AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 6 ಮಂದಿ ನಾಪತ್ತೆ

Delhi Fire: ಗಾರ್ಗ್ ಅವರ ಪ್ರಕಾರ ಪೀರಾಗಡಿ ಉದ್ಯೋಗ್ ನಗರದ ಶೂ ಕಾರ್ಖಾನೆಯಲ್ಲಿ ಬೆಂಕಿಗೆ ಸಂಬಂಧಿಸಿದಂತೆ ಬೆಳಿಗ್ಗೆ 8.22 ಕ್ಕೆ ಅಗ್ನಿಶಾಮಕ ನಿಯಂತ್ರಣ ಕೋಣೆಗೆ ಕರೆ ಬಂದಿದೆ. ಆರಂಭದಲ್ಲಿ, 24 ಅಗ್ನಿಶಾಮಕ ಟೆಂಡರ್ ಕಳುಹಿಸಲಾಗಿದೆ.

ದೆಹಲಿಯ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 6 ಮಂದಿ ನಾಪತ್ತೆ
ದೆಹಲಿ ಶೂ ಕಾರ್ಖಾನೆಯಲ್ಲಿ ಬೆಂಕಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 21, 2021 | 12:11 PM

Share

ದೆಹಲಿ: ದೆಹಲಿಯ ಪೀರಾಗಡಿ ಉದ್ಯೋಗ್ ನಗರದಲ್ಲಿರುವ ಶೂ ಕಾರ್ಖಾನೆಯಲ್ಲಿ ಸೋಮವಾರ ಬೆಳಿಗ್ಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಲು ಒಟ್ಟು 31 ಅಗ್ನಿಶಾಮಕ ಟೆಂಡರ್‌ಗಳು ಮತ್ತು 50 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳನ್ನು ಕರೆದಿರುವುದಾಗಿ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಈವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ತಮ್ಮ ಆರು ಉದ್ಯೋಗಿಗಳು ಕಾಣೆಯಾಗಿದ್ದಾರೆ. ಅವರು ತಮ್ಮ ಮೊಬೈಲ್ ಫೋನ್‌ಗಳಿಗೆ ಕರೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಕಾರ್ಖಾನೆಯ ಮಾಲೀಕರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಹೇಳಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ಮುಖ್ಯಸ್ಥ ಅತುಲ್ ಗಾರ್ಗ್ ಹೇಳಿದ್ದಾರೆ.

ಇದು ಪ್ರಮುಖ ವರ್ಗದ ಬೆಂಕಿ ಮತ್ತು ಅಗ್ನಿಶಾಮಕ ಕಾರ್ಯಾಚರಣೆ ಸಂಜೆಯವರೆಗೆ ಮುಂದುವರಿಯಬಹುದು. ಸಾವುನೋವುಗಳಿಗೆ ಸಂಬಂಧಿಸಿದಂತೆ, ನಾವು ಯಾವುದೇ ಶವಗಳನ್ನು ಪತ್ತೆ ಮಾಡಿಲ್ಲ. ಆರು ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಕಾರ್ಖಾನೆಯ ಮಾಲೀಕರು ಹೇಳುತ್ತಿದ್ದಾರೆ. ಅವರು ಒಳಗೆ ಸಿಕ್ಕಿಹಾಕಿಕೊಂಡಿರಬಹುದು. ಆದರೆ ಈ ಕ್ಷಣದಲ್ಲಿ ಅದನ್ನು ದೃಢೀಕರಿಸಲು ಅಥವಾ ನಿರಾಕರಿಸಲು ನಮಗೆ ಸಾಧ್ಯವಿಲ್ಲ ”ಎಂದು ಗಾರ್ಗ್ ಹೇಳಿದರು.

ಗಾರ್ಗ್ ಅವರ ಪ್ರಕಾರ ಪೀರಾಗಡಿ ಉದ್ಯೋಗ್ ನಗರದ ಶೂ ಕಾರ್ಖಾನೆಯಲ್ಲಿ ಬೆಂಕಿಗೆ ಸಂಬಂಧಿಸಿದಂತೆ ಬೆಳಿಗ್ಗೆ 8.22 ಕ್ಕೆ ಅಗ್ನಿಶಾಮಕ ನಿಯಂತ್ರಣ ಕೋಣೆಗೆ ಕರೆ ಬಂದಿದೆ. ಆರಂಭದಲ್ಲಿ, 24 ಅಗ್ನಿಶಾಮಕ ಟೆಂಡರ್ ಕಳುಹಿಸಲಾಗಿದೆ. ಬೆಂಕಿ ದೊಡ್ಡದಾಗಿದ್ದರಿಂದ ಇನ್ನೂ ಏಳು ವಾಹನಗಳು ಧಾವಿಸಿವೆ. ಅಗ್ನಿಶಾಮಕ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.

ಇದನ್ನೂ ಓದಿ: ಸಿನಿಮಾಟೊಗ್ರಾಫ್ ಕಾಯ್ದೆ ತಿದ್ದುಪಡಿಗೆ ಸಾರ್ವಜನಿಕರ ಅಭಿಪ್ರಾಯ ಕೇಳಿದ ಸರ್ಕಾರ

(Major fire broke out at a Shoe factory in Peeragarhi Udyog Nagar in outer Delhi on Monday morning )