Radhe Shyam Poster: ಯುಗಾದಿ ಹಬ್ಬಕ್ಕೆ ಲವರ್​ ಬಾಯ್​ ಲುಕ್​ನಲ್ಲಿ ಬಂದ ಪ್ರಭಾಸ್​! ರಾಧೆ ಶ್ಯಾಮ್​ ಹೊಸ ಪೋಸ್ಟರ್​ ವೈರಲ್​

Prabhas ​ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಇದೆ. ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್​ ನಿರ್ದೇಶನ ಮಾಡಿದ್ದಾರೆ.

  • TV9 Web Team
  • Published On - 11:36 AM, 13 Apr 2021
Radhe Shyam Poster: ಯುಗಾದಿ ಹಬ್ಬಕ್ಕೆ ಲವರ್​ ಬಾಯ್​ ಲುಕ್​ನಲ್ಲಿ ಬಂದ ಪ್ರಭಾಸ್​! ರಾಧೆ ಶ್ಯಾಮ್​ ಹೊಸ ಪೋಸ್ಟರ್​ ವೈರಲ್​
(ಪ್ರಭಾಸ್​ - ರಾಧೆ ಶ್ಯಾಮ್​ ಸಿನಿಮಾ ಪೋಸ್ಟರ್​)

ಈಗ ಎಲ್ಲೆಲ್ಲೂ ಯುಗಾದಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಖುಷಿ ಹೆಚ್ಚಿಸಲು ಅನೇಕ ಸಿನಿಮಾ ತಂಡಗಳು ಹೊಸ ಹೊಸ ಪೋಸ್ಟರ್, ಟೀಸರ್​​ಗಳನ್ನು ಬಿಡುಗಡೆ ಮಾಡಿಕೊಳ್ಳುತ್ತಿವೆ. ಪ್ರಭಾಸ್​ ನಟನೆಯ ರಾಧೆ ಶ್ಯಾಮ್ ಚಿತ್ರತಂಡದಿಂದ ಕೂಡ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ. ಅದನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವಂತಿದೆ ಈ ಪೋಸ್ಟರ್​.

ಬಾಹುಬಲಿ ಮತ್ತು ಸಾಹೋ ಸಿನಿಮಾಗಳಲ್ಲಿ ಆ್ಯಕ್ಷನ್​ ಅವತಾರ ತಾಳಿದ್ದ ಪ್ರಭಾಸ್​ ಈಗ ಸಂಪೂರ್ಣ ಬದಲಾಗಿದ್ದಾರೆ. ರಾಧೆ ಶ್ಯಾಮ್​ ಸಿನಿಮಾದಲ್ಲಿ ಅವರು ಲವರ್​ ಬಾಯ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರ ಪ್ರೇಕ್ಷಕರಿಗೆ ಈಗಾಗಲೇ ತಿಳಿದಿದೆಯಾದರೂ ಹೊಸ ಪೋಸ್ಟರ್​ ಮೂಲಕ ಅಭಿಮಾನಿಗಳ ಕಾತರವನ್ನು ಹೆಚ್ಚಿಸುವ ಕೆಲಸ ಮಾಡಲಾಗಿದೆ. ಈ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಪ್ರಭಾಸ್​ ಅವರು ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

ರೊಮ್ಯಾಂಟಿಕ್​ ಹೀರೋ ರೀತಿ ಟಿ-ಶರ್ಟ್​ ಧರಿಸಿ, ಸಿಕ್ಕಾಪಟ್ಟೆ ಕ್ಲಾಸ್​ ಆಗಿ ಪ್ರಭಾಸ್​ ಕಾಣಿಸಿಕೊಂಡಿದ್ದಾರೆ. ಅವರ ಲುಕ್​ ಕಂಡರೆ ಈ ಸಿನಿಮಾದಲ್ಲಿ ರೊಮ್ಯಾಂಟಿಕ್​ ಆದಂತಹ ಲವ್​ಸ್ಟೋರಿ ಇದೆ ಎಂಬುದು ಖಚಿತವಾಗುವಂತಿದೆ. ಪ್ರಭಾಸ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಇದೆ. ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್​ ಅವರ ಈ ಹಿಂದಿನ ಬೇರೆಲ್ಲ ಸಿನಿಮಾಗಳಿಗಿಂತಲೂ ‘ರಾಧೆ ಶ್ಯಾಮ್​’ ಭಿನ್ನವಾಗಿರಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ.

ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್​ ಅವರಿಗೆ ಪ್ಯಾನ್​ ಇಂಡಿಯಾ ಸ್ಟಾರ್​ ಪಟ್ಟ ಸಿಕ್ಕಿತು. ಹಾಗಾಗಿ ಅವರ ಎಲ್ಲ ಸಿನಿಮಾಗಳು ಈಗ ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗುತ್ತಿವೆ. ಎಲ್ಲ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಪಕರು ಆಸಕ್ತಿ ತೋರಿಸುತ್ತಿದ್ದಾರೆ. ರಾಧೆ ಶ್ಯಾಮ್​ ಸಿನಿಮಾ ಕೂಡ ಹಲವು ಭಾಷೆಗಳಲ್ಲಿ ತೆರೆಕಾಣಲಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ಜು.30ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

 

View this post on Instagram

 

A post shared by Prabhas (@actorprabhas)

ಇದಲ್ಲದೇ ಇನ್ನೂ ಅನೇಕ ಸಿನಿಮಾಗಳಲ್ಲಿ ಪ್ರಭಾಸ್​ ತೊಡಗಿಕೊಂಡಿದ್ದಾರೆ. ಕೆಜಿಎಫ್​ ಸಿನಿಮಾ ನಿರ್ದೇಶಕ ಪ್ರಶಾಂತ್​ ನೀಲ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ಸಲಾರ್​ ಚಿತ್ರಕ್ಕೆ ಪ್ರಭಾಸ್​ ಹೀರೋ. ‘ತಾನಾಜಿ: ದಿ ಅನ್​ಸಂಗ್​ ವಾರಿಯರ್​’ ಸಿನಿಮಾ ಖ್ಯಾತಿಯ ನಿರ್ದೇಶಕ ಓಂ ರಾವುತ್​ ಅವರ ‘ಆದಿಪುರುಷ್​’ ಚಿತ್ರದಲ್ಲೂ ಪ್ರಭಾಸ್​ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ರಾಧೆ ಶ್ಯಾಮ್​ ನಿರ್ದೇಶಕನ ವಿರುದ್ಧ ಪೊಲೀಸರಿಗೆ ಕಂಪ್ಲೆಂಟ್​ ನೀಡಿದ ಪ್ರಭಾಸ್​ ಫ್ಯಾನ್ಸ್ !

(Prabhas Pooja Hegde starrer Radhe Shyam movie new poster released on Yugadi 2021)