Rakshith Shetty: ಮೊದಲ ಬಾರಿ ಕೋರ್ಟ್​ ಒಳಗೆ ಕಾಲಿಟ್ಟ ರಕ್ಷಿತ್​ ಶೆಟ್ಟಿಗೆ ಇಂಥ ಅನುಭವ! ಇನ್ನೂ ಮುಗಿದಿಲ್ಲ ಕಿರಿಕ್​ ಪಾರ್ಟಿ ಕಿರಿಕ್​

ವಿಚಾರಣೆ ಸಲುವಾಗಿ ಇದೇ ಮೊದಲ ಬಾರಿಗೆ ರಕ್ಷಿತ್​ ಶೆಟ್ಟಿ ಕೋರ್ಟ್​ ಒಳಗೆ ಹೋಗಿ ಬಂದಿದ್ದಾರೆ. ಇದು ಅವರಿಗೆ ಮೊದಲ ಅನುಭವ. ಆ ಬಗ್ಗೆ ‘ಸಿಂಪಲ್​ ಸ್ಟಾರ್​’ ಪ್ರತಿಕ್ರಿಯೆ ನೀಡಿದ್ದಾರೆ.

Rakshith Shetty: ಮೊದಲ ಬಾರಿ ಕೋರ್ಟ್​ ಒಳಗೆ ಕಾಲಿಟ್ಟ ರಕ್ಷಿತ್​ ಶೆಟ್ಟಿಗೆ ಇಂಥ ಅನುಭವ! ಇನ್ನೂ ಮುಗಿದಿಲ್ಲ ಕಿರಿಕ್​ ಪಾರ್ಟಿ ಕಿರಿಕ್​
ರಕ್ಷಿತ್​ ಶೆಟ್ಟಿ
Follow us
| Updated By: Digi Tech Desk

Updated on:Apr 13, 2021 | 3:59 PM

‘ಕಿರಿಕ್​ ಪಾರ್ಟಿ’ ಸಿನಿಮಾದ ಹಾಡೊಂದರ ಕಾಪಿರೈಟ್​ ಕೇಸ್​ಗೆ ಸಂಬಂಧಿಸಿದ ಕಿರಿಕ್​ ಇನ್ನೂ ಬಗೆಹರಿದಿಲ್ಲ. ಲಹರಿ ಮ್ಯೂಸಿಕ್​ ಆಡಿಯೋ ಕಂಪನಿ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮ್​ವಾ ಸ್ಟುಡಿಯೋ ನಡುವೆ ಇನ್ನೂ ಜಟಾಪಟಿ ಮುಂದುವರಿದಿದೆ. ಈ ಪ್ರಕರಣದ ವಿಚಾರಣೆ ಸಲುವಾಗಿ ಸೋಮವಾರ (ಏ.12) ರಕ್ಷಿತ್​ ಶೆಟ್ಟಿ ಕೋರ್ಟ್​ಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಸಿನಿಮಾ ರಿಲೀಸ್​ ಆಗುವಾಗ ಬೇಕಂತಲೇ ಈ ರೀತಿ ಮಾಡುತ್ತಾರೆ. ತುಂಬ ಸಿನಿಮಾಗಳಿಗೆ ಹೀಗೆ ಮಾಡಲಾಗಿದೆ. ಚಿತ್ರದ ಬಿಡುಗಡೆಗಿಂತ ಒಂದು ದಿನ ಮುಂಚೆ ಬಂತು ಕೇಸ್​ ಹಾಕಿ ತೊಂದರೆ ಕೊಡುತ್ತಾರೆ. ಆಗ ನಾವು ಚೆನ್ನೈಗೆ ಹೋಗಿ ಸಾಂಗ್​ ಕಟ್​ ಮಾಡಿ, 3 ದಿನ ಸಾಂಗ್​ ರಿಲೀಸ್​ ಮಾಡಿರಲಿಲ್ಲ. ನಂತರ ಕೋರ್ಟ್​ ಆರ್ಡರ್​ ಸಿಕ್ಕ ಬಳಿಕ ರಿಲೀಸ್​ ಮಾಡಿದ್ದೆವು. ನಾವು ಆ ಕೇಸ್​ ಕೂಡ ಗೆದ್ದೆವು. ಮತ್ತೆ ಮೂರು ವರ್ಷದ ನಂತರ ಇನ್ನೊಂದು ಕೇಸ್​ ಹಾಕಿದ್ದಾರೆ’ ಎಂದು ರಕ್ಷಿತ್​ ಮಾಹಿತಿ ನೀಡಿದ್ದಾರೆ.

‘ಮತ್ತೆ ಕೇಸ್​ ಹಾಕಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಯಾಕೆಂದರೆ, ನಾನು ಆಗ ಮನೆ ಬದಲಾಯಿಸಿದ್ದೆ. ನನ್ನ ಮೇಲೆ, ಪರಮ್​ವಾ ಸ್ಡುಡಿಯೋ ಮೇಲೆ ಹಾಗೂ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಮೇಲೆ ಕೇಸ್​ ಹಾಕಿದ್ದಾರೆ. ಅದರ ನೋಟಿಸ್​ ಹಳೇ ಮನೆಗೆ ಹೋಗಿದೆ. ಅಜನೀಶ್​ ಅವರಿಗೆ ಸೇರಬೇಕಿದ್ದ ನೋಟಿಸ್​ ಕೂಡ ನನ್ನ ಹಳೇ ಮನೆಗೆ ಹೋಗಿದೆ. ನಮಗೆ ಇದು ಗೊತ್ತಿಲ್ಲದೇ ಇರುವುದರಿಂದ ಕೋರ್ಟ್​ನಿಂದ ವಾರಂಟ್​ ಜಾರಿ ಆಗಿತ್ತು. ನಮ್ಮ ಕೈಗೆ ನೋಟಿಸ್​ ತಲುಪಬಾರದು ಎಂಬುದೇ ಅವರ ಉದ್ದೇಶ ಆಗಿತ್ತು ಎನಿಸುತ್ತದೆ‘ ಎಂದು ರಕ್ಷಿತ್​ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

‘ನಾವು ಕಾನೂನಿನ ಹೋರಾಟ ಮುಂದುವರಿಸುತ್ತೇವೆ. ಯಾವುದೇ ಹಾಡಿನ ನೋಟ್ಸ್​ ಮತ್ತು ಸಾಹಿತ್ಯವನ್ನು ನಾವು ಕಾಪಿ ಮಾಡಿಲ್ಲ. ಹಂಸಲೇಖ ಅವರು 80ರ ದಶಕದಲ್ಲಿ ಬಳಸಿದ ರಿದಂ ನಾವು ಫಾಲೋ ಮಾಡಿದ್ದೇವೆ. ಮ್ಯೂಸಿಕ್​ ಕಾಪಿರೈಟ್​ ಕಾನೂನಿನ ಪ್ರಕಾರ ಅದು ತಪ್ಪಲ್ಲ. 11 ಸೆಕೆಂಡ್​ಗಳಷ್ಟು ಕಾಪಿ ಮಾಡಿದರೂ ತಪ್ಪಲ್ಲ. ಆದರೆ ಈ ಎರಡು ಹಾಡನ್ನು ಪಕ್ಕದಲ್ಲಿ ಇಟ್ಟುಕೊಂಡು ನೋಡಿ. ಕನಿಷ್ಠ 5 ಸೆಕೆಂಡ್​ಗಳಾದರೂ ನೋಟ್ಸ್​ ಕಾಪಿ ಆಗಿದೆ ಎಂಬುದನ್ನು ತೋರಿಸಿ. ಆಗ ನಾನು ಒಪ್ಪಿಕೊಳ್ಳುತ್ತೇನೆ. ಅಹಂ ಸಲುವಾಗಿ ಇದೆಲ್ಲ ಮಾಡುತ್ತಿದ್ದಾರೆ’ ಎಂದು ರಕ್ಷಿತ್​ ಪ್ರತಿಕ್ರಿಯೆ ನೀಡಿದ್ದಾರೆ.

ವಿಚಾರಣೆ ಸಲುವಾಗಿ ಇದೇ ಮೊದಲ ಬಾರಿಗೆ ರಕ್ಷಿತ್​ ಶೆಟ್ಟಿ ಕೋರ್ಟ್​ ಒಳಗೆ ಹೋಗಿ ಬಂದಿದ್ದಾರೆ. ಇದು ಅವರಿಗೆ ಮೊದಲ ಅನುಭವ. ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಇದುವರೆಗೆ ಯಾವತ್ತೂ ಕೋರ್ಟ್​ಗೆ ಬಂದಿರಲಿಲ್ಲ. ಇದು ನನಗೆ ಒಳ್ಳೆಯ ಅನುಭವ. ವಿಚಾರಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗೊತ್ತಾಯಿತು. ಒಂದು ವೇಳೆ ನನ್ನ ಮುಂದಿನ ಸಿನಿಮಾದಲ್ಲಿ ಕೋರ್ಟ್​ ದೃಶ್ಯಗಳನ್ನು ಬರೆಯುವ ಸಂದರ್ಭ ಬಂದರೆ ಈ ಅನುಭವ ಉಪಯೋಗಕ್ಕೆ ಬರಲಿದೆ. ಇದುವರೆಗೂ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಕೋರ್ಟ್​ ನೋಡಿದ್ದೆ ಅಷ್ಟೇ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: Kirik Party: ರಕ್ಷಿತ್​ ಶೆಟ್ಟಿಯ ಕಿರಿಕ್ ಪಾರ್ಟಿಗೆ ಸಂಕಷ್ಟ; ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

Published On - 8:38 am, Tue, 13 April 21

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ