Kirik Party: ರಕ್ಷಿತ್​ ಶೆಟ್ಟಿಯ ಕಿರಿಕ್ ಪಾರ್ಟಿಗೆ ಸಂಕಷ್ಟ; ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

Rakshith Shetty: ಕೋರ್ಟ್​ನ ಈ ಆದೇಶದಿಂದ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್​ಗೆ ಸಂಕಷ್ಟ ಎದುರಾಗಿದೆ. 

Kirik Party: ರಕ್ಷಿತ್​ ಶೆಟ್ಟಿಯ ಕಿರಿಕ್ ಪಾರ್ಟಿಗೆ ಸಂಕಷ್ಟ; ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ಕಿರಿಕ್ ಪಾರ್ಟಿ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Apr 09, 2021 | 5:56 PM

ಕಿರಿಕ್​ ಪಾರ್ಟಿ 2016ರಲ್ಲಿ ತೆರೆಕಂಡು ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಷ್ಟೇ ಅಲ್ಲ, ವಿವಾದಕ್ಕೂ ಕೂಡ ಕಾರಣವಾಗಿತ್ತು. ಸಿನಿಮಾದಲ್ಲಿ ಬಳಕೆಯಾದ ಒಂದು ಹಾಡಿನ ವಿರುದ್ಧ ಲಹರಿ ಮ್ಯೂಸಿಕ್​ ಕಾಪಿರೈಟ್​ ಕೇಸ್​ ಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ವಿರುದ್ಧ ಕೋರ್ಟ್​ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಕಾಪಿರೈಟ್ ಉಲ್ಲಂಘಿಸಿ ಹಾಡು ಬಳಸಿದ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ರಿಷಬ್​​ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಪರಮ್ವಾ ಸ್ಟುಡಿಯೋಸ್ ವಿರುದ್ಧ ಲಹರಿ ಸಂಸ್ಥೆ ಪ್ರಕರಣ ದಾಖಲು ಮಾಡಿತ್ತು. ‘ಕಿರಿಕ್ ಪಾರ್ಟಿ’ಯಲ್ಲಿ ಲಹರಿ ಕಂಪೆನಿಯ ಹಾಡುಗಳನ್ನು ಅನುಮತಿ ಇಲ್ಲದೇ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪ ಹೊರಿಸಲಾಗಿತ್ತು.

ಲಹರಿ ಕಂಪೆನಿಯ ದೂರಿನ ಅನ್ವಯ ಕಾಪಿ ರೈಟ್ಸ್ ಆಕ್ಟ್ 63ಎ, 63ಬಿ ಅಡಿಯಲ್ಲಿ ಕಿರಿಕ್​ ಪಾರ್ಟಿ ತಂಡದ ವಿರುದ್ಧ ಕೇಸ್ ಹಾಕಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ 9ನೇ ಎಸಿಎಂಎಂ ಕೋರ್ಟ್​ನಿಂದ ‘ಕಿರಿಕ್ ಪಾರ್ಟಿ’ ಟೀಂ ವಿರುದ್ಧ 8 ಬಾರಿ ಜಾಮೀನು ರಹಿತ ವಾರಂಟ್​​ ಜಾರಿ ಮಾಡಿತ್ತು. ಈಗ ಮತ್ತೊಮ್ಮೆ ಕೋರ್ಟ್​ ಜಾಮೀನು ರಹಿತ ವಾರಂಟ್​​ ಹೊರಡಿಸಿದೆ. ಅಲ್ಲದೆ, ಮೇ 27ಕ್ಕೆ ಕೋರ್ಟ್​ಗೆ ಕಿರಿಕ್​ ಪಾರ್ಟಿ ತಂಡವನ್ನು ಹಾಜರುಪಡಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಕೋರ್ಟ್​ನ ಈ ಆದೇಶದಿಂದ ನಿರ್ದೇಶಕ ರಿಷಬ್ ಶೆಟ್ಟಿ, ನಟ/ನಿರ್ಮಾಪಕ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್​ಗೆ ಸಂಕಷ್ಟ ಎದುರಾಗಿದೆ.

2016ರಲ್ಲಿ ತೆರೆಗೆ ಬಂದಿದ್ದ ಕಿರಿಕ್​ ಪಾರ್ಟಿ ಸಿನಿಮಾ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಅಷ್ಟೇ ಅಲ್ಲ ಬಾಕ್ಸ್​ ಆಫೀಸ್​ನಲ್ಲೂ ದೊಡ್ಡ ಮಟ್ಟದ ಗಳಿಕೆ ಮಾಡಿತ್ತು. ಈ ಸಿನಿಮಾ ರಕ್ಷಿತ್​ ಶೆಟ್ಟಿ, ರಿಷಬ್​ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿ ಅನೇಕರ ಕೆರಿಯರ್​​ಗೆ ದೊಡ್ಡ ಮೈಲೇಜ್​ ನೀಡಿತ್ತು.

ಇದನ್ನೂ ಓದಿ: Rashmika Mandanna: ರಕ್ಷಿತ್​ ಶೆಟ್ಟಿ ಬರ್ತ್​ಡೇ ವಿಶ್​​ಗೆ ಪ್ರೀತಿಯಿಂದ ಉತ್ತರಿಸಿದ ರಶ್ಮಿಕಾ ಮಂದಣ್ಣ!

ನಟ ರಕ್ಷಿತ್ ಶೆಟ್ಟಿ;ಸಕುಟುಂಬ ಸಮೇತ; ಸಿನೆಮಾದ ಮೊದಲ ಲುಕ್ ಹಂಚಿಕೊಂಡಿದ್ದಾರೆ

Published On - 3:06 pm, Fri, 9 April 21