AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

82 ವರ್ಷದ ಮಹಿಳೆಗೆ ಅಪ್ಪರ್ ಬರ್ತ್​ ಅಲಾಟ್ ಮಾಡಿದ ರೈಲ್ವೆ ವಿರುದ್ಧ ದೂರು, ಭಾರತೀಯ ರೈಲ್ವೆ ಕೊಟ್ಟ ಉತ್ತರವೇನು?

82 ವರ್ಷದ ಮಹಿಳೆಗೆ ಅಪ್ಪರ್ ಬರ್ತ್ ಹಂಚಿಕೆ ವಿವಾದದ ಕುರಿತು ಭಾರತೀಯ ರೈಲ್ವೆ ತನ್ನ ನಿಯಮಗಳನ್ನು ಸ್ಪಷ್ಟಪಡಿಸಿದೆ. ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಖಾಲಿ ಇದ್ದರೆ ಕೆಳ ಬರ್ತ್ ಸ್ವಯಂ ಚಾಲಿತವಾಗಿ ಲಭಿಸುತ್ತದೆ. ಆದರೆ, ಒಂದೇ PNR ನಲ್ಲಿ ಎರಡು ಟಿಕೆಟ್‌ಗಳನ್ನು ಬುಕ್ ಮಾಡಿದಾಗ ಕೆಳ ಬರ್ತ್ ಸಿಗುವ ಸಾಧ್ಯತೆ ಹೆಚ್ಚು. ಗುಂಪು ಬುಕಿಂಗ್‌ನಲ್ಲಿ ಈ ಆದ್ಯತೆ ಸಿಗದಿರಬಹುದು ಎಂಬ ಬಗ್ಗೆಯೂ ಲೇಖನ ಮಾಹಿತಿ ನೀಡಿದೆ.

82 ವರ್ಷದ ಮಹಿಳೆಗೆ ಅಪ್ಪರ್ ಬರ್ತ್​ ಅಲಾಟ್ ಮಾಡಿದ ರೈಲ್ವೆ ವಿರುದ್ಧ ದೂರು, ಭಾರತೀಯ ರೈಲ್ವೆ ಕೊಟ್ಟ ಉತ್ತರವೇನು?
ರೈಲು
ನಯನಾ ರಾಜೀವ್
|

Updated on: Mar 02, 2026 | 8:05 AM

Share

ನವದೆಹಲಿ, ಮಾರ್ಚ್​ 02: ಭಾರತೀಯ ರೈಲ್ವೆ(Indian Railways) ಹಿರಿಯ ನಾಗರಿಕರಿಗೆ ಬರ್ತ್​ಗಳನ್ನು ಹೇಗೆ ನಿಗದಿಪಡಿಸುತ್ತದೆ ಎಂಬುದರ ಕುರಿತು ಎಕ್ಸ್​​ನಲ್ಲಿ ಮಾಡಲಾದ ಪೋಸ್ಟ್​ ಚರ್ಚೆಗೆ ನಾಂದಿ ಹಾಡಿದೆ. ಪ್ರಯಾಣಿಕರೊಬ್ಬರು ತಾವು ಟಿಕೆಟ್ ಬುಕ್ ಮಾಡಿದಾಗ  ಬೇರೆ ಸೀಟುಗಳು ಲಭ್ಯವಿದ್ದರೂ 82 ವರ್ಷದ ಮಹಿಳೆಗೆ ಕೂಡ ಅಪ್ಪರ್ ಬರ್ತ್​ ನಿಗದಿಪಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈಗ ಅದೇ ಕೆಳಗಿನ ಬರ್ತ್‌ಗಳನ್ನು ಪ್ರೀಮಿಯಂ ತತ್ಕಾಲ್‌ನಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವೈರಲ್ ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ, 45ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಲೋವರ್ ಬರ್ತ್​ ಹಂಚಿಕೆಗೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಿದೆ. ಭಾರತೀಯ ರೈಲ್ವೆಯ ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿ, ಯಾವುದೇ ಆಯ್ಕೆ ನೀಡದಿದ್ದರೂ ಕೂಡ, ಹಿರಿಯ ನಾಗರಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಸ್ವಯಂ ಚಾಲಿತವಾಗಿ ಕೆಳ ಬರ್ತ್​ ಹಂಚಿಕೆ ಮಾಡುವ ಅವಕಾಶವಿದೆ.

ಇಂಟರ್ನೆಟ್​ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡುವ ಸಮಯದಲ್ಲಿ, ಕೆಳ ಬರ್ತ್ ಲಭ್ಯವಿದ್ದರೆ ಮಾತ್ರ ಬುಕಿಂಗ್ ಅನ್ನು ಆಯ್ಕೆ ಮಾಡಲು ಅವಕಾಶವಿದೆ ಎಂದು ತಿಳಿಸಲಾಗಿದೆ. ಅಂತಹ ಸಂದರ್ಭದಲ್ಲಿ ಕೆಳ ಬರ್ತ್ ಲಭ್ಯವಿದ್ದರೆ ಮಾತ್ರ ಟಿಕೆಟ್ ಬುಕ್ ಮಾಡಲಾಗುತ್ತದೆ. ಇದಲ್ಲದೆ, ಭಾರತೀಯ ರೈಲ್ವೆಯಲ್ಲಿ, ಕಾಯ್ದಿರಿಸಿದ ಟಿಕೆಟ್​ಗಳನ್ನು ಮೊದಲು ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ಬುಕ್ ಮಾಡಬಹುದು ಮತ್ತು ಆಯ್ಕೆಯ ಬರ್ತ್ ಲಭ್ಯತೆಗೆ ಒಳಪಟ್ಟಿರುತ್ತದೆ.

ಸ್ವಲ್ಪ ದಿನಗಳ ಹಿಂದೆ ಟಿಟಿಇ ಒಬ್ಬರು ಈ ಕುರಿತು ಮಾತನಾಡಿರುವುದು ವೈರಲ್ ಆಗಿತ್ತು, ಲೋವರ್ ಬರ್ತ್​ ಪಡೆಯಬೇಕೆಂದರೆ ಏನು ಮಾಡಬೇಕು ಎಂದು ಮಾಹಿತಿ ನೀಡಿದ್ದರು. ನೀವು ಎಂದಾದರೂ ರೈಲು ಟಿಕೆಟ್ ಬುಕ್ ಮಾಡುವಾಗ ಲೋವರ್ ಬರ್ತ್ ಆದ್ಯತೆ ಆಯ್ಕೆ ಮಾಡಿಕೊಂಡಿದ್ದರೂ ಅಪ್ಪರ್ ಬರ್ತ್ ಪಡೆದಿದ್ದೀರಾ?, ನೀವೊಬ್ಬರೇ ಅಲ್ಲ ಸಾಕಷ್ಟು ಪ್ರಯಾಣಿಕರಿಗೆ ಇದರ ಅನುಭವವಾಗಿದೆ.ಹಿರಿಯ ನಾಗರಿಕ ಪ್ರಯಾಣಿಕರಲ್ಲಿ ಈ ರೀತಿಯ ಘಟನ ಹೆಚ್ಚಾಗಿದೆ.

ಮತ್ತಷ್ಟು ಓದಿ: ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ

ನೀವು ಲೋವರ್ ಬರ್ತ್ ಬಯಸಿದರೆ, ಒಂದು ಪಿಎನ್‌ಆರ್‌ನಲ್ಲಿ ಕೇವಲ ಎರಡು ಟಿಕೆಟ್‌ಗಳನ್ನು ಬುಕ್ ಮಾಡಿ. ನೀವು ಮೂರು ಅಥವಾ ನಾಲ್ಕು ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದಾಗ, ವ್ಯವಸ್ಥೆಯು ಅದನ್ನು ಗುಂಪು ಬುಕಿಂಗ್ ಎಂದು ಪರಿಗಣಿಸುತ್ತದೆ ಮತ್ತು ಲೋವರ್ ಬರ್ತ್ ಆದ್ಯತೆಯನ್ನು ತೆಗೆದುಹಾಕಲಾಗುತ್ತದೆ. ಅಂದರೆ ಕಡಿಮೆ ಟಿಕೆಟ್‌ಗಳು, ಹೆಚ್ಚು ಲಾಭ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್