350 ಕೋಟಿಯಲ್ಲಿ ರೆಡಿಯಾದ ಪ್ರಭಾಸ್ ‘ರಾಧೆ ಶ್ಯಾಮ್’​ಗೆ 400 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಅಮೇಜಾನ್​

350 ಕೋಟಿಯಲ್ಲಿ ರೆಡಿಯಾದ ಪ್ರಭಾಸ್ ‘ರಾಧೆ ಶ್ಯಾಮ್’​ಗೆ 400 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಅಮೇಜಾನ್​
ನಟ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ’ರಾಧೆ ಶ್ಯಾಮ್’ ಚಿತ್ರದ ತುಣುಕು ಬಿಡುಗಡೆ

ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಒಟ್ಟಾಗಿ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ಸಿನಿಮಾದ ಪೋಸ್ಟರ್​ ಹಾಗೂ ಟೀಸರ್​ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

Rajesh Duggumane

|

Jun 07, 2021 | 9:50 PM

ಪ್ರಭಾಸ್​ ನಟನೆಯ ಬಾಹುಬಲಿ ತೆರೆಕಂಡು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಅಷ್ಟೇ ಅಲ್ಲ ಈ ಸಿನಿಮಾ ತೆರೆಕಂಡ ನಂತರದಲ್ಲಿ ಪ್ರಭಾಸ್​ ಖ್ಯಾತಿ ದ್ವಿಗುಣವಾಗಿತ್ತು. ಅವರ ನಟನೆಯ ‘ಸಾಹೋ’ ಸಿನಿಮಾ ಸೋತಿದ್ದು ಅವರ ಕೆರಿಯರ್​ಗೆ ಯಾವುದೇ ಅಡ್ಡಿ ಉಂಟು ಮಾಡಿಲ್ಲ. ಪ್ರಭಾಸ್​ ಸದ್ಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಕೇಳಿ ಬರುತ್ತಿರುವ ಹೊಸ ವಿಚಾರ ಎಂದರೆ, ‘ರಾಧೆ ಶ್ಯಾಮ್’​ ಸಿನಿಮಾ ದೊಡ್ಡ ಮೊತ್ತಕ್ಕೆ ಸೇಲ್​ ಆಗಿದೆಯಂತೆ.

ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಒಟ್ಟಾಗಿ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ಸಿನಿಮಾದ ಪೋಸ್ಟರ್​ ಹಾಗೂ ಟೀಸರ್​ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹೀಗಾಗಿ, ಈ ಚಿತ್ರವನ್ನು ಅಮೇಜಾನ್​ ಪ್ರೈಮ್​ ವಿಡಿಯೋ 400 ಕೋಟಿ ರೂಪಾಯಿಗೆ ಖರೀದಿಸಿದೆ ಎನ್ನುವ ಮಾತು ಕೇಳಿ ಬಂದಿದೆ.

ಟಿ-ಸೀರಿಸ್​ ಸಿನಿಮಾ ನಿರ್ಮಾಣ ಮಾಡುತ್ತಿದೆ. ಬರೋಬ್ಬರಿ 350 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಮೂಲಗಳ ಪ್ರಕಾರ ಟಿ-ಸೀರಿಸ್​ ಅಮೇಜಾನ್​ ಪ್ರೈಮ್​ ಜತೆ ಮಾತುಕತೆ ನಡೆಯುತ್ತಿದ್ದು, 400 ಕೋಟಿ ರೂಪಾಯಿಗೆ ಡೀಲ್​ ಆಗಿದೆ ಎನ್ನಲಾಗುತ್ತಿದೆ.

ಹಾಗಾದರೆ, ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಲಿದೆಯೇ? ಖಂಡಿತವಾಗಿಯೂ ಇಲ್ಲ. ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್​ ಮಾಡಬೇಕು ಎನ್ನುವ ಕಾರಣಕ್ಕೆ ರೆಡಿ ಮಾಡಲಾಗಿದೆ. ಮೊದಲು ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್​ ಆದ ನಂತರವೇ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗಲಿದೆ.

ಇನ್ನು, ಸಿನಿಮಾ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಕೆಲವೇ ಕೆಲವು ಭಾಗದ ಶೂಟಿಂಗ್​ ಬಾಕಿ ಇದ್ದು, ಅದನ್ನು ಲಾಕ್​ಡೌನ್​ ಪೂರ್ಣಗೊಂಡ ನಂತರದಲ್ಲಿ ಪೂರ್ಣಗೊಳಿಸುವ ಆಲೋಚನೆ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಅವರದ್ದು. ಪರಿಸ್ಥಿತಿ ಸಮಸ್ಥಿತಿಗೆ ಬಂದ ನಂತರವೇ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮೊದಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಡೀಲ್​ ಆಗಿದೆ.

ಇತ್ತೀಚೆಗೆ ಎಸ್​.ಎಸ್.​ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ ಕೂಡ  ಇದೇ ವಿಚಾರಕ್ಕೆ ಸುದ್ದಿಯಾಗಿತ್ತು. ಜೀ5 ಸಂಸ್ಥೆ ಈ ಚಿತ್ರವನ್ನು ಬರೋಬ್ಬರಿ 325 ಕೋಟಿ ರೂಪಾಯಿಗೆ ಖರೀದಿಸಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಈಗ ರಾಧೆ ಶ್ಯಾಮ್​ ಸಿನಿಮಾ ಕೂಡ ದೊಡ್ಡ ಗಳಿಕೆ ಮಾಡಿಕೊಂಡಿದೆ.

ಇದನ್ನೂ ಓದಿ: Radhe Shyam Poster: ಯುಗಾದಿ ಹಬ್ಬಕ್ಕೆ ಲವರ್​ ಬಾಯ್​ ಲುಕ್​ನಲ್ಲಿ ಬಂದ ಪ್ರಭಾಸ್​! ರಾಧೆ ಶ್ಯಾಮ್​ ಹೊಸ ಪೋಸ್ಟರ್​ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada