AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ಅಕ್ರಮ ಸಂಬಂಧದಿಂದ ಮುರಿದು ಬಿದ್ದಿತ್ತು ರಾಜ್ ಕುಂದ್ರಾ ಮೊದಲ ಮದುವೆ; ಅಪ್ಸೆಟ್ ಆದ ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ ಈ ಮೊದಲು ಕವಿತಾ ಕುಂದ್ರಾ ಅವರನ್ನು ಮದುವೆ ಆಗಿದ್ದರು. ಆದರೆ, ರಾಜ್​ ಭಾವನ ಜತೆ ಸೇರಿಕೊಂಡು ಕವಿತಾ ಇವರಿಗೇ ಮೋಸ ಮಾಡಿದ್ದರಂತೆ. ಈ ವಿಚಾರವನ್ನು ಸಾರ್ವಜನಿಕವಾಗಿ ರಾಜ್​ ಎಲ್ಲಿಯೂ ಬಾಯ್ಬಿಟ್ಟಿಲ್ಲ.

Shilpa Shetty: ಅಕ್ರಮ ಸಂಬಂಧದಿಂದ ಮುರಿದು ಬಿದ್ದಿತ್ತು ರಾಜ್ ಕುಂದ್ರಾ ಮೊದಲ ಮದುವೆ; ಅಪ್ಸೆಟ್ ಆದ ಶಿಲ್ಪಾ ಶೆಟ್ಟಿ
12 ವರ್ಷ ಸುಖ ಸಂಸಾರ ನಡೆಸಿದ ಶಿಲ್ಪಾ ಶೆಟ್ಟಿ ಬಾಳಿಗೆ ವಿಲನ್ ಆದ ರಾಜ್​ ಕುಂದ್ರಾ ಮಾಜಿ ಹೆಂಡತಿ
ರಾಜೇಶ್ ದುಗ್ಗುಮನೆ
|

Updated on: Jun 12, 2021 | 2:49 PM

Share

ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್​ಕುಂದ್ರಾ 2009ರಲ್ಲಿ ಮದುವೆ ಆದರು. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಸದಾ ಮಕ್ಕಳು ಹಾಗೂ ಪತಿಯೊಂದಿಗೆ ಸಮಯ ಕಳೆಯುವ ಶಿಲ್ಪಾ ಶೆಟ್ಟಿ ಅದರ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಈಗ 12 ವರ್ಷಗಳ ನಂತರದಲ್ಲಿ ಶಿಲ್ಪಾ ಶೆಟ್ಟಿ ಇದೇ ಮೊದಲ ಬಾರಿಗೆ ರಾಜ್​ ಕುಂದ್ರಾ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಕಾರಣ ಅವರ ಹಳೆ ಹೆಂಡತಿ ಕವಿತಾ ಕುಂದ್ರಾ.

ರಾಜ್​ ಕುಂದ್ರಾ ಈ ಮೊದಲು ಕವಿತಾ ಕುಂದ್ರಾ ಅವರನ್ನು ಮದುವೆ ಆಗಿದ್ದರು. ಆದರೆ, ರಾಜ್​ ಭಾವನ ಜತೆ ಸೇರಿಕೊಂಡು ಕವಿತಾ ಇವರಿಗೇ ಮೋಸ ಮಾಡಿದ್ದರಂತೆ. ಈ ವಿಚಾರವನ್ನು ಸಾರ್ವಜನಿಕವಾಗಿ ರಾಜ್​ ಎಲ್ಲಿಯೂ ಬಾಯ್ಬಿಟ್ಟಿಲ್ಲ. ಈಗ ಅವರು ಈ ಬಗ್ಗೆ ಹೇಳಿಕೊಂಡಿದ್ದು, ಈ ವಿಚಾರ ಕೇಳಿ ಶಿಲ್ಪಾ ಅಪ್ಸೆಟ್​ ಆಗಿದ್ದಾರೆ.

ಆಂಗ್ಲ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ರಾಜ್​, ‘ನನ್ನ ಮತ್ತು ಕವಿತಾ ಸಂಸಾರದಲ್ಲಿ ಬಿರುಕು ಮೂಡಲು ಶಿಲ್ಪಾ ಕಾರಣ ಎನ್ನುವ ಆರ್ಟಿಕಲ್​ಗಳು ಹರಿದಾಡಿದ್ದವು. ಆದರೆ ಅದು ಸುಳ್ಳು. ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡೋದು ಶಿಲ್ಪಾಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಈ ಲೇಖನಗಳು ಈಗ ಮತ್ತೆ ವೈರಲ್​ ಆಗುತ್ತಿದ್ದು, ನನ್ನನ್ನು ಕಾಡಿದೆ. ಈ ಬಗ್ಗೆ ಮಾತನಾಡುವುದು ಶಿಲ್ಪಾಗೆ ಇಷ್ಟವಿಲ್ಲ. ಆದರೆ, ಒಂದು ದಿನ ಸತ್ಯ ಹೊರ ಬರಲೇಬೇಕು’ ಎಂದಿದ್ದಾರೆ.

ರಾಜ್​ ಕುಂದ್ರಾ ತಂಗಿಯ ಗಂಡ ಹಾಗೂ ರಾಜ್​ ಕುಂದ್ರಾ ಮೊದಲ ಪತ್ನಿ ಕವಿತಾ ನಡುವೆ ಅಕ್ರಮ ಸಂಬಂಧ ಇತ್ತು. ಇಬ್ಬರೂ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದರಂತೆ. ಈ ವಿಚಾರದ ಬಗ್ಗೆ ರಾಜ್​ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈ ಘಟನೆಯಿಂದ ಎರಡು ಕುಟುಂಬಗಳ ಬಾಳಲ್ಲಿ ಬಿರುಗಾಳಿ ಎದ್ದಿತ್ತು ಎಂದು ರಾಜ್​ ಮರುಗಿದ್ದಾರೆ​.

‘ನನ್ನ ಮನೆಯಲ್ಲಿ ನಾನು, ನನ್ನ ತಂದೆ, ತಂಗಿ ಮತ್ತು ಅವಳ ಗಂಡ ವಾಸವಾಗಿದ್ದೆವು. ತಂಗಿಯ ಗಂಡ ಇಂಗ್ಲೆಂಡ್​ನಲ್ಲಿ ನೆಲೆಸಲು ಪ್ರಯತ್ನಿಸಿದ್ದ. ಆತನ ಜತೆ ನನ್ನ ಪತ್ನಿ ಕವಿತಾ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದಳು. ನನ್ನ ಕುಟುಂಬದವರು ಹಾಗೂ ಕಾರು ಚಾಲಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ನಾನು ಅದನ್ನು ಎಂದಿಗೂ ನಂಬಲಿಲ್ಲ. ಇದು ಅವಳಿಗೆ ಸಹಕಾರಿಯಾಗಿತ್ತು. ಆದರೆ, ಬಾತ್​ರೂಂಗೆ ತೆರಳಿ ನನ್ನ ಭಾವನ ಜತೆ ಕದ್ದುಮುಚ್ಚಿ ಫೋನ್​ನಲ್ಲಿ ಮಾತನಾಡುತ್ತಿದ್ದಳು. ಆ ಫೋನ್​ ನನ್ನ ಕೈಗೆ ಸಿಕ್ಕ ನಂತರ ಎಲ್ಲವೂ ಬಹಿರಂಗವಾಯಿತು ’ ಎಂದು ರಾಜ್​ ಹಳೆ ಕಥೆ ಹೇಳಿಕೊಂಡಿದ್ದಾರೆ. ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಕ್ಕೆ ಶಿಲ್ಪಾ ಬೇಸರಗೊಂಡಿದ್ದಾರೆ.

 ಇದನ್ನೂ ಓದಿ: Shilpa Shetty Birthday: ವಿವಾಹಿತ ಪುರುಷ ರಾಜ್​ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ