Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಸಿನಿಮಾಕ್ಕಾಗಿ ಒಂದಾದ ಸಲ್ಮಾನ್​ ಖಾನ್​, ಮಹೇಶ್​ ಬಾಬು, ಪೃಥ್ವಿರಾಜ್!

ಸಂದೀಪ್​ ಅವರ ಪಾತ್ರದಲ್ಲಿ ಅದಿವಿ ಶೇಷ್​​ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಆಗಿತ್ತು. ಇದನ್ನು ನೋಡಿ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದರು.

ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಸಿನಿಮಾಕ್ಕಾಗಿ ಒಂದಾದ ಸಲ್ಮಾನ್​ ಖಾನ್​, ಮಹೇಶ್​ ಬಾಬು, ಪೃಥ್ವಿರಾಜ್!
ಮಹೇಶ್​ ಬಾಬು-ಸಲ್ಮಾನ್​ ಖಾನ್​- ಪೃಥ್ವಿರಾಜ್​
Follow us
ರಾಜೇಶ್ ದುಗ್ಗುಮನೆ
|

Updated on: Apr 11, 2021 | 5:39 PM

ಮೇಜರ್​​ ಸಂದೀಪ್​ ಉನ್ನಿಕೃಷ್ಣನ್ ಅವರು ಮುಂಬೈ ದಾಳಿ ವೇಳೆ ವೀರ ಮರಣ ಹೊಂದಿದ್ದರು. ಇವರ ಜೀವನ ಆಧರಿಸಿ ಈಗ ಮೇಜರ್​ ಹೆಸರಿನ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕಾಗಿ ಸಲ್ಮಾನ್​ ಖಾನ್​, ಮಹೇಶ್​ ಬಾಬು ಹಾಗೂ ಪೃಥ್ವಿರಾಜ್​ ಒಂದಾಗಿದ್ದಾರೆ. ಹಾಗಂತ ಇವರು ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಿಗೆ ಚಿತ್ರದ ಟೀಸರ್​ ರಿಲೀಸ್​ ಮಾಡುತ್ತಿದ್ದಾರೆ. ಸಂದೀಪ್​ ಉನ್ನಿಕೃಷ್ಣನ್​ ಜೀವನ ಆಧರಿಸಿ ಮೇಜರ್​ ಸಿನಿಮಾ ಮಾಡಲಾಗುತ್ತಿದೆ. ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈಗ ಚಿತ್ರದ ಟೀಸರ್​ ಅನ್ನು ಸಿನಿಮಾ ತಂಡ ಲಾಂಚ್​ ಮಾಡುತ್ತಿದೆ. ಹಿಂದಿಯಲ್ಲಿ ಸಲ್ಮಾನ್​ ಖಾನ್, ತೆಲುಗಿನಲ್ಲಿ ಮಹೇಶ್​​ ಬಾಬು ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಟೀಸರ್​ ಲಾಂಚ್ ಮಾಡುತ್ತಿದ್ದಾರೆ.

ಸಂದೀಪ್​ ಅವರು ಜೀವನದಲ್ಲಿ ಹೇಗಿದ್ದರು, ಮುಂಬೈ ದಾಳಿ ವೇಳೆ ಅವರು ಅದನ್ನು ಹೇಗೆ ಎದುರಿಸಿದರು ಎನ್ನುವುದನ್ನು ಟೀಸರ್​ನಲ್ಲಿ ತೋರಿಸಲಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಂದೀಪ್​ ಅವರ ಪಾತ್ರದಲ್ಲಿ ಅದಿವಿ ಶೇಷ್​​ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಆಗಿತ್ತು. ಇದನ್ನು ನೋಡಿ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದರು. 2008ರಲ್ಲಿ ಮುಂಬೈ ದಾಳಿ ನಡೆದಿತ್ತು. ಈ ದಾಳೆ ವೇಳೆ ಮೇಜರ್​ ಸಂದೀಪ್​ ಹುತಾತ್ಮರಾಗಿದ್ದರು. ಹಿಂದಿ, ತೆಲುಗು ಹಾಗೂ ಮಲಯಾಳಂನಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಶಶಿ ಕಿರಣ್​ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾಗಳು ಸಾಕಷ್ಟು ತೆರೆಗೆ ಬರುತ್ತಿವೆ. ಬೇರೆ ಬೇರೆ ಭಾಷೆಯ ಪ್ರೇಕ್ಷಕರನ್ನು ಸೆಳೆಯಲು ಪ್ಯಾನ್​ ಇಂಡಿಯಾ ಸಿನಿಮಾ ಸಹಕಾರಿ. ಸಂದೀಪ್​ ಖ್ಯಾತಿ ಇಡೀ ದೇಶಾದ್ಯಂತ ಹಬ್ಬಿದೆ. ಹೀಗಾಗಿ, ಮೂರು ಭಾಷೆಗಳಲ್ಲಿ ಸಿನಿಮಾ ರಿಲೀಸ್​ ಮಾಡುವ ಮೂಲಕ ಹೆಚ್ಚು ಪ್ರೇಕ್ಷಕರನ್ನು ತಲುಪುವ ಆಲೋಚನೆ ನಿರ್ದೇಶಕರದ್ದು.

ಇದನ್ನೂ ಓದಿ: ಮದಗಜ; ನಿರ್ದೇಶಕ ಮಹೇಶ್​ಗೆ ರಾಬರ್ಟ್​ ನಿರ್ಮಾಪಕ ಉಮಾಪತಿಯಿಂದ ದುಬಾರಿ ಕಾರ್ ಗಿಫ್ಟ್​!

ವಕೀಲ್​ ಸಾಬ್​ ಸಿನಿಮಾಗೆ ಮಹೇಶ್​ ಬಾಬು ವಿಮರ್ಶೆ! ಪವನ್​ ಕಲ್ಯಾಣ್​ ಚಿತ್ರದಲ್ಲಿ ಪ್ರಿನ್ಸ್​ ಮೆಚ್ಚಿದ್ದೇನು?

Live: ದ್ವಿತೀಯ ಪಿಯುಸಿ ಫಲಿತಾಂಶ 2025 ಲೈವ್​ ವಿಡಿಯೋ
Live: ದ್ವಿತೀಯ ಪಿಯುಸಿ ಫಲಿತಾಂಶ 2025 ಲೈವ್​ ವಿಡಿಯೋ
ಸಿಲಿಂಡರ್ ಬೆಲೆ ಹೆಚ್ಚಾಗಿರುವುದನ್ನು ಸರ್ಕಾರ ಗುರಾಣಿಯಾಗಿ ಬಳಸಬಾರದು: ರವಿ
ಸಿಲಿಂಡರ್ ಬೆಲೆ ಹೆಚ್ಚಾಗಿರುವುದನ್ನು ಸರ್ಕಾರ ಗುರಾಣಿಯಾಗಿ ಬಳಸಬಾರದು: ರವಿ
ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಹೇಳಿಕೆಗೆ ಪರಮೇಶ್ವರ್ ವಿಷಾದ
ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಹೇಳಿಕೆಗೆ ಪರಮೇಶ್ವರ್ ವಿಷಾದ
ಹಾಸನಕ್ಕೆ ನಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ: ರೇವಣ್ಣ
ಹಾಸನಕ್ಕೆ ನಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ: ರೇವಣ್ಣ
ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ