AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗದ ಮೂಲಕ ದೇಶ-ವಿದೇಶಗಳಲ್ಲಿ ಮಿಂಚುತ್ತಿರುವ 12 ವರ್ಷದ ಜಾಹ್ನವಿ

ಇಂದು ಅಂತರಾಷ್ಟ್ರೀಯ ಯೋಗ ದಿನ. ಈ ದಿನ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 13 ವರ್ಷದ ಬಾಲಕಿ ಎಲ್ಲರ ಗಮನ ಸೆಳೆದಿದ್ದಾಳೆ. ಚಿಕ್ಕ ವಯಸ್ಸಿನಲ್ಲೆ ದೇಶ ವಿದೇಶಗಳಲ್ಲಿ ಕಮಾಲ್ ಮಾಡುವ ಮೂಲಕ ಸದಿಲ್ಲದೆ ಸಾಧನೆಯ ಶಿಖರವೇರಲು ಮುಂದಾಗಿದ್ದಾಳೆ.

ಯೋಗದ ಮೂಲಕ ದೇಶ-ವಿದೇಶಗಳಲ್ಲಿ ಮಿಂಚುತ್ತಿರುವ 12 ವರ್ಷದ ಜಾಹ್ನವಿ
ಜಾಹ್ನವಿ
TV9 Web
| Edited By: |

Updated on: Jun 21, 2021 | 3:19 PM

Share

ದೇವನಹಳ್ಳಿ: ಅಂತರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಮಾಡಲಾದ ಕಾರ್ಯಕ್ರಮದಲ್ಲಿ ನೀರು ಕುಡಿದಷ್ಟೆ ಸುಲಭವಾಗಿ ಮೈ ಕೈ ಕಾಲುಗಳನ್ನೆಲ್ಲ ಬೆಂಡ್ ಮಾಡಿ ಯೋಗ ಮೂಲಕ 13 ವರ್ಷದ ಬಾಲಕಿ ಜಾಹ್ನವಿ ಜನರ ಗಮನ ಸೆಳೆದಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಶಾಂತಿನಗರ ನಿವಾಸಿಯಾಗಿರೂ ಈ ಬಾಲಕಿ ಇದೀಗ 8 ನೇ ತರಗತಿ ವ್ಯಾಸಾಂಗ ಮಾಡ್ತಿದ್ದು ಈಕೆ 5 ವರ್ಷದವಳಾಗಿದ್ದಿನಿಂದ ಯೋಗಭ್ಯಾಸ ಶುರು ಮಾಡಿದ್ದಳಂತೆ. ಹೀಗಾಗಿ ಚಿಕ್ಕ ವಯಸ್ಸಿನಿಂದಲೆ ಯೋಗದಲ್ಲಿ ಸಾಕಷ್ಟು ಕಾಳಜಿ ವಹಿಸಿರೂ ಈ ಬಾಲಕಿ ಇದೀಗ 13 ವರ್ಷಕ್ಕೆ ರಾಜ್ಯ, ದೇಶದಲ್ಲಿ ನಡೆದ ಯೋಗ ಚಾಂಪಿಯನ್ ಶಿಪ್ಗಳಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದ ಏಷ್ಯನ್ ಚಾಂಪಿಯನ್ನ ಶಿಪ್ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದು ಬಂದಿದ್ದಾಳೆ. ಅಲ್ಲದೆ ಇದೀಗ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಾದ ಮೂಲಕ ಸಾಧನೆ ಮಾಡಲು ಮುಂದಾಗಿದ್ದು ಬಾಲಕಿಯ ಯೋಗಾಸನಗಳಿಗೆ ಸಾರ್ವಜನಿಕರು ಫಿದಾ ಆಗಿದ್ದಾರೆ.

world yoga day 2021

ಜಾಹ್ನವಿ

ಈಗಾಗಲೇ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಡೆದ 40ಕ್ಕೂ ಹೆಚ್ಚು ಯೋಗ ಚಾಂಪಿಯನ್ ಶಿಫ್ಗಳಲ್ಲಿ ಈ ಬಾಲಕಿ ಭಾಗವಹಿಸಿದ್ದು 25 ಕ್ಕೂ ಅಧಿಕ ಕಡೆ ಬಹುಮಾನ ಗೆದ್ದು ಬಂದಿದ್ದಾಳೆ. ಅಲ್ಲದೆ ಕಳೆದ ಭಾರಿ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಯೋಗಾ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ನಲ್ಲೂ ಭಾಗವಹಿಸಿ ಬೆಳ್ಳಿ ಪದಕ ಗೆದಿದ್ದು ಮುಂದಿನ ಭಾರಿ ಬಂಗಾರದ ಪದಕ ಗೆಲ್ಲುವ ಆಸೆ ಹೊಂದಿದ್ದಾಳೆ. ಅಲ್ಲದೆ ಕಷ್ಟಕರ ಆಸನಗಳಾದ ಗಂಡಬೇರುಂಡ ಆಸನ, ಸವಿಕ್ರಾಸನ, ವಿಪರೀತ ಶರವಾಸನ, ಕುಕುಟಾಸನ, ಪಿಂಚರುಕ್ಷಿಕಾಸನ, ಸೇರಿದಂತೆ ಸಾಕಷ್ಟು ಆಸನಗಳನ್ನ ಸಲೀಸಾಗಿ ಮಾಡುವ ಮೂಲಕ ಇತರರ ಗಮನ ಸೆಳೆದಿದ್ದಾಳೆ.

world yoga day 2021

ಇನ್ನೂ ಈಕೆಯ ಚಿಕ್ಕ ವಯಸಿನ ಸಾಧನೆಗೆ ಸ್ಥಳೀಯ ಯೋಗ ಗುರುಗಳು ಸೇರಿದಂತೆ ಸಾಕಷ್ಟು ಜನ ಸಾಥ್ ನೀಡಿದ್ದು ಮುಂದಿನ ಭಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿಸಲು ತಯಾರಿ ನಡೆಸುತ್ತಿದ್ದಾರೆ. ಒಟ್ಟಾರೆ ಚಿಕ್ಕವಯಸ್ಸಿನಲ್ಲಿ 13 ವರ್ಷದ ಬಾಲಕಿ ಯೋಗಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಹೊರಟಿದ್ದು ಕರುನಾಡಿನ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾರಲಿ ಅಂತ ಶುಭ ಹಾರೈಸೋಣ.

ಇದನ್ನೂ ಓದಿ; International Yoga Day 2021: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ M Yoga App ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ