AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravichandran: ರವಿಚಂದ್ರನ್​ ಸಿಗರೇಟ್​ ಸೇದ್ತಾರಾ? ಸೋಶಿಯಲ್​ ಮೀಡಿಯಾಗೆ ಬಂದು ಸತ್ಯ ಬಹಿರಂಗಪಡಿಸಿದ ಕ್ರೇಜಿ ಸ್ಟಾರ್​!

V Ravichandran: ‘ಒನ್​ ಆ್ಯಂಡ್​ ಓನ್ಲಿ ರವಿಚಂದ್ರನ್​’ (1n1ly Ravichandran) ಎಂಬುದು ಅವರ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಗಳ ಹೆಸರು. ಮೊದಲ ದಿನವೇ ಅವರು ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Ravichandran: ರವಿಚಂದ್ರನ್​ ಸಿಗರೇಟ್​ ಸೇದ್ತಾರಾ? ಸೋಶಿಯಲ್​ ಮೀಡಿಯಾಗೆ ಬಂದು ಸತ್ಯ ಬಹಿರಂಗಪಡಿಸಿದ ಕ್ರೇಜಿ ಸ್ಟಾರ್​!
ವಿ. ರವಿಚಂದ್ರನ್​
ಮದನ್​ ಕುಮಾರ್​
| Updated By: Digi Tech Desk|

Updated on:Apr 13, 2021 | 4:02 PM

Share

ಯುಗಾದಿ ಹಬ್ಬ ಎಂದರೆ ಹೊಸ ವರ್ಷದ ಆರಂಭ. ಈ ಶುಭ ಸಂದರ್ಭದಲ್ಲಿ ಏನಾದರೂ ಹೊಸದನ್ನು ಪ್ರಾರಂಭಿಸುವ ನಿರ್ಣಯ ಅನೇಕರದ್ದು. ಅದೇ ರೀತಿ ಕ್ರೇಜಿ ಸ್ಟಾರ್​ ರವಿಚಂದ್ರನ್​ ಅವರು ಸೋಶಿಯಲ್​ ಮೀಡಿಯಾದ ಜಗತ್ತಿನಲ್ಲಿ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ಟ್ವಿಟರ್ ಮತ್ತು ಯೂಟ್ಯೂಬ್​ನಲ್ಲಿ ಅಧಿಕೃತ ಖಾತೆಗಳನ್ನು ತೆರೆದಿದ್ದಾರೆ. ಈ ಮೂಲಕ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ.

ರವಿಚಂದ್ರನ್​ ಅವರು ಸೋಶಿಯಲ್​ ಮೀಡಿಯಾಗೆ ಕಾಲಿಡುತ್ತಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿಬರುತ್ತಿತ್ತು. ಯುಗಾದಿ ಹಬ್ಬಕ್ಕೆ ಸರಿಯಾಗಿ ಅವರು ಅಧಿಕೃತ ಖಾತೆಗಳನ್ನು ಆರಂಭಿಸಿದ್ದಾರೆ. ಒನ್​ ಆ್ಯಂಡ್​ ಓನ್ಲಿ ರವಿಚಂದ್ರನ್​ (1n1ly Ravichandran) ಎಂಬುದು ಅವರ ಅಧಿಕೃತ ಖಾತೆಗಳ ಹೆಸರು. ಮೊದಲ ದಿನವೇ ಅವರು ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎಲ್ಲರಿಂದಲೂ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

‘ಒನ್​ ಆ್ಯಂಡ್​ ಓನ್ಲಿ ರವಿಚಂದ್ರನ್​’ ಯೂಟ್ಯೂಬ್​ ಖಾತೆಯಲ್ಲಿ ಕೆಲವು ವಿಡಿಯೋಗಳನ್ನು ಕ್ರೇಜಿ ಸ್ಟಾರ್​ ರಿಲೀಸ್​ ಮಾಡಿದ್ದಾರೆ. ಅದರಲ್ಲಿ ತಮ್ಮ ಫ್ಯಾಮಿಲಿ ಬಗ್ಗೆ, ಕೊರೊನಾ ಮುನ್ನಚ್ಚರಿಕೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಧೂಮಪಾನದ ಬಗ್ಗೆಯೂ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ತುಂಬ ಇಷ್ಟವಾಗಿದೆ. ನಿಜ ಜೀವನದಲ್ಲಿ ರವಿಚಂದ್ರನ್​ ಸಿಗರೇಟ್​ ಸೇದುತ್ತಾರಾ ಇಲ್ಲವಾ ಎಂಬ ಪ್ರಶ್ನೆ ಹಲವರ ಮನದಲ್ಲಿ ಇರಬಹುದು. ಅದಕ್ಕೆ ಈ ವಿಡಿಯೋದಲ್ಲಿ ಉತ್ತರ ಸಿಕ್ಕಿದೆ.

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಅದರಿಂದ ಸಾವು ಸಂಭವಿಸುತ್ತದೆ. ಈ ಮಾತನ್ನು ಎಲ್ಲ ಸಿಗರೇಟ್​ ಪ್ಯಾಕ್​ ಮೇಲೆ ಬರೆದಿರುತ್ತಾರೆ. ಸಿನಿಮಾಗೆ ಹೋದರೆ ಮೊದಲು ತೋರಿಸೋದೇ ಇದು. ಆದರೂ ಯಾರೂ ಸಿಗರೇಟ್​ ಸೇದೋದು ಕಡಿಮೆ ಮಾಡಿಲ್ಲ. ಸರ್ಕಾರಕ್ಕೆ ಇದರಿಂದ ಆದಾಯವೂ ಕಡಿಮೆ ಆಗಿಲ್ಲ. ಯಾಕೆಂದರೆ ನಮ್ಮಲ್ಲಿ ಒಂದು ಗುಣ ಇದೆ. ನಾವು ಎಲ್ಲದಕ್ಕೂ ಚಾನ್ಸ್​ ತಗೊಳ್ತೀವಿ. ತಪ್ಪು ಅಂತ ಗೊತ್ತಿದ್ದರೂ ತಪ್ಪು ಮಾಡುವ ಗುಣ ನಮ್ಮಲ್ಲಿ ಇದೆ. ಅಬ್ಬಬ್ಬಾ ಎಂದರೆ ಕ್ಷಮೆ ಕೇಳಿ ಸರಿಮಾಡಿಕೊಳ್ಳಬಹುದು ಎಂದುಕೊಳ್ಳುತ್ತೇನೆ. ಕೊರೊನಾ ಜೊತೆ ಚಾನ್ಸ್​ ತಗೋಬೇಡಿ. ಒಳ್ಳೇದಲ್ಲ. ನಾನು ಸಿಗರೇಟ್​ ಸೇದೋದು ಸಿನಿಮಾದಲ್ಲಿ ಮಾತ್ರ. ಪಾತ್ರಗಳಿಗಾಗಿ ಮಾತ್ರ’ ಎಂದು ರವಿಚಂದ್ರನ್​ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಹಿರಿಯ ಸ್ಟಾರ್ ಕಲಾವಿದರು ಸೋಶಿಯಲ್​ ಮೀಡಿಯಾ ಬಳಸುತ್ತಿದ್ದಾರೆ. ಶಿವರಾಜ್​ಕುಮಾರ್​, ರಮೇಶ್​ ಅರವಿಂದ್​, ಜಗ್ಗೇಶ್​, ಸುಧಾರಾಣಿ ಮುಂತಾದವರು ಈ ವಿಚಾರದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಹಾಗಿದ್ದರೂ ರವಿಚಂದ್ರನ್​ ಅವರು ಇಷ್ಟು ದಿನ ಸೋಶಿಯಲ್​ ಮೀಡಿಯಾಗೆ ಕಾಲಿಟ್ಟಿರಲಿಲ್ಲ ಎಂದು ಅವರ ಫ್ಯಾನ್ಸ್​ ಸ್ವಲ್ಪ ಬೇಸರ ಮಾಡಿಕೊಂಡಿದ್ದರು. ಆದರೆ ಆ ಬೇಸರಕ್ಕೆ ಈಗ ಪೂರ್ಣವಿರಾಮ ಬಿದ್ದಿದೆ.

ಇದನ್ನೂ ಓದಿ: ರವಿಚಂದ್ರನ್​ ಸದಾ ಕಪ್ಪು ಬಟ್ಟೆ ಹಾಕೋದು ಯಾಕೆ? ಎಲ್ಲರ ಎದುರು ಗುಟ್ಟು ರಟ್ಟು ಮಾಡಿದ ಸುದೀಪ್​!

ಅಂತೂ ದೊಡ್ಡ ನಿರ್ಧಾರ ತೆಗೆದುಕೊಂಡ ರವಿಚಂದ್ರನ್​!​ ಇನ್ಮುಂದೆ ನಕಲಿಗಳ ಆಟ ನಡೆಯೋದಿಲ್ಲ

(V Ravichandran enters social media with One and Only Ravichandran official account)

Published On - 12:30 pm, Tue, 13 April 21

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ