ಅತ್ತಿಗೆ-ಮೈದುನನ ನಡುವೆ ಇದೆಂಥಾ ಸಂಬಂಧ? ಆ ಒಂದು ದೃಶ್ಯದಿಂದ ಸಿಡಿದೆದ್ದ ಜನ

Ghum Hai Kisikey Pyaar Mein: ಜನಪ್ರಿಯ ಸೀರಿಯಲ್​ನಲ್ಲಿ ಅತ್ತಿಗೆ ಮತ್ತು ಮೈದುನನ ನಡುವೆ ಪ್ರೀತಿ ಚಿಗುರುವಂತಹ ದೃಶ್ಯಗಳನ್ನು ತೋರಿಸಲಾಗಿದೆ. ಇದೇ ಈಗ ವೀಕ್ಷಕರ ಕೋಪಕ್ಕೆ ಕಾರಣ ಆಗಿದೆ.

ಅತ್ತಿಗೆ-ಮೈದುನನ ನಡುವೆ ಇದೆಂಥಾ ಸಂಬಂಧ? ಆ ಒಂದು ದೃಶ್ಯದಿಂದ ಸಿಡಿದೆದ್ದ ಜನ
ನೀಲ್ ಭಟ್ ಮತ್ತು ಐಶ್ವರ್ಯಾ ಶರ್ಮಾ
Follow us
| Updated By: Digi Tech Desk

Updated on:Aug 10, 2021 | 11:14 AM

ಸಿನಿಮಾ, ನಾಟಕ, ಧಾರಾವಾಹಿ ಏನೇ ಆಗಿರಲಿ, ಪ್ರೇಕ್ಷಕರನ್ನು ಮೆಚ್ಚಿಸುವುದು ಸುಲಭ ಅಲ್ಲ. ಅದರಲ್ಲೂ ಒಮ್ಮೆ ಒಂದು ಪಾತ್ರವನ್ನು ಜನರ ಇಷ್ಟಪಟ್ಟರೆ ಅದರ ಮೇಲೆ ತುಂಬ ಪ್ರೀತಿ ತೋರಿಸುತ್ತಾರೆ. ಆ ಪ್ರೀತಿಯನ್ನು ಉಳಿಸಿಕೊಳ್ಳುವುದು ದೊಡ್ಡ ಜವಾಬ್ದಾರಿ. ತೆರೆ ಮೇಲೆ ನೋಡುವ ಪಾತ್ರಗಳು ಸ್ವಲ್ಪ ತಪ್ಪಾಗಿ ವರ್ತಿಸಿದರೂ ಅಭಿಮಾನಿಗಳಿಗೆ ಇಷ್ಟ ಆಗುವುದಿಲ್ಲ. ಸದ್ಯ ಹಿಂದಿಯ ‘ಗಮ್​ ಹೈ ಕಿಸೇ ಕೆ ಪ್ಯಾರ್​ ಮೇ’ ಧಾರಾವಾಹಿ ಪಾತ್ರಗಳು ಇಂಥ ಸಂಕಟಕ್ಕೆ ಸಿಲುಕಿವೆ. ಈ ಧಾರಾವಾಹಿಯನ್ನು ಬ್ಯಾನ್​ ಮಾಡುವಂತೆ ಪ್ರೇಕ್ಷಕರು ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

ವೀಕ್ಷಕರಲ್ಲಿ ಕುತೂಹಲ ಮೂಡಿಸಬೇಕು ಎಂಬ ಕಾರಣಕ್ಕೆ ಧಾರಾವಾಹಿಯ ನಿರ್ದೇಶಕರು ಇಲ್ಲಸಲ್ಲದ ಸರ್ಕಸ್​ ಮಾಡುತ್ತಾರೆ. ಗಮ್​ ಹೈ ಕಿಸೇ ಕೆ ಪ್ಯಾರ್​ ಮೇ ಧಾರಾವಾಹಿ ತಂಡ ಅದನ್ನೇ ಮಾಡಿದೆ. ಈ ಸೀರಿಯಲ್​ನಲ್ಲಿ ಬರುವ ಅತ್ತಿಗೆ ಮತ್ತು ಮೈದುನನ ಪಾತ್ರಗಳ ನಡುವೆ ಪ್ರೀತಿ ಚಿಗುರುವಂತಹ ದೃಶ್ಯಗಳನ್ನು ಇತ್ತೀಚಿನ ಎಪಿಸೋಡ್​ನಲ್ಲಿ ತೋರಿಸಲಾಗಿದೆ. ಆ ಸಂಬಂಧಕ್ಕೆ ಕುಟುಂಬದ ಹಿರಿಯ ಸದಸ್ಯರು ಕೂಡ ಸಮ್ಮತಿ ಸೂಚಿಸುತ್ತಿರುವ ರೀತಿಯಲ್ಲಿ ಕಥೆ ಹೆಣೆಯಲಾಗಿದೆ. ಇದೇ ಈಗ ವೀಕ್ಷಕರ ಕೋಪಕ್ಕೆ ಕಾರಣ ಆಗಿದೆ.

ಧಾರಾವಾಹಿಯಲ್ಲಿ ಇಂಥ ಸನ್ನಿವೇಶಗಳನ್ನು ತೋರಿಸುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡಿದಂತೆ ಆಗುತ್ತದೆ. ಕೌಟುಂಬಿಕ ಪ್ರೇಕ್ಷಕರಿಗೆ ಇದರಿಂದ ಮುಜುಗರ ಆಗುತ್ತದೆ ಎಂದು ಜನರು ಈ ಧಾರಾವಾಹಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಈ ಸೀರಿಯಲ್​ ಬ್ಯಾನ್​ ಆಗಬೇಕು ಎಂದು ಕೂಡ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸಾವಿರಾರು ಮಂದಿ ಟ್ವೀಟ್​ ಮಾಡಿದ್ದಾರೆ. ಟ್ವಿಟರ್​ನಲ್ಲಿ #BoycottGHKKPM ಹ್ಯಾಟ್​ಟ್ಯಾಗ್​ ಟ್ರೆಂಡ್​ ಆಗಿದೆ.

ಇನ್ನು, ಈ ಧಾರಾವಾಹಿಯಲ್ಲಿ ಅತ್ತಿಗೆ ಮತ್ತು ಮೈದುನನ ಪಾತ್ರ ಮಾಡಿರುವ ನೀಲ್​ ಭಟ್​ ಮತ್ತು ಐಶ್ವರ್ಯಾ ಶರ್ಮಾ ನಿಜಜೀವನದಲ್ಲಿ ಮದುವೆ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಕೂಡ ಪ್ರೇಕ್ಷಕರಿಗೆ ಸರಿ ಎನಿಸಿಲ್ಲ. ಕೆಲವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:

ಸೀರಿಯಲ್​ ನೋಡಿ ದೇವ್ರೇ ಕಾಪಾಡಪ್ಪ ಎಂದ ಅನಿತಾ ಭಟ್​! ಅಂಥದ್ದೇನಿದೆ ಈ ದೃಶ್ಯದಲ್ಲಿ?

ವೆಬ್​ ಸಿರೀಸ್​ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್​ ಹಿಟ್​ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್​ ನ್ಯೂಸ್​

Published On - 12:52 pm, Sat, 12 June 21

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ