Puglya Movie: ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿಗೆ ಪಾತ್ರವಾದ ಮರಾಠಿ ಚಿತ್ರ ‘ಪುಗ್ಲ್ಯಾ’
Moscow International Film Festival 2021: ಪುಗ್ಲ್ಯಾ ಚಿತ್ರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಲಾಸ್ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಅವಾರ್ಡ್ನಲ್ಲಿ ಗೌರವಕ್ಕೆ ಪಾತ್ರವಾಗಿದೆ. ಜತೆಗೆ ಲಂಡನ್, ಸ್ವೀಡನ್, ಆಸ್ಟ್ರೇಲಿಯಾ, ಫಿಲಿಫೈನ್ಸ್, ಟರ್ಕಿ, ಇರಾನ್, ಅರ್ಜೆಂಟೀನಾ, ರಷ್ಯಾ, ಸ್ಪೇನ್, ಪಾಕಿಸ್ತಾನ, ಕೆನಡಾ, ಅಮೆರಿಕಾ ಸೇರಿದಂತೆ ಕೆನಡಾದ ವಿವಿಧ ಅಂತರಾಷ್ಟ್ರೀಯ ಚಲನಚಿತ್ರ ಸ್ಪರ್ಧೆಗಳಲ್ಲಿಯೂ ಸ್ಪರ್ಧಿಸಿದೆ.
2021ರ ಮಾಸ್ಕೋ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುತ್ತಮ ವಿದೇಶಿ ಭಾಷಾ ಪ್ರಶಸ್ತಿಯನ್ನು ಮರಾಠಿ ಚಿತ್ರವಾದ ‘ಪುಗ್ಲ್ಯಾ’ ಚಿತ್ರ ಪಡೆದುಕೊಂಡಿದೆ. ಪುಗ್ಲ್ಯಾ ಚಿತ್ರ ಕಥೆಗೆ ಪ್ರೆಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದು ಇಡೀ ಚಿತ್ರ ತಂಡಕ್ಕೆ ಸಂತೋಷ ನೀಡುವ ವಿಚಾರ. ಅದರಲ್ಲಿಯೂ ಪುಗ್ಲ್ಯಾ ಚಿತ್ರ ಮಾಸ್ಕೋ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬಾಚಿಕೊಂಡಿರುವುದು ತುಂಬಾ ಹೆಮ್ಮೆಯ ಸಂಗತಿ ಎಂದು ನಿರ್ದೇಶಕ ವಿನೋದ್ ಸ್ಯಾಮ್ ಪೀಟರ್ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಚಿತ್ರ ಕಥೆ ಮಗುವಿನ ಮುಗ್ಧತೆಯ ಬಗ್ಗೆ ತಿಳಿಸಿಕೊಡುತ್ತದೆ. ಚಿತ್ರದ ನಿರ್ಮಾಪಕರೇ ಪುಗ್ಲ್ಯಾ ಚಿತ್ರ ಕಥೆಯನ್ನೂ ಬರೆದಿದ್ದಾರೆ.
ಪುಗ್ಲ್ಯಾ ಚಿತ್ರ ಸುಮಾರು 10 ವರ್ಷ ವಯಸ್ಸಿನ ರುಷಾಬ್ ಮತ್ತು ದತ್ತಾ ಎಂಬ ಇಬ್ಬರು ಹುಡುಗರ ನಡುವೆ ಕಥೆ ಸಾಗುತ್ತದೆ. ಒಂದು ನಾಯಿ ಇಬ್ಬರು ಹುಡುಗರ ಜೀವನದಲ್ಲಿ ಪ್ರವೇಶ ಮಾಡುತ್ತದೆ. ನಗರ ಮತ್ತು ಹಳ್ಳಿಯಿಂದ ಬಂದ ಮಕ್ಕಳ ಜೀವನಾಧಾರಿತ ಕಥೆ ಜೊತೆಗೆ ಅವರ ಜೀವನದ ಮೇಲೆ ಬೀಳುವ ಪ್ರಭಾವವನ್ನು ಪುಗ್ಲ್ಯಾ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಜೊತೆಗೆ ಮಕ್ಕಳಲ್ಲಿನ ಮುಗ್ಧತೆಯೊಂದಿಗೆ ಸರಳತೆಯನ್ನು ತೋರ್ಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ನಾಯಿಯ ಕುರಿತಾಗಿ ಬೇರೆಯೇ ಅಭಿಪ್ರಾಯ ಹೊಂದಿದ್ದೆ. ಆದರೆ ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಣೆ ಹೊಂದಿದೆ ಎಂಬುದನ್ನು ನಾನು ಅರಿತುಕೊಂಡೆ. ಸಾಮಾನ್ಯವಾಗಿ ನಾಯಿಮರಿ ಅಂದಾಕ್ಷಣ ಮಕ್ಕಳ ಆಸಕ್ತಿ ಪ್ರಾಣಿಗಳ ಕಡೆ ಹೆಚ್ಚು. ಪ್ರಾಣಿಗಳೆಂದಾಗ ಮಕ್ಕಳು ಬೇಗ ಸಂವಹನ ನಡೆಸುತ್ತಾರೆ ಎಂದು ಅವರು ಚಿತ್ರದ ಕುರಿತಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಚಿತ್ರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಲಾಸ್ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಅವಾರ್ಡ್ನಲ್ಲಿ ಗೌರವಕ್ಕೆ ಪಾತ್ರವಾಗಿದೆ. ಜತೆಗೆ ಲಂಡನ್, ಸ್ವೀಡನ್, ಆಸ್ಟ್ರೇಲಿಯಾ, ಫಿಲಿಫೈನ್ಸ್, ಟರ್ಕಿ, ಇರಾನ್, ಅರ್ಜೆಂಟೀನಾ, ರಷ್ಯಾ, ಸ್ಪೇನ್, ಪಾಕಿಸ್ತಾನ, ಕೆನಡಾ, ಅಮೆರಿಕಾ ಸೇರಿದಂತೆ ಕೆನಡಾದ ವಿವಿಧ ಅಂತರಾಷ್ಟ್ರೀಯ ಚಲನಚಿತ್ರ ಸ್ಪರ್ಧೆಗಳಲ್ಲಿಯೂ ಸ್ಪರ್ಧಿಸಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್; ಸಿನಿಮಾಕ್ಕಾಗಿ ಒಂದಾದ ಸಲ್ಮಾನ್ ಖಾನ್, ಮಹೇಶ್ ಬಾಬು, ಪೃಥ್ವಿರಾಜ್!
ವಕೀಲ್ ಸಾಬ್ ಸಿನಿಮಾಗೆ ಮಹೇಶ್ ಬಾಬು ವಿಮರ್ಶೆ! ಪವನ್ ಕಲ್ಯಾಣ್ ಚಿತ್ರದಲ್ಲಿ ಪ್ರಿನ್ಸ್ ಮೆಚ್ಚಿದ್ದೇನು?
Published On - 12:15 pm, Tue, 13 April 21