ಕೆಲಸ ಇಲ್ಲದೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್​ ನಟಿಯರು

ಕೆಲಸ ಇಲ್ಲದೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್​ ನಟಿಯರು
ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್​ ನಟಿಯರು

Savdhaan India: ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ನಟಿಯರಿಬ್ಬರು ದುಡ್ಡು ತೆಗೆದುಕೊಂಡು ಹೋಗುತ್ತಿರುವುದು ಪತ್ತೆ ಆಗಿದೆ. ಹಿಡಿದು ವಿಚಾರಣೆ ನಡೆಸಿದಾಗ ದುಡ್ಡು ಕದ್ದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.

Madan Kumar

| Edited By: Apurva Kumar Balegere

Aug 10, 2021 | 11:14 AM

ಕೊರೊನಾ ವೈರಸ್​ ಎರಡನೇ ಅಲೆ ಜೋರಾದ ಪರಿಣಾಮ ಹಲವು ಕಡೆಗಳಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗಿತ್ತು. ಇದರಿಂದ ಅನೇಕರು ಕೆಲಸ ಇಲ್ಲದೆ ಮನೆಯಲ್ಲಿ ಕೂರುವುದು ಅನಿವಾರ್ಯ ಆಗಿತ್ತು. ಸಿನಿಮಾ ಮತ್ತು ಧಾರಾವಾಹಿ ಶೂಟಿಂಗ್​ ಕೂಡ ಸ್ಥಗಿತ ಆಗಿದ್ದರಿಂದ ಕಲಾವಿದರು ಮತ್ತು ತಂತ್ರಜ್ಞರ ಪರಿಸ್ಥಿತಿ ಸಹ ಹೀನಾಯ ಆಯಿತು. ಪರಿಣಾಮವಾಗಿ ಇಬ್ಬರು ನಟಿಯರು ಕಳ್ಳತನದ ಹಾದಿ ಹಿಡಿದಿದ್ದಾರೆ. ಲಕ್ಷಾಂತರ ರೂಪಾಯಿ ಕದ್ದು ಈಗ ಪೊಲೀಸರ ವಶವಾಗಿದ್ದಾರೆ.

ಹಿಂದಿ ಸೀರಿಯಲ್​ಗಳಲ್ಲಿ ನಟಿಸಿದ್ದ ನಟಿಯರಾದ ಸುರಭಿ ಸುರೇಂದ್ರ ಲಾಲ್​ ಶ್ರೀವತ್ಸ ಹಾಗೂ ಮೊಸಿನಾ ಮುಕ್ತರ್​ ಶೇಕ್​ ಅವರೇ ಕಳ್ಳತನದಲ್ಲಿ ಸಿಕ್ಕಿಬಿದ್ದಿರುವ ನಟಿಯರು. ಶೂಟಿಂಗ್​ ಇಲ್ಲದೇ ಇರುವಾಗ ಅವರು ಮುಂಬೈನ ಒಂದು ಐಷಾರಾಮಿ ಪಿಜಿಗೆ ಸೇರಿಕೊಂಡಿದ್ದರು. ಮೇ 18ರಂದು ಪಿಜಿಗೆ ಸೇರ್ಪಡೆಯಾದ ಈ ನಟಿಯರು ಅದೇ ಪಿಜಿಯಲ್ಲಿದ್ದ ಮಹಿಳೆಯ ಲಾಕರ್​ನಿಂದ 3.28 ಲಕ್ಷ ರೂ.ಗಳನ್ನು ಕದ್ದಿದ್ದಾರೆ. ಹಣ ಕಳೆದುಕೊಂಡ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಸುರಭಿ ಸುರೇಂದ್ರ ಲಾಲ್​ ಶ್ರೀವತ್ಸ ಹಾಗೂ ಮೊಸಿನಾ ಮುಕ್ತರ್​ ಶೇಕ್​ ದುಡ್ಡು ತೆಗೆದುಕೊಂಡು ಹೋಗುತ್ತಿರುವುದು ಪತ್ತೆ ಆಗಿದೆ. ಹಿಡಿದು ವಿಚಾರಣೆ ನಡೆಸಿದಾಗ ದುಡ್ಡು ಕದ್ದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಸಾವಧಾನ್​ ಇಂಡಿಯಾ, ಕ್ರೈಂ ಪಟ್ರೋಲ್​ ಮುಂತಾದ ಜನಪ್ರಿಯ ಸೀರಿಯಲ್​ಗಳಲ್ಲಿ ಈ ನಟಿಯರು ಬಣ್ಣ ಹಚ್ಚಿದ್ದರು. ಕೆಲವು ವೆಬ್​ ಸಿರೀಸ್​ಗಳಲ್ಲೂ ಕಾಣಿಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ.

ಪೊಲೀಸರ ಅತಿಥಿಗಳಾಗಿರುವ ಈ ನಟಿಯರಿಂದ ಸದ್ಯ 50 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದೆ ಇಬ್ಬರನ್ನೂ ಹಾಜರು ಪಡಿಸಲಾಗಿದ್ದು, ಜೂ.23ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಲಾಕ್​ ಡೌನ್​ ಕಾರಣದಿಂದ ಅನೇಕರ ಪರಿಸ್ಥಿತಿ ಕಷ್ಟ ಆಗಿದೆ. ಕಳೆದ ವರ್ಷ ಲಾಕ್​ ಡೌನ್​ ಸಂದರ್ಭದಲ್ಲಿ ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಈಗ ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗುತ್ತಿದೆ. ಕೆಲವು ನಗರಗಳಲ್ಲಿ ಧಾರಾವಾಹಿ, ಸಿನಿಮಾ ಶೂಟಿಂಗ್​ಗೂ ಅವಕಾಶ ಸಿಕ್ಕಿದೆ.

ಇದನ್ನೂ ಓದಿ:

ಕಳ್ಳತನ ಮಾಡಿ ಖಾರದಪುಡಿ ಮನೆ ತುಂಬಾ ಚೆಲ್ಲುತ್ತಿದ್ದ ಅಸಲಿ ಕಾರಣ ಬಯಲು; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಅತ್ತಿಗೆ-ಮೈದುನನ ನಡುವೆ ಇದೆಂಥಾ ಸಂಬಂಧ? ಆ ಒಂದು ದೃಶ್ಯದಿಂದ ಸಿಡಿದೆದ್ದ ಜನರು

Follow us on

Related Stories

Most Read Stories

Click on your DTH Provider to Add TV9 Kannada