ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಬೇಸರದಿಂದ ಚಕ್ರವರ್ತಿ ಅವರನ್ನು ಪ್ರಶಾಂತ್​ ತಬ್ಬಿಕೊಂಡರು. ಆಗ ಚಕ್ರವರ್ತಿ ಕೂಡ ಬೇಸರಗೊಂಡರು. ಅದನ್ನು ಅಲ್ಲಿ ತೋರಿಸದೆ ಇದ್ದರೂ, ಗಾರ್ಡನ್​ ಏರಿಯಾಗೆ ಬಂದು ಗಳಗಳನೆ ಅತ್ತರು.

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ
ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ
Follow us
TV9 Web
| Updated By: ಮದನ್​ ಕುಮಾರ್​

Updated on:Jun 29, 2021 | 10:03 AM

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ತಮ್ಮ ಕಟು ಮಾತುಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಜೂನ್​ 27ರ ಎಪಿಸೋಡ್​ನಲ್ಲಂತೂ ಚಕ್ರವರ್ತಿ ಚಂದ್ರಚೂಡ್​ ಮಾತಿಗೆ ಇಡೀ ಮನೆ ನಡುಗಿ ಹೋಗಿತ್ತು. ಈ ಬೆನ್ನಲ್ಲೇ ಮನೆಯಲ್ಲಿ ಕಣ್ಣೀರಧಾರೆ ಹರಿದಿದೆ.

ಬಿಗ್​ ಬಾಸ್​ ಸ್ಪರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡಲಾಗಿದೆ. ಈ ಟಾಸ್ಕ್ ಪ್ರಕಾರ ಮನೆಯ 11 ಜನ ಸ್ಪರ್ಧಿಗಳು ಪ್ರಶಾಂತ್​ ಅವರನ್ನು ಪ್ರ್ಯಾಂಕ್​ ಮಾಡಬೇಕು. ಮನೆಯಲ್ಲಿ ಪ್ರಶಾಂತ್​ ಅದೃಶ್ಯವಾಗಿದ್ದಾರೆ ಎಂಬಂತೆ ಎಲ್ಲರೂ ವರ್ತಿಸಬೇಕು ಎಂದು ಸುದೀಪ್​ ಸೂಚನೆ ನೀಡಿದರು. ಈ ಸೂಚನೆಯಂತೆ ಸ್ಪರ್ಧಿಗಳು ನಡೆದುಕೊಳ್ಳೋಕೆ ಆರಂಭಿಸಿದರು.

ಇದು ಪ್ರ್ಯಾಂಕ್​ ಎಂಬುದು ಪ್ರಶಾಂತ್​ ಗಮನಕ್ಕೆ ಬಂದಿದೆ. ಇದು ಶೀಘ್ರವೇ ಪೂರ್ಣಗೊಳ್ಳಬಹುದು ಎಂದು ಪ್ರಶಾಂತ್​ ಭಾವಿಸಿದ್ದರು. ಆದರೆ, ಮನೆಯವರು ಪ್ರಶಾಂತ್​ ಅವರನ್ನು ಮಾತನಾಡಿಸಿಲ್ಲ. ಇದು ಅವರಿಗೆ ಹರ್ಟ್​ ಆಗಿದೆ. ಶುಭಾ ಪೂಂಜಾ ಅವರ ಜತೆ ಮಾತನಾಡುತ್ತಾ ಪ್ರಶಾಂತ್​ ಕಣ್ಣೀರು ಹಾಕಿದರು. ‘ನಿನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದೇನೆ. ಆದರೂ, ಮಾತನಾಡುವುದಿಲ್ಲವಾ’ ಎಂದು ಪ್ರಶ್ನೆ ಮಾಡಿದರು.

ಇನ್ನು, ಬೇಸರದಿಂದ ಚಕ್ರವರ್ತಿ ಅವರನ್ನು ಪ್ರಶಾಂತ್​ ತಬ್ಬಿಕೊಂಡರು. ಆಗ ಚಕ್ರವರ್ತಿ ಕೂಡ ಬೇಸರಗೊಂಡರು. ಅದನ್ನು ಅಲ್ಲಿ ತೋರಿಸದೆ ಇದ್ದರೂ, ಗಾರ್ಡನ್​ ಏರಿಯಾಗೆ ಬಂದು ಗಳಗಳನೆ ಅತ್ತರು. ಮನೆ ಮಂದಿಯೆಲ್ಲ ಚಕ್ರವರ್ತಿಯನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಇನ್ನು, ದಿವ್ಯಾ ಉರುಡುಗಗೆ ಪ್ರಶಾಂತ್​ ಸಂಬರಗಿ ಪದೇಪದೇ ಚುಚ್ಚಿ ಮಾತನಾಡುತ್ತಿದ್ದರು. ಇದು ದಿವ್ಯಾಗೆ ತುಂಬಾನೇ ಹರ್ಟ್​ ಆಗಿದೆ. ಪ್ರಶಾಂತ್​ ಮಾತನ್ನು ಕೇಳುತ್ತಿದ್ದಂತೆಯೇ ದಿವ್ಯಾ ಕಣ್ಣಲ್ಲಿ ನೀರು ಬಂತು. ‘ಬಿಗ್​ ಬಾಸ್​ ನನ್ನ ಕೈಯಲ್ಲಿ ಇದು ಆಗಲ್ಲ’ ಎಂದು ಬೇಸರ ಹೊರ ಹಾಕಿದರು.

ಇನ್ನು, ನಿಧಿ ಊಟ ಮಾಡುವಾಗ ಮಂಜು ಯಾವುದೋ ವಿಚಾರ ಹೇಳಿದ್ದಾರೆ. ಅದು ನಿಧಿಗೆ ಬೇಸರ ಮೂಡಿಸಿದೆ. ಈ ವಿಚಾರದಲ್ಲಿ ಮಂಜುಗೆ ತಪ್ಪಿತಸ್ಥ ಭಾವನೆ ಕಾಡಿದೆ.  ಅವರು ಕೂಡ ಅತ್ತಿದ್ದಾರೆ. ಈ ವೇಳೆ ಮಂಜು ಅವರನ್ನು ನಿಧಿ, ಶುಭಾ ಸಮಾಧಾನ ಮಾಡಿದ್ದಾರೆ.

ಇದನ್ನೂ ಓದಿ: ಮಂಜು ವಿಚಾರಕ್ಕೆ ದಿವ್ಯಾ ಸುರೇಶ್​ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ ಚಕ್ರವರ್ತಿ ಚಂದ್ರಚೂಡ್​

BBK8 Shruthi Controversy : ಲ್ಯಾಗ್ ಮಂಜ-ಚಕ್ರವರ್ತಿ ನಡುವಿನ ಬಿಗ್‌ ಫೈಟ್‌ನಲ್ಲಿ ಕೇಳಿ ಬಂತು ನಟಿ ಶೃತಿ ವಿಚಾರ

Published On - 9:58 am, Tue, 29 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ