ಮಳೆಗಾಲದಲ್ಲಿ ಮರಗಳು ಬೀಳುವುದನ್ನು ನಿಯಂತ್ರಿಸಲು ಮುಂಬೈನಲ್ಲಿ ವಿನೂತನ ಕ್ರಮ; ಟ್ರೀ ಸರ್ಜನ್ಗಳನ್ನು ನೇಮಕ ಮಾಡಿದ ಬಿಎಂಸಿ
ವಿಪರೀತ ಮಳೆ ಬೀಳುವ ಸಂದರ್ಭದಲ್ಲಿ ಅದೆಷ್ಟೋ ಮರಗಳ ಬೇರು, ಕಾಂಡಗಳು ಕೊಳೆಯುತ್ತವೆ. ಯಾವುದಾದರೂ ಫಂಗಸ್ ಸೋಂಕಿನಿಂದ ದುರ್ಬಲವಾಗುತ್ತವೆ. ಮರಗಳು ಮೇಲಿನಿಂದ ಚೆನ್ನಾಗಿಯೇ ಕಂಡರೂ ಒಳಗೆ ಯಾವುದಾದರೂ ಭಾಗದಲ್ಲಿ ದುರ್ಬಲವಾಗುವ ಸಾಧ್ಯತೆ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ.
ಮುಂಬೈ ನಗರದಾದ್ಯಂತ ಸಿಕ್ಕಾಪಟೆ ಮಳೆಯಾಗುತ್ತಿದೆ. ಗಾಳಿ-ಮಳೆಯಿಂದ ಹಳೇ ಹಳೇ ಮರಗಳೆಲ್ಲ ಬೀಳುತ್ತಿವೆ. ಹೀಗೆ ಹಳೇ ಹಳೇ ದೊಡ್ಡದೊಡ್ಡ ಮರಗಳನ್ನು ಮುರಿದು ಬೀಳುವುದನ್ನು ತಪ್ಪಿಸಲು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ (ಬಿಎಂಸಿ) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮರಗಳ ಶಸ್ತ್ರಚಿಕಿತ್ಸಕರನ್ನು (ಟ್ರೀ ಸರ್ಜನ್ ಅಥವಾ ಅರ್ಬೋರಿಕಲ್ಚರಿಸ್ಟ್) ನೇಮಕ ಮಾಡಿಕೊಂಡಿದೆ. ಕೆಲವು ಹಳೇ ಮರಗಳು ಮಳೆಗಾಲದಲ್ಲಿ ಫಂಗಸ್ ಇನ್ಫೆಕ್ಷನ್ ಅಥವಾ ಇನ್ಯಾವುದೋ ಕಾರಣಕ್ಕೆ ಕೊಳೆಯಲು ಆರಂಭಿಸುತ್ತವೆ. ಹೀಗಾದಾಗ ಅವರು ತನ್ನಿಂದ ತಾನಾಗಿ ಬಲುಬೇಗನೆ ಉರುಳು ಬೀಳುತ್ತವೆ. ಸಾಧ್ಯವಾದಷ್ಟರ ಮಟ್ಟಿಗೆ ಅದನ್ನು ತಡೆಯಲು ಈ ಟ್ರೀ ಸರ್ಜನ್ಗಳನ್ನು ನೇಮಕ ಮಾಡಿದ್ದಾಗಿ ಬಿಎಂಸಿ ತಿಳಿಸಿದೆ.
ಇವರು ಮರಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಏನಾದರೂ ದುರ್ಬಲತೆ ಕಂಡು ಬಂದರೆ ರಕ್ಷಿಸುವ ಮಾರ್ಗವನ್ನು ಹೇಳುತ್ತಾರೆ. ಅದಕ್ಕೆ ತಕ್ಕಂತೆ ಔಷಧ ಸಿಂಪಡಣೆ, ಆರೈಕೆ ಮಾಡಬಹುದು. ಇದರಿಂದ ಮರಗಳು ಧರೆಗುರುಳುವುದನ್ನು ತಡೆಯಬಹುದು ಎಂಬುದು ಬಿಎಂಸಿ ಅಭಿಪ್ರಾಯ. ಈ ಯೋಜನೆ ಪ್ರಾಯೋಗಿಕವಾಗಿ ಶುರುವಾಗಿದ್ದು, ಮಲ್ಬಾರ್ ಹಿಲ್, ಟರೇಡೋ ಮತ್ತು ಪೆಡ್ಡರ್ ರೋಡ್ಗಳನ್ನೊಳಗೊಂಡ ಬಿಎಂಸಿಯ ಡಿ ವಾರ್ಡ್ಗೆ ಟ್ರೀ ಸರ್ಜನ್ ಆಗಿ ವೈಭವ್ ರಾಜೆ ನೇಮಕಗೊಂಡಿದ್ದಾರೆ. ಈ ಪ್ರದೇಶದಲ್ಲಿರುವ ಸುಮಾರು 100-150 ಮರಗಳನ್ನು ಇವರು ಅಧ್ಯಯನ ಮಾಡಲಿದ್ದಾರೆ.
ವಿಪರೀತ ಮಳೆ ಬೀಳುವ ಸಂದರ್ಭದಲ್ಲಿ ಅದೆಷ್ಟೋ ಮರಗಳ ಬೇರು, ಕಾಂಡಗಳು ಕೊಳೆಯುತ್ತವೆ. ಯಾವುದಾದರೂ ಫಂಗಸ್ ಸೋಂಕಿನಿಂದ ದುರ್ಬಲವಾಗುತ್ತವೆ. ಮರಗಳು ಮೇಲಿನಿಂದ ಚೆನ್ನಾಗಿಯೇ ಕಂಡರೂ ಒಳಗೆ ಯಾವುದಾದರೂ ಭಾಗದಲ್ಲಿ ದುರ್ಬಲವಾಗುವ ಸಾಧ್ಯತೆ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ಇದನ್ನು ಅಧ್ಯಯನ ಮಾಡಿ, ಅಗತ್ಯವಿದ್ದರೆ ಸೂಕ್ತ ರೀತಿಯಲ್ಲಿ ಔಷಧಗಳ ಸಿಂಪಡಣೆ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ರಾಜೆ ವಿವರಿಸಿದ್ದಾರೆ.
Mumbai | Brihanmumbai Municipal Corporation appoints a tree surgeon to protect vulnerable trees from falling, on a pilot project basis
"We record physical attributes of tree & look for structural defects. We'll do a risk assessment on 100-150 trees," says arborist Vaibhav Raje pic.twitter.com/pmvFL5twTC
— ANI (@ANI) June 18, 2021
ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಸದ್ಯದಲ್ಲೇ ರಾಜ್ಯದ ಸ್ಥಾನಮಾನ; ಯಾವುದೇ ಕಾರಣಕ್ಕೂ ವಿಶೇಷ ಸ್ಥಾನ ನೀಡಲ್ಲ- ಮೋದಿ ಲೆಕ್ಕಾಚಾರವೇನು?
Published On - 1:02 pm, Mon, 21 June 21