Shilpa Shetty Birthday: ವಿವಾಹಿತ ಪುರುಷ ರಾಜ್​ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?

2009ರ ಅಕ್ಟೋಬರ್​ನಲ್ಲಿ ರಾಜ್​ ಕುಂದ್ರಾ ಮನೆಯಲ್ಲಿ ನಿಶ್ಚಿತಾರ್ಥ ನೆರವೇರಿತ್ತು. ಆಗ ಶಿಲ್ಪಾ ಶೆಟ್ಟಿಗೆ ಅವರು 3 ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರ ನೀಡಿದ್ದರಂತೆ!

Shilpa Shetty Birthday: ವಿವಾಹಿತ ಪುರುಷ ರಾಜ್​ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?
ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ - ರಾಜ್ ​ಕುಂದ್ರಾ
TV9kannada Web Team

| Edited By: Madan Kumar

Jun 08, 2021 | 1:54 PM

ಬಾಲಿವುಡ್​ನಲ್ಲಿ ಗುರುತಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರಿಗೆ ಇಂದು (ಜೂ.8) ಜನ್ಮದಿನದ ಸಂಭ್ರಮ. ಈ ಬಳುಕುವ ಬಳ್ಳಿಗೆ ಎಲ್ಲೆಡೆಯಿಂದಲೂ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಶಿಲ್ಪಾ ಶೆಟ್ಟಿ ನಟನೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಪತಿ ರಾಜ್​ ಕುಂದ್ರಾ ಮತ್ತು ಇಬ್ಬರು ಮಕ್ಕಳ ಜೊತೆ ಅವರು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಬಹುಬೇಡಿಕೆಯ ನಟಿಯಾಗಿದ್ದ ಶಿಲ್ಪಾ ಅವರು 2009ರಲ್ಲಿ ರಾಜ್​ ಕುಂದ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಾಜ್​ ಕುಂದ್ರಾಗೆ ಅದು ಎರಡನೇ ಮದುವೆ. ಹಾಗಾಗಿ ಶಿಲ್ಪಾ ಅಭಿಮಾನಿಗಳಿಗೆ ಈ ವಿಚಾರ ಅಚ್ಚರಿ ಮೂಡಿಸಿತ್ತು.

ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ನಡುವೆ ಹೇಗೆ ಪ್ರೀತಿ ಬೆಳೆಯಿತು ಎಂಬುದೇ ಹಲವರ ಅಚ್ಚರಿಯ ಪ್ರಶ್ನೆ. ತಮ್ಮ ಬ್ರ್ಯಾಂಡ್​ವೊಂದರ ಪ್ರಮೋಷನ್​ಗಾಗಿ ಶಿಲ್ಪಾ ಅವರು ರಾಜ್ ಕುಂದ್ರಾ ಜೊತೆ ಬ್ಯುಸಿನೆಸ್​ನಲ್ಲಿ ಕೈ ಜೋಡಿಸಿದ್ದರು. ಆಗಲೇ ಅವರಿಬ್ಬರಿಗೂ ಪರಿಚಯ ಬೆಳೆಯಿತು. ರಾಜ್​ ಅವರ ವ್ಯಕ್ತಿತ್ವ ಕಂಡು ಶಿಲ್ಪಾ ಫಿದಾ ಆದರು. ಆದರೆ ರಾಜ್​ಗೆ ಈಗಾಗಲೇ ಮದುವೆ ಆಗಿದೆ ಎಂಬ ವಿಷಯ ತಿಳಿದಾಗ ಶಿಲ್ಪಾಗೆ ಕೊಂಚ ನಿರಾಸೆ ಆಯಿತು. ಶೀಘ್ರದಲ್ಲೇ ತಮ್ಮ ಹೆಂಡತಿಗೆ ರಾಜ್​ ವಿಚ್ಛೇದನ ನೀಡಲಿದ್ದಾರೆ ಎಂಬುದು ಶಿಲ್ಪಾಗೆ ತಿಳಿಯಿತು.

ನಂತರ ಇಬ್ಬರೂ ಡೇಟಿಂಗ್​ ಮಾಡಲು ಶುರು ಮಾಡಿದರು. ಆಗಲೇ ಅನುಮಾನ ಹೊಗೆಯಾಡುತ್ತಿತ್ತು. ಗಾಸಿಪ್​ ಕಾಲಂಗಳಲ್ಲಿ ಇಬ್ಬರ ಹೆಸರು ಕೇಳಿಬರುತ್ತಿತ್ತು. ಆದರೂ ಅವರು ಒಪ್ಪಿಕೊಂಡಿರಲಿಲ್ಲ. ನಂತರದ ದಿನಗಳಲ್ಲಿ ಈ ಬಗ್ಗೆ ಶಿಲ್ಪಾ ಬಾಯಿ ಬಿಟ್ಟರು. ಶಿಲ್ಪಾಗೆ ದುಬಾರಿ ಗಿಫ್ಟ್​ಗಳನ್ನು ನೀಡುವ ಮೂಲಕ ರಾಜ್ ಇಂಪ್ರೆಸ್​ ಮಾಡುತ್ತಿದ್ದರು. ಮುಂಬೈನಲ್ಲಿ ಅವರಿಗಾಗಿ ಒಂದು ಫ್ಲಾಟ್​ ಕೂಡ ಖರೀದಿಸಿದರು. ಆಗಲೇ ಪ್ರೀತಿಯ ವಿಚಾರದಲ್ಲಿ ರಾಜ್​ ಗಂಭೀರವಾಗಿದ್ದಾರೆ ಎಂಬುದು ಶಿಲ್ಪಾಗೆ ತಿಳಿಯಿತು.

ಇಂಗ್ಲೆಂಡ್​ನ ರೆಸ್ಟೋರೆಂಟ್​ವೊಂದರಲ್ಲಿ ರಾಜ್​ ತುಂಬ ರೊಮ್ಯಾಂಟಿಕ್​ ಆಗಿ ಪ್ರಪೋಸ್​ ಮಾಡಿದರು. ಡೈಮಂಡ್​ ರಿಂಗ್​ ನೀಡಿ ಪ್ರೇಮ ನಿವೇದನೆ ಮಾಡಿಕೊಂಡರು. ಶಿಲ್ಪಾ ಒಪ್ಪಿಗೆ ಸೂಚಿಸಿದರು. ಆದರೆ ನಂತರದ ದಿನಗಳಲ್ಲಿ ರಾಜ್​ ಮೊದಲ ಪತ್ನಿ ಕವಿತಾ ಕುಂದ್ರಾ ಕೆಲವು ಆರೋಪಗಳನ್ನು ಮಾಡಿದರು. ತಮ್ಮ ಮದುವೆ ಮುರಿದು ಬೀಳಲು ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಹೇಳಿದರು. ಆದರೆ ಆ ಆರೋಪಗಳನ್ನೆಲ್ಲ ರಾಜ್​ ತಳ್ಳಿ ಹಾಕಿದರು.

2009ರ ಅಕ್ಟೋಬರ್​ನಲ್ಲಿ ರಾಜ್​ ಕುಂದ್ರಾ ಮನೆಯಲ್ಲಿ ನಿಶ್ಚಿತಾರ್ಥ ನೆರವೇರಿತು. ಆಗ ಶಿಲ್ಪಾಗೆ ಅವರು 3 ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರ ನೀಡಿದರಂತೆ! ಅದೇ ವರ್ಷ ನವೆಂಬರ್​ 22ರಂದು ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಅದ್ದೂರಿಯಾಗಿ ಮದುವೆಯಾದರು. ಪುತ್ರ ವಿಹಾನ್​ಗೆ 2012ರಲ್ಲಿ ಶಿಲ್ಪಾ ಜನ್ಮ ನೀಡಿದರು. 2020ರ ಫೆಬ್ರವರಿಯಲ್ಲಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದು, ಆ ಮಗುವಿಗೆ ಸಮಿಶಾ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ:

ಮದುವೆಯಾದ ಪ್ರಣಿತಾಗೆ ಶುಭಕೋರಿದ ಶಿಲ್ಪಾ ಶೆಟ್ಟಿ; ಇಬ್ಬರ ನಡುವೆ ಗೆಳೆತನ ಬೆಳೆದಿದ್ದು ಹೇಗೆ?

ಮಹೇಶ್​ ಬಾಬುಗೆ ಶಿಲ್ಪಾ ಶೆಟ್ಟಿ ಆಂಟಿ? ಇದು ಹೇಗೆ ಸಾಧ್ಯ ಎಂದು ತಲೆ ಕೆರೆದುಕೊಂಡ ಫ್ಯಾನ್ಸ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada