AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ 7ನೇ ವಾರ ಬಿಗ್​ ಫೈಟ್​! ಘಟಾನುಘಟಿಗಳೆಲ್ಲ ನಾಮಿನೇಟ್​

Bigg Boss Kannada: ಈ ವಾರ ನಾಮಿನೇಟ್​ ಆಗಿರುವ ಸ್ಪರ್ಧಿಗಳೆಲ್ಲರೂ ತುಂಬ ಸ್ಟ್ರಾಂಗ್​ ಆಗಿದ್ದಾರೆ. ಮುಂದಿನ ವಾರಕ್ಕೆ ತಮ್ಮ ಜರ್ನಿ ಮುಂದುವರಿಯಬೇಕು ಎಂದರೆ ಅವರು ಪರಸ್ಪರ ತೀವ್ರ ಪೈಪೋಟಿ ನೀಡಬೇಕಾಗುತ್ತದೆ.

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ 7ನೇ ವಾರ ಬಿಗ್​ ಫೈಟ್​! ಘಟಾನುಘಟಿಗಳೆಲ್ಲ ನಾಮಿನೇಟ್​
ಬಿಗ್ ಬಾಸ್​ ಕನ್ನಡ ಸೀಸನ್​ 8
ಮದನ್​ ಕುಮಾರ್​
| Updated By: Digi Tech Desk|

Updated on:Apr 13, 2021 | 4:00 PM

Share

8ನೇ ಸೀಸನ್​ನ ಕನ್ನಡ ಬಿಗ್​ ಬಾಸ್​ನಲ್ಲಿ ಪೈಪೋಟಿ ಜೋರಾಗುತ್ತಿದೆ. ಸ್ಪರ್ಧಿಗಳೆಲ್ಲ ಈಗ 7ನೇ ವಾರಕ್ಕೆ ಕಾಲಿಟ್ಟಿದ್ದಾರೆ. ದುರ್ಬಲ ಸ್ಪರ್ಧಿಗಳೆಲ್ಲ ಈಗಾಗಲೇ ಎಲಿಮಿನೇಟ್​ ಆಗಿದ್ದಾರೆ. ಇನ್ನೇನಿದ್ದರೂ ಬಲಾಢ್ಯರ ನಡುವಿನ ಹಣಾಹಣಿ. ವಾರದಿಂದ ವಾರಕ್ಕೆ ನಾಮಿನೇಷನ್​ ಪ್ರಕ್ರಿಯೆಯಲ್ಲಿ ಬಿಸಿ ಏರುತ್ತಿದೆ. ಪ್ರತಿ ಸೋಮವಾರ ಬಂದರೆ ನಾಮಿನೇಷನ್​ ಘಂಟೆ ಬಾರಿಸುತ್ತದೆ. ಏಳನೇ ವಾರಕ್ಕೆ ನಾಮಿನೇಷನ್​ ಆಗಿರುವವರ ಹೆಸರುಗಳನ್ನು ಏ.12ರ ಸಂಚಿಕೆಯಲ್ಲಿ ಅಂತಿಮಗೊಳಿಸಲಾಗಿದೆ.

ಕಳೆದ ವಾರ ಅದೃಷ್ಟದ ಬಲದಿಂದ ಎಲಿಮಿನೇಷನ್​ನಿಂದ​ ತಪ್ಪಿಸಿಕೊಂಡ ಶಮಂತ್​ ಈ ವಾರ ನೇರವಾಗಿ ನಾಮಿನೇಟ್​ ಆಗಿದ್ದಾರೆ. ಉಳಿದಂತೆ ಮಂಜು ಪಾವಗಡ, ದಿವ್ಯಾ ಸುರೇಶ್​, ಅರವಿಂದ್​ ಕೆ.ಪಿ, ದಿವ್ಯಾ ಉರುಡುಗ, ರಾಜೀವ್​, ಚಕ್ರವರ್ತಿ ಚಂದ್ರಚೂಡ್​, ವಿಶ್ವನಾಥ್​ ಈ ಬಾರಿ ನಾಮಿನೇಟ್​ ಆಗಿದ್ದಾರೆ. ಮಂಜು ಒಬ್ಬ ಟಫ್​ ಸ್ಪರ್ಧಿ ಹಾಗೂ ಅವರು ಕಂಫರ್ಟ್​ ಜೋನ್​ನಿಂದ ಹೊರಬರಲಿ ಎಂಬ ಉದ್ದೇಶದಿಂದ ಅವರನ್ನು ನಾಮಿನೇಟ್​ ಮಾಡಲಾಗಿದೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಯಾವುದು ತಮಾಷೆ, ಯಾವುದು ಸೂಕ್ಷ್ಮ ಎಂಬುದು ರಾಜೀವ್​ ಗೊತ್ತಿಲ್ಲ ಎಂದು ಚಕ್ರವರ್ತಿ ಚಂದ್ರಚೂಡ್​ ಹೇಳಿದ್ದಾರೆ. ಅದೇ ಕಾರಣ ನೀಡಿ ರಾಜೀವ್​ ಅವರನ್ನು ಚಕ್ರವರ್ತಿ ನಾಮಿನೇಟ್​ ಮಾಡಿದ್ದಾರೆ.

ವಿಶ್ವನಾಥ್​ ಯಾವುದರಲ್ಲೂ ಹೆಚ್ಚಾಗಿ ಭಾಗವಹಿಸುತ್ತಿಲ್ಲ. ತಮಗಿರುವ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಆರೋಪ ಹೊರಿಸಿ ವಿಶ್ವನಾಥ್​ ಅವರನ್ನು ನಾಮಿನೇಟ್​ ಮಾಡಲಾಗಿದೆ. ಚಕ್ರವರ್ತಿ ಚಂದ್ರಚೂಡ್​ ಗೇಮ್​ ಆಡುತ್ತಿರುವ ರೀತಿ ಸರಿಯಿಲ್ಲ. ಕಳೆದ ವಾರ ಅವರ ವರ್ತನೆಯಿಂದ ನಮಗೆಲ್ಲ ಬೇಜಾರಾಗಿದೆ. ಮನೆಯನ್ನು ಒಡೆದು ಆಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಕಾರಣಗಳನ್ನು ನೀಡಿ ಮನೆಯ ಇತರೆ ಸದಸ್ಯರು ಚಕ್ರವರ್ತಿ ಚಂದ್ರಚೂಡ್​ ಹೆಸರನ್ನು ನಾಮಿನೇಷನ್​ಗೆ ಸೂಚಿಸಿದ್ದಾರೆ.

ಈ ವಾರ ನಾಮಿನೇಟ್​ ಆಗಿರುವ ಸ್ಪರ್ಧಿಗಳೆಲ್ಲರೂ ತುಂಬ ಸ್ಟ್ರಾಂಗ್​ ಆಗಿದ್ದಾರೆ. ಮುಂದಿನ ವಾರಕ್ಕೆ ತಮ್ಮ ಜರ್ನಿ ಮುಂದುವರಿಯಬೇಕು ಎಂದರೆ ಅವರು ಪರಸ್ಪರ ತೀವ್ರ ಪೈಪೋಟಿ ನೀಡಬೇಕಾಗುತ್ತದೆ. ಹಾಗಾಗಿ ಬಿಗ್​ ಬಾಸ್​ ಮನೆಯಲ್ಲಿ ಬಿಗ್​ ಫೈಟ್​ ನಡೆಯುವ ಸಾಧ್ಯತೆ ಇದೆ. ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ನೀಡಿರುವ ನಟಿ ಪ್ರಿಯಾಂಕಾ ತಿಮ್ಮೇಶ್​ ಮತ್ತು ಕ್ಯಾಪ್ಟನ್​ ಆಗಿರುವ ಪ್ರಶಾಂತ್​ ಸಂಬರಗಿ ಅವರ ಹೆಸರನ್ನು ಈ ವಾರದ ಎಲಿಮಿನೇಷನ್​ಗೆ ಯಾರೂ ಸೂಚಿಸುವಂತಿರಲಿಲ್ಲ.

ಇದನ್ನೂ ಓದಿ: ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ

(Bigg Boss Kannada 8 : Manju Pavagada Rajeev Divya Suresh Shamanth Aravind KP Divya Uruduga Chakravarthy Chandrachud Vishwanath nominated in BBK8 7th week)

Published On - 10:27 am, Tue, 13 April 21

ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ