ವಕೀಲ್ ಸಾಬ್ ಸಿನಿಮಾಗೆ ಮಹೇಶ್ ಬಾಬು ವಿಮರ್ಶೆ! ಪವನ್ ಕಲ್ಯಾಣ್ ಚಿತ್ರದಲ್ಲಿ ಪ್ರಿನ್ಸ್ ಮೆಚ್ಚಿದ್ದೇನು?
ವಕೀಲ್ ಸಾಬ್ ಸಿನಿಮಾ ಬಗ್ಗೆ ಮಹೇಶ್ ಬಾಬು ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಅವರ ಅಭಿಪ್ರಾಯವನ್ನು ಕೇಳಿದ ಬಳಿಕ ಇನ್ನಷ್ಟು ಪ್ರೇಕ್ಷಕರು ವಕೀಲ್ ಸಾಬ್ ನೋಡಲು ಮುಂದಾಗುತ್ತಿದ್ದಾರೆ.
‘ಪವರ್ ಸ್ಟಾರ್’ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಟಾಲಿವುಡ್ನ ಸ್ಟಾರ್ ನಟರು ಕೂಡ ವಕೀಲ್ ಸಾಬ್ ನೋಡಿ ಮೆಚ್ಚಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಸಹೋದರ ‘ಮೆಗಾ ಸ್ಟಾರ್’ ಚಿರಂಜೀವಿ ಅವರು ಕುಟುಂಬ ಸಮೇತರಾಗಿ ವಕೀಲ್ ಸಾಬ್ ನೋಡಿ ಇಷ್ಟಪಟ್ಟಿದ್ದರು. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಈ ಚಿತ್ರ ಅವರಿಗೆ ಸಖತ್ ಇಷ್ಟವಾಯಿತು. ಈಗ ಟಾಲಿವುಡ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಕೂಡ ಈ ಚಿತ್ರ ಕಂಡು ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ಪವನ್ ಕಲ್ಯಾಣ್ ಟಾಪ್ ಫಾರ್ಮ್ನಲ್ಲಿ ಇದ್ದಾರೆ. ವಕೀಲ್ ಸಾಬ್ ಸಿನಿಮಾದಲ್ಲಿ ಪವರ್ಫುಲ್ ಆದಂತಹ ಪರ್ಫಾಮೆನ್ಸ್ ನೀಡಿದ್ದಾರೆ. ಎಂಥ ಅದ್ಭುತವಾದ ಕಮ್ಬ್ಯಾಕ್. ಪ್ರಕಾಶ್ ರಾಜ್ ನಟನೆ ಕೂಡ ಬ್ರಿಲಿಯಂಟ್’ ಎಂದು ಮಹೇಶ್ ಬಾಬು ಅವರು ಚಿತ್ರದ ಬಗ್ಗೆ ತಮ್ಮ ವಿಮರ್ಶೆ ತಿಳಿಸಿದ್ದಾರೆ. ಅವರ ಅಭಿಪ್ರಾಯವನ್ನು ಕೇಳಿದ ಬಳಿಕ ಇನ್ನಷ್ಟು ಪ್ರೇಕ್ಷಕರು ವಕೀಲ್ ಸಾಬ್ ನೋಡಲು ಮುಂದಾಗುತ್ತಿದ್ದಾರೆ.
.@PawanKalyan in top form… Delivers a power-packed performance in #VakeelSaab!! What a comeback ??? @prakashraaj is absolutely brilliant ??
— Mahesh Babu (@urstrulyMahesh) April 10, 2021
ಸಿನಿಮಾದಲ್ಲಿನ ಇನ್ನುಳಿದ ಮುಖ್ಯಪಾತ್ರಗಳಿಗೆ ಬಣ್ಣ ಹಚ್ಚಿರುವ ಅನನ್ಯಾ, ನಿವೇತಾ ಥಾಮಸ್, ಅಂಜಲಿ ನಟನೆಯನ್ನೂ ಮಹೇಶ್ ಬಾಬು ಮೆಚ್ಚಿಕೊಂಡಿದ್ದಾರೆ. ಥಮನ್ ಅವರ ಹಿನ್ನಲೆ ಸಂಗೀತಕ್ಕೆ ಅವರು ಫಿದಾ ಆಗಿದ್ದಾರೆ. ಚಿತ್ರ ದೊಡ್ಡ ಯಶಸ್ಸು ಕಾಣಲಿ ಎಂದು ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. 2018ರಲ್ಲಿ ಬಂದ ‘ಅಜ್ಞಾತವಾಸಿ’ ಸಿನಿಮಾ ಬಳಿಕ ದೀರ್ಘ ಗ್ಯಾಪ್ ನಂತರ ಪವನ್ ಕಲ್ಯಾಣ್ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳು ಈ ಚಿತ್ರವನ್ನು ಮುಗಿಬಿದ್ದು ವೀಕ್ಷಿಸಿದ್ದಾರೆ.
ಹಿಂದಿಯ ಪಿಂಕ್ ಸಿನಿಮಾದ ತೆಲುಗು ರಿಮೇಕ್ ಆಗಿ ವಕೀಲ್ ಸಾಬ್ ಮೂಡಿಬಂದಿದೆ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡಿದ್ದಾರೆ. ಮೊದಲ ದಿನ ಈ ಸಿನಿಮಾ ವಿಶ್ವಾದ್ಯಂತ ಅಂದಾಜು 40 ಕೋಟಿ ರೂ. ಗಳಿಸಿದೆ. ಆ ಮೂಲಕ ಪವನ್ ಕಲ್ಯಾಣ್ ಖಾತೆಗೆ ಒಂದು ಹಿಟ್ ಸಿನಿಮಾ ಸೇರಿಕೊಂಡಂತಾಗಿದೆ. ಈ ಚಿತ್ರಕ್ಕೆ ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Vakeel Saab Collection: ಪವನ್ ಕಲ್ಯಾಣ್ ವಕೀಲ್ ಸಾಬ್ ಚಿತ್ರ ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು?
(Pawan Kalyan starrer Vakeel Saab movie review by Mahesh Babu)