AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಇಲ್ಲಿ ಮಳೆಯಲ್ಲಿ‌ ನೆನೆದೇ ಆನ್​ಲೈನ್ ಕ್ಲಾಸಿಗೆ ಕೂರಬೇಕು; ಮಗಳ ರಕ್ಷಣೆಗೆ ಸ್ವತಃ ಕೊಡೆ ಹಿಡಿದು ನಿಂತ ಅಪ್ಪ

ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳೂ ಸಹ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಅವರಲ್ಲಿ ಯಾವ ಕಾರಣಕ್ಕೂ ಶಿಕ್ಷಣದ ಮೇಲಿನ ಒಲವು ಕಡಿಮೆಯಾಗಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Viral Photo: ಇಲ್ಲಿ ಮಳೆಯಲ್ಲಿ‌ ನೆನೆದೇ ಆನ್​ಲೈನ್ ಕ್ಲಾಸಿಗೆ ಕೂರಬೇಕು; ಮಗಳ ರಕ್ಷಣೆಗೆ ಸ್ವತಃ ಕೊಡೆ ಹಿಡಿದು ನಿಂತ ಅಪ್ಪ
ಮಳೆಯಲ್ಲಿ‌ ನೆನೆದೇ ಆನ್​ಲೈನ್ ಕ್ಲಾಸಿಗೆ ಕೂರಬೇಕು!
TV9 Web
| Edited By: |

Updated on:Jun 22, 2021 | 4:04 PM

Share

ಕೊರೊನಾ ವೈರಸ್​ ಸಾಂಕ್ರಾಮಿಕದಿಂದಾಗಿ ಆನ್​ಲೈನ್​ ಕ್ಲಾಸ್​ಗಳು ನಡೆಯುತ್ತಿವೆ. ನೆಟ್​ವರ್ಕ್​ ಹುಡುಕುತ್ತಾ ಅಲ್ಲೆಲ್ಲೋ ದೂದರ ಬೆಟ್ಟವೇರಿ ಸಿಗ್ನಲ್​ಗಾಗಿ ಪರದಾಡುವ ಪರಿಸ್ಥಿತಿ ಅದೆಷ್ಟೋ ವಿದ್ಯಾರ್ಥಿಗಳದ್ದು.. ಅದರಲ್ಲಿಯೂ ಮಳೆಯ ಆರ್ಭಟ ಜೋರಾಗಿಯೇ ಇರುವುದರರಿಂದ ಸಿಗ್ನಲ್​ ಹುಡುಕುತ್ತಾ ಅದೆಷ್ಟೋ ದೂರ ಕ್ರಮಿಸಿ ಶಾಲಾಭ್ಯಾಸ ಮಾಡುತ್ತಿದ್ದಾರೆ. ಭಾರೀ ಮಳೆಯಲ್ಲಿ ರಸ್ತೆಯ ಅಂಚಿನಲ್ಲಿ ಕೂತು ಪಾಠ ಕೇಳುತ್ತಿರುವ ವಿದ್ಯಾರ್ಥಿಯ ಫೋಟೋವೊಂದು ವೈರಲ್​ ಆಗಿದೆ. ಈ ಮಧ್ಯೆ, ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ವಿದ್ಯಾರ್ಥಿಯ ತಂದೆ ಕೊಡೆ ಹಿಡಿದು ಮಗಳನ್ನು ಮಳೆಯಿಂದ ರಕ್ಷಿಸುತ್ತಿರುವ ಫೋಟೋ ಮನಕಲಕುವಂತಿದೆ.

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ವಿದ್ಯಾರ್ಥಿಯ ಮನೆಯಲ್ಲಿ ಸಿಗ್ನಲ್​ ಕೊರತೆ ಇರುವ ಕಾರಣ ಅವಳು ರಸ್ತೆಯಂಚಿನಲ್ಲಿ ಕೂತು ಪಾಠ ಕೇಳುವ ಪರಿಸ್ಥಿತಿ ಇದೆ. ಹಳ್ಳಿಯನ್ನು ಬಿಟ್ಟು ನೆಟ್​ವರ್ಕ್​ಗಾಗಿ ಅದೆಷ್ಟೋ ದೂರ ಬಂದು ಅಭ್ಯಾಸ ಕಲಿಯಬೇಕಿದೆ. ಆರ್ಭಟಿಸುತ್ತಿರುವ ಮಳೆಯಲ್ಲಿಯೂ ಆಕೆ ಶ್ರದ್ಧೆಯಿಂದ ಪಾಠ ಕೇಳುತ್ತಿರುವುದು ಜತೆಗೆ ಮಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ತಂದೆ ಕೊಡೆ ಹಿಡಿದು ನಿಂತಿರುವ ಫೋಟೋ ವೈರಲ್​ ಆಗಿದೆ.

ನಾನು ಬಿಎ ಪದವಿ ಓದುತ್ತಿದ್ದೇನೆ. ನನ್ನ ಊರಿನಲ್ಲಿ ನೆಟ್​ವರ್ಕ್​ ಸಿಗುವುದಿಲ್ಲ. ಇಂಟರ್​ನೆಟ್​ ಇಲ್ಲದೇ ಕಷ್ಟವಾಗುತ್ತಿದೆ. ಜತೆಗೆ ವಿದ್ಯಾಭ್ಯಾಸಕ್ಕಾಗಿ ಆನ್​ಲೈನ್​ ತರಗತಿಗಳನ್ನು ಪಡೆಯಲೇಬೇಕಾಗಿದೆ. ಕೊರೊನಾ ವೈರಸ್​ ಪ್ರಾರಂಭವಾದಾಗಿನಿಂದ 30-40 ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪಾಠ ಕೇಳುತ್ತಾರೆ ಎಂದು ವಿದ್ಯಾರ್ಥಿನಿ ಅಭಿಪ್ರಾಯ ಹಂಚಿಕೊಂಡಿದ್ದಾಳೆ.

ಮಳೆಗಾಲದಲ್ಲಿಯೂ ಸಹ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೆ ಇಲ್ಲಿಗೆ ಬಂದು ಪಾಠ ಕೇಳುತ್ತೇವೆ. ನಂತರ ಊಟಕ್ಕೆ ಹೋಗಿ ಪುನಃ ಮತ್ತೆ ಬಂದು ಪಾಠ ಕೇಳುತ್ತೇವೆ. ಬೇರೆ ಎಲ್ಲೂ ನೆಟ್​ವರ್ಕ್ ಇಲ್ಲದ ಕಾರಣ ಈ ಜಾಗಕ್ಕೆ ಬಂದು ಪಾಠ ಕೆಳುತ್ತಿದ್ದೇವೆ ಎಂದು ಇಂಡಿಯಾ ಟುಡೇ ಸುದ್ದಿ ಮಾಧ್ಯಮದೊಡನೆ ವಿದ್ಯಾರ್ಥಿನಿ ಮಾಹಿತಿ ಹಂಚಿಕೊಂಡಿದ್ದಾರೆ.

ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳೂ ಸಹ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಅವರಲ್ಲಿ ಯಾವ ಕಾರಣಕ್ಕೂ ಶಿಕ್ಷಣದ ಮೇಲಿನ ಒಲವು ಕಡಿಮೆಯಾಗಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಮಳೆಗಾಲದಲ್ಲಿ ಮರಗಳು ಬೀಳುವುದನ್ನು ನಿಯಂತ್ರಿಸಲು ಮುಂಬೈನಲ್ಲಿ ವಿನೂತನ ಕ್ರಮ; ಟ್ರೀ ಸರ್ಜನ್​​ಗಳನ್ನು ನೇಮಕ ಮಾಡಿದ ಬಿಎಂಸಿ

ನಾಲ್ಕನೆಯ ದಿನವೂ ವರುಣನ ಅವಕೃಪೆ ಇದೆಯಾ? ಇನ್ನೂ 4 ದಿನ ಮಳೆಯಾಗುತ್ತದಾ? ಹೇಗಿದೆ ಸೌಥಾಂಪ್ಟನ್​ ಮಳೆ ಮೈದಾನ..?

Published On - 3:44 pm, Mon, 21 June 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ