೆಸ್ಟ್ ವರ್ಷನ್ ಕಂಡಿದ್ದು ತಂದೆಯಾಗಿ. ಲವ್ ಯು. ಅದ್ಭುತ ತಂದೆಯರಿಗೆ ಫಾದರ್ಸ್ ಡೇ ಶುಭಾಶಯಗಳು’ ಎಂದಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೆ, ಅವರು ತಂದೆಯನ್ನು ನೆಪಿಸಿಕೊಳ್ಳೋಕೆ ಮರೆತಿಲ್ಲ.
ಜೀವನದಲ್ಲಿ ಗುರಿ ಇಲ್ಲದೆ ಬದುಕಬಾರದು ಎಂದು ಹೇಳಿಕೊಟ್ಟ ನನ್ನ ತಂದೆಗೆ ಹ್ಯಾಪಿ ಫಾದರ್ಸ್ ಡೇ ಹಾಗೂ ಎಲ್ಲ ತಂದೆಯರಿಗೂ, ತಂದೆಯಂದಿರ ದಿನಾಚರಣೆಯ ಶುಭಾಶಯಗಳು ಎಂದು ಸೃಜನ್ ಬರೆದುಕೊಂಡಿದ್ದಾರೆ.
ನಟಿ ಅದ್ವಿತಿ ಶೆಟ್ಟಿ ಕೂಡ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯದ ಫೋಟೋ ಹಂಚಿಕೊಂಡು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ ಅನನ್ಯಾ ಪಾಂಡೆ ಹಂಚಿಕೊಂಡ ಫೋಟೋ.
ನಟ ರಣಬೀರ್ ಕಪೂರ್ ಕೂಡ ತಂದೆಯನ್ನು ನೆನೆದಿದ್ದಾರೆ,
ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಸೋನು ಸೂದ್ ತಂದೆಯನ್ನು ನೆನಪು ಮಾಡಿಕೊಂಡಿದ್ದಾರೆ. ‘ಅಪ್ಪ ನೀವು ನಮ್ಮೊಂದಿಗಿಲ್ಲ. ಆದರೆ, ನಿಮ್ಮ ಫೇವರಿಟ್ ಸ್ಕೂಟರ್ ನನಗೆ ಅತಿ ಹೆಚ್ಚು ಬೆಲೆಬಾಳುವ ವಸ್ತು’ ಎಂದಿದ್ದಾರೆ.
ಸುಧಾರಾಣಿ ತಂದೆ ಈ ವರ್ಷದ ಆರಂಭದಲ್ಲಿ ಮೃತಪಟ್ಟಿದ್ದರು. ತಂದೆ ಇಲ್ಲದೆ ಅವರು ಮೊದಲ ಫಾದರ್ಸ್ ಡೇ ಆಚರಿಸಿಕೊಂಡಿದ್ದಾರೆ.