ದಿವ್ಯಾ ಸುರೇಶ್​ ವಿಚಾರಕ್ಕೆ ಬಿಕ್ಕಿ ಬಿಕ್ಕಿ ಅತ್ತ ಚಕ್ರವರ್ತಿ ಚಂದ್ರಚೂಡ್​! ಇಡೀ ಮನೆಯೇ ಎಮೋಷನಲ್​

Bigg Boss Kannada: ಚಕ್ರವರ್ತಿ ಚಂದ್ರಚೂಡ್​ ಅವರು ಒಡೆದು ಆಳುವ ಬುದ್ಧಿಯವರು ಎಂದು ಎಲ್ಲರೂ ಬ್ರ್ಯಾಂಡ್​ ಮಾಡಿದ್ದರು. ಅಂಥ ಗಟ್ಟಿಮನುಷ್ಯ ಈಗ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾರೆ.

  • TV9 Web Team
  • Published On - 15:11 PM, 13 Apr 2021
ದಿವ್ಯಾ ಸುರೇಶ್​ ವಿಚಾರಕ್ಕೆ ಬಿಕ್ಕಿ ಬಿಕ್ಕಿ ಅತ್ತ ಚಕ್ರವರ್ತಿ ಚಂದ್ರಚೂಡ್​! ಇಡೀ ಮನೆಯೇ ಎಮೋಷನಲ್​
(ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ - ಚಕ್ರವರ್ತಿ ಚಂದ್ರಚೂಡ್​)

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಅವರು ತಮ್ಮದೇ ಆದ ರೀತಿಯಿಂದ ಗುರುತಿಸಿಕೊಂಡಿದ್ದಾರೆ. ಟಾಸ್ಕ್​ ವಿಚಾರದಲ್ಲಿ ಅವರು ತುಂಬ ಸ್ಟ್ರಾಂಗ್​ ಆಗಿ ಪೈಪೋಟಿ ನೀಡುತ್ತಾರೆ. ಮಂಜು ಜೊತೆಗಿನ ಸ್ನೇಹ-ಪ್ರೀತಿಯ ಕಾರಣದಿಂದ ಹೆಚ್ಚು ಹೈಲೈಟ್​ ಆಗುತ್ತಾರೆ. ಪ್ರಾಕ್ಟಿಕಲ್​ ಆಗಿ ಆಲೋಚನೆ ಮಾಡುವುದರಿಂದ ಅವರು ಕೆಲವೊಮ್ಮೆ ಎಲ್ಲರ ನಿಷ್ಠುರ ಕೂಡ ಕಟ್ಟಿಕೊಳ್ಳಬೇಕಾಗಿದೆ. ಇಂಥ ದಿವ್ಯಾ ಸುರೇಶ್​ ಅವರಿಂದಾಗಿ ಬಿಗ್​ ಬಾಸ್​ ಮನೆಯೊಳಗೆ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್​ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ!

ವೈಲ್ಡ್​ ಕಾರ್ಡ್​ ಮೂಲಕ ದೊಡ್ಮನೆಗೆ ಕಾಲಿಟ್ಟವರು ಚಕ್ರವರ್ತಿ ಚಂದ್ರಚೂಡ್​. ಬಿಗ್​ ಬಾಸ್​ಗೆ ಬಂದ ಮೊದಲ ದಿನವೇ ಅವರನ್ನು ಕಂಡು ಬಹುತೇಕರು ಕಂಗಾಲಾಗಿದ್ದರು. ಮಾತಿನಲ್ಲಿ ಎಂಥವರನ್ನಾದರೂ ಸೋಲಿಸಬಲ್ಲ ಅವರ ಚಾಕಚಕ್ಯತೆಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ದೊಡ್ಮನೆಯಲ್ಲಿರುವ ಗುಂಪುಗಾರಿಕೆಯನ್ನು ಒಡೆದುಹಾಕಲು ಚಂದ್ರಚೂಡ್​ ಪ್ರಯುತ್ನಿಸಿದ್ದರು. ಹಾಗಾಗಿ ಅವರು ಒಡೆದು ಆಳುವ ಬುದ್ಧಿಯವರು ಎಂದು ಎಲ್ಲರೂ ಬ್ರ್ಯಾಂಡ್​ ಮಾಡಿದ್ದರು. ಅಂಥ ಗಟ್ಟಿಮನುಷ್ಯ ಈಗ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾರೆ.

ಇತ್ತೀಚೆಗೆ ಬಿಗ್​ ಬಾಸ್​ನಲ್ಲಿ ‘ಒಲವಿನ ಉಡುಗೊರೆ ಕೊಡಲೇನು’ ಎಂಬ ಟಾಸ್ಕ್​ ನೀಡಲಾಗಿತ್ತು. ಬಿಗ್​ ಬಾಸ್​ನಲ್ಲಿ ತಮಗೆ ಇಷ್ಟವಾದ ಹುಡುಗಿಗೆ ಹುಡುಗರು ಬಲೂನ್​ ನೀಡಬೇಕಿತ್ತು. ಆದಕ್ಕೆ ಚಕ್ರವರ್ತಿ ಚಂದ್ರಚೂಡ್​ ಆಯ್ಕೆ ಮಾಡಿಕೊಂಡಿದ್ದು ದಿವ್ಯಾ ಸುರೇಶ್​ ಅವರನ್ನು. ‘ಮರಳಿನ ಮೇಲೆ ಬರೆದ ಹೆಸರು ಯಾವತ್ತೂ ಶಾಶ್ವತವಲ್ಲ. ಅದು ಅಳಿಸಿ ಹೋಗುತ್ತಲೇ ಇರುತ್ತದೆ. ಹಾಗೆಯೇ ಪ್ರೀತಿಯಲ್ಲಿ ಎಷ್ಟೇ ಬಾರಿ ಸೋತರೂ ಮತ್ತೆ ಮತ್ತೆ ಪ್ರೀತಿಸುವುದನ್ನು ನಾನು ಜೀವಂತವಾಗಿರವವರೆಗೆ ಬಿಡುವುದಿಲ್ಲ. ಯಾಕೆಂದರೆ ಪ್ರೀತಿ ನನ್ನ ಶಕ್ತಿ’ ಎಂದು ದಿವ್ಯಾ ಬಗ್ಗೆ ಚಂದ್ರಚೂಡ್​ ಮಾತು ಆರಂಭಿಸಿದರು.

‘ದಿವ್ಯಾ ಕೂಡ ನನ್ನ ಥರ ವೈಲ್ಡ್​. ಮೇಲ್ನೋಟಕ್ಕೆ ಮೈಲ್ಡ್​. ಆದರೆ ಮನಸ್ಸು ತುಂಬಾ ಚೈಲ್ಡ್​. ಮಗುವಿನ ಥರ ಹಠ ಮಾಡ್ತಾಳೆ. ಪ್ರೀತಿಸುವವರಿಗೆ ಈ ಲಕ್ಷಣ ಇರುತ್ತದೆ. ದಿವ್ಯಾ ಸುರೇಶ್​ನ ನೋಡಿದಾಗ ನನಗೆ ನನ್ನ ಮಗಳು ನೆನಪಾಗ್ತಾಳೆ. ಯಾಕೆಂದರೆ ನಾನು ಮತ್ತು ದಿವ್ಯಾ ಒಂದೇ ರೀತಿ ಸಾಗಿ ಬಂದಿದ್ದೇವೆ. ತಂದೆ-ತಾಯಿಯನ್ನು ದೂರ ಮಾಡಿಕೊಂಡಿದ್ವಿ. ನಾನು ಸಿಂಗಲ್​ ಪೇರೆಂಟ್​. ಅದರ ಕಷ್ಟ ನನಗೆ ಗೊತ್ತು. ನಾನು ಜೈಲಿಗೆ ಹೋದಾಗ ನನ್ನ ಮಗಳು ಬಂದು ನೋಡಿದ್ದಳು. ನನ್ನ ಮಗಳ ರೀತಿ ಇರುವ ದಿವ್ಯಾಗೆ ಈ ಬಲೂನ್​ ಕೊಡುತ್ತೇನೆ’ ಎಂದು ಚಂದ್ರಚೂಡ್​ ಸಿಕ್ಕಾಪಟ್ಟೆ ಅತ್ತುಬಿಟ್ಟರು.

ಚಂದ್ರವರ್ತಿ ಚಂದ್ರಚೂಡ್​ ನೀಡಿದ ಬಲೂನ್​ ಪಡೆದುಕೊಂಡು ದಿವ್ಯಾ ಸುರೇಶ್​ ಕೂಡ ಬಿಕ್ಕಿ ಬಿಕ್ಕಿ ಅತ್ತರು. ಬಹಳ ವರ್ಷಗಳಿಂದ ತಂದೆಯಿಂದ ದೂರವಾಗಿ ದಿವ್ಯಾ ವಾಸಿಸುತ್ತಿದ್ದಾರೆ. ಈ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಅವರು ಕೆಲವು ಬಾರಿ ಹೇಳಿಕೊಂಡಿದ್ದರು. ಈಗ ಚಕ್ರವರ್ತಿ ಚಂದ್ರಚೂಡ್​ ಅವರಿಂದ ಮಗಳು ಎಂದು ಕರೆಸಿಕೊಂಡು ಅವರಿಗೆ ಆನಂದಬಾಷ್ಪಾ ಉಕ್ಕಿಬಂತು. ಅವರಿಗಿಂತಲೂ ಹೆಚ್ಚು ಅತ್ತಿದ್ದು ಚಂದ್ರಚೂಡ್​. ಈ ಸಂದರ್ಭಕ್ಕೆ ಸಾಕ್ಷಿಯಾದ ಬಿಗ್​ ಬಾಸ್​ ಮನೆಯ ಇತರೆ ಸದಸ್ಯರು ಕೂಡ ಸಿಕ್ಕಾಪಟ್ಟೆ ಎಮೋಷನಲ್​ ಆದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ 7ನೇ ವಾರ ಬಿಗ್​ ಫೈಟ್​! ಘಟಾನುಘಟಿಗಳೆಲ್ಲ ನಾಮಿನೇಟ್​

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ