ಸೀರಿಯಲ್ ನಟಿ ರಿಯಲ್ ಅವತಾರ ನೋಡಿ ಫ್ಯಾನ್ಸ್ಗೆ ಅಚ್ಚರಿ; ಹಾಟ್ ವಿಡಿಯೋಗೆ ಬಂದ ಕಮೆಂಟ್ಸ್ ಏನು?
Devoleena Bhattacharjee Belly Dance: ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 9 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಅಂದಾಜು ಒಂದು ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಕಮೆಂಟ್ಗಳು ಬಂದಿವೆ.
ತಾವು ಇಷ್ಟಪಡುವ ಪಾತ್ರದ ಬಗ್ಗೆ ಪ್ರೇಕ್ಷಕರು ಒಂದು ಬಗೆಯ ಸೆಂಟಿಮೆಂಟ್ ಇಟ್ಟುಕೊಂಡಿರುತ್ತಾರೆ. ಸಿನಿಮಾ, ಧಾರಾವಾಹಿಯಲ್ಲಿ ಅಂಥ ಪಾತ್ರಗಳನ್ನು ಮಾಡಿದ ಕಲಾವಿದರು ರಿಯಲ್ ಲೈಫ್ನಲ್ಲಿಯೂ ಅದೇ ರೀತಿಯ ಇಮೇಜ್ ಕಾಪಾಡಿಕೊಳ್ಳುವುದು ಕಷ್ಟ. ನಟಿ ದೇವೊಲೀನಾ ಅವರ ವಿಚಾರದಲ್ಲಿ ಅದೇ ರೀತಿ ಆಗಿದೆ. ‘ಸಾಥ್ ನಿಭಾನಾ ಸಾಥಿಯಾ’ ಸೀರಿಯಲ್ನಲ್ಲಿ ನಟಿಸಿರುವ ಅವರ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ದೇವೊಲೀನಾ ಪೋಸ್ಟ್ ಮಾಡಿರುವ ಹೊಸ ವಿಡಿಯೋ ಕಂಡು ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ.
ಜನಪ್ರಿಯ ‘ಸಾಥ್ ನಿಭಾನಾ ಸಾಥಿಯಾ’ ಧಾರಾವಾಹಿಯಲ್ಲಿ ಗೋಪಿ ಬಹೂ ಎಂಬ ಪಾತ್ರವನ್ನು ಮಾಡುವ ಮೂಲಕ ದೇವೊಲೀನಾ ಫೇಮಸ್ ಆಗಿದ್ದಾರೆ. ಧಾರಾವಾಹಿಯಲ್ಲಿ ಸೀರೆಯುಟ್ಟು ಸುಂದರವಾಗಿ ಕಾಣಿಸಿಕೊಳ್ಳುವ ಅವರು ರಿಯಲ್ ಲೈಫ್ನಲ್ಲಿ ಸಿಕ್ಕಾಪಟ್ಟೆ ಮಾಡರ್ನ್. ಇತ್ತೀಚೆಗೆ ಅವರೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮಾಡಿದ ಬೆಲ್ಲಿ ಡ್ಯಾನ್ಸ್ ನೋಡಿ ಬಹುತೇಕರಿಗೆ ಅಚ್ಚರಿ ಆಗಿದೆ.
ಬೆಲ್ಲಿ ಡ್ಯಾನ್ಸ್ಗೆ ಒಪ್ಪುವಂತಹ ಬಟ್ಟೆ ಧರಿಸಿರುವ ದೇವೊಲೀನಾ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಆದರೆ, ‘ಸಂಸ್ಕಾರ ಮರೆಯಬೇಡ ಗೋಪಿ ಬಹೂ…’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು, ಕೆಲವರು ದೇವೊಲೀನಾ ಬೆನ್ನಿಗೆ ನೋವಾಗಬಹುದು ಎಂದು ಕಾಳಜಿ ತೋರಿಸಿದ್ದಾರೆ. ಯಾಕೆಂದರೆ, 2013ರಲ್ಲಿ ಅವರಿಗೆ ಬ್ಯಾಕ್ ಇಂಜುರಿ ಆಗಿತ್ತು. ನಟನೆ ಜೊತೆಗೆ ಡ್ಯಾನ್ಸ್ ಮೇಲೆ ದೇವೊಲೀನಾ ಅವರಿಗೆ ಅಪಾರ ಆಸಕ್ತಿ. ಬ್ಯಾಕ್ ಇಂಜುರಿ ಬಳಿಕವೂ ಅವರು ಡ್ಯಾನ್ಸ್ ಕಲಿಯುವುದನ್ನು ನಿಲ್ಲಿಸಿಲ್ಲ.
ಈಗ ಬೆಲ್ಲಿ ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದಾರೆ. ‘ಪ್ರಾಕ್ಟೀಸ್, ಪ್ರಾಕ್ಟೀಸ್, ಪ್ರಾಕ್ಟೀಸ್… ಈ ಡ್ಯಾನ್ಸ್ ಎಂದರೆ ನನಗೆ ತುಂಬ ಇಷ್ಟ. ಪೂರ್ತಿ ವಿಡಿಯೋ ಹಾಕಲು ನಾನಿನ್ನೂ ಸರಿಯಾಗಿ ಕಲಿತಿಲ್ಲ. ಸದ್ಯಕ್ಕೆ ಕಲಿಯುತ್ತಿದ್ದೇನೆ. ಆದರೆ ಖಂಡಿತವಾಗಿ, ಕೋರ್ಸ್ ಪೂರ್ಣಗೊಳ್ಳುತ್ತಿದ್ದಂತೆಯೇ ಫುಲ್ ವಿಡಿಯೋ ಹಾಕುತ್ತೇನೆ. ಅಲ್ಲಿಯವರೆಗೂ ಇದನ್ನೂ ಎಂಜಾಯ್ ಮಾಡಿ’ ಎಂದು ಆ ವಿಡಿಯೋ ದೇವೊಲೀನಾ ಕ್ಯಾಪ್ಷನ್ ನೀಡಿದ್ದಾರೆ.
View this post on Instagram
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 9 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಅಂದಾಜು ಒಂದು ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಕಮೆಂಟ್ಗಳು ಬಂದಿವೆ.
ಇದನ್ನೂ ಓದಿ:
ಲಾಕ್ ಡೌನ್ನಲ್ಲಿ ಕೆಲಸ ಇಲ್ಲದೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್ ನಟಿಯರು
ಮಾದಕತೆಯಲ್ಲಿ ಸನ್ನಿ ಲಿಯೋನ್ಗೆ ಪೈಪೋಟಿ ನೀಡಲು ಬಂದ ಸುಂದರಿ; ನೆಟ್ಟಿಗರು ಮಾಡಿದ ಕಮೆಂಟ್ ಏನು?