AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್, ರಣ್​​ಬೀರ್ ನಟನೆ ಕೊಂಡಾಡಿದ ಬಾಲಿವುಡ್ ನಟ

Ramayana movie: ಟ್ರೈಲರ್​​ನಲ್ಲಿ ಯಶ್ ಅವರ ಎಂಟ್ರಿ, ಅವರ ನಟನೆ, ಅವರ ಸ್ವಾಗ್, ಅವರ ಅಬ್ಬರವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಟ್ರೈಲರ್ ನೋಡಿದವರೆಲ್ಲ ಯಶ್ ಅವರನ್ನು ಭರಪೂರವಾಗಿ ಹೊಗಳುತ್ತಿದ್ದಾರೆ. ಇದೀಗ ಯಶ್ ಅವರೊಟ್ಟಿಗೆ ‘ರಾಮಾಯಣ’ ಸಿನಿಮಾನಲ್ಲಿ ನಟಿಸಿರುವ ಸಹನಟನೋರ್ವ ಯಶ್ ಅವರ ಗುಣಗಾನ ಮಾಡಿದ್ದಾರೆ.

ಯಶ್, ರಣ್​​ಬೀರ್ ನಟನೆ ಕೊಂಡಾಡಿದ ಬಾಲಿವುಡ್ ನಟ
Ramayana
ಮಂಜುನಾಥ ಸಿ.
|

Updated on: Jul 30, 2026 | 7:12 PM

Share

ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇಂದು (ಜುಲೈ 30) ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಅನ್ನು ಸಹ ಗಳಿಸಿಕೊಂಡಿದೆ. ಟ್ರೈಲರ್​​ನಲ್ಲಿ ಯಶ್ ಅವರ ಎಂಟ್ರಿ, ಅವರ ನಟನೆ, ಅವರ ಸ್ವಾಗ್, ಅವರ ಅಬ್ಬರವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಟ್ರೈಲರ್ ನೋಡಿದವರೆಲ್ಲ ಯಶ್ ಅವರನ್ನು ಭರಪೂರವಾಗಿ ಹೊಗಳುತ್ತಿದ್ದಾರೆ. ಇದೀಗ ಯಶ್ ಅವರೊಟ್ಟಿಗೆ ‘ರಾಮಾಯಣ’ ಸಿನಿಮಾನಲ್ಲಿ ನಟಿಸಿರುವ ಸಹನಟನೋರ್ವ ಯಶ್ ಅವರ ಗುಣಗಾನ ಮಾಡಿದ್ದಾರೆ.

ಇಂದು ಬಿಡುಗಡೆ ಆದ ಟ್ರೈಲರ್​​ನಲ್ಲಿ ಯಶ್ ಅವರು ನಿರ್ವಹಿಸಿರುವ ರಾವಣ ಪಾತ್ರ, ಇಂದ್ರನ ನಗರಿಯ ಮೇಲೆ ದಾಳಿ ಮಾಡಿರುವ ದೃಶ್ಯಗಳಿವೆ. ರಾವಣ, ಇಂದ್ರನ ಸೇನೆಯನ್ನು ಧ್ವಂಸ ಮಾಡುವ ಕೆಲ ದೃಶ್ಯಗಳನ್ನು ಟ್ರೈಲರ್​​ನಲ್ಲಿ ಸೇರಿಸಲಾಗಿದೆ. ಸಿನಿಮಾನಲ್ಲಿ ಇಂದ್ರನ ಪಾತ್ರದಲ್ಲಿ ನಟ ಕುನಾಲ್ ಕಪೂರ್ ನಟಿಸಿದ್ದಾರೆ. ಇಂದು ಟ್ರೈಲರ್ ಬಿಡುಗಡೆ ಆದ ಬಳಿಕ ಅವರು ಟ್ವಿಟ್ಟರ್​​ನಲ್ಲಿ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸಿದ್ದು, ಈ ವೇಳೆ ಯಶ್ ಬಗ್ಗೆ ಕುನಾಲ್ ಕಪೂರ್ ಮಾತನಾಡಿದ್ದಾರೆ.

ಕುನಾಲ್ ಕಪೂರ್ ಅವರು ತಮ್ಮ ‘ರಾಮಾಯಣ’ ಪಾತ್ರವಾದ ದೇವೇಂದ್ರ (ಇಂದ್ರ ದೇವ) ಇಂದ ಸ್ಫೂರ್ತಿ ಪಡೆದ ಕೆಲ ಚಿತ್ರಗಳನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಸೃಷ್ಟಿಸಿದ ಫ್ಯಾನ್ ಪೋಸ್ಟರ್​​ಗಳು ಅವಾಗಿದ್ದವು. ಅದರ ಜೊತೆಗೆ ಅಭಿಮಾನಿಗಳೊಟ್ಟಿಗೆ ಸಂವಾದವನ್ನು ಸಹ ಅವರು ಮಾಡಿದರು. ‘ರಾವಣನಾಗಿ ಯಶ್ ಹೇಗಿದ್ದಾರೆ?’ ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುನಾಲ್ ಕಪೂರ್, ‘ನಂಬಲಸಾಧ್ಯ! ರಾವಣನಿಗೆ ಹೆಮ್ಮೆಯೆನಿಸುತ್ತದೆ’ ಎಂದು ಉತ್ತರಿಸಿದ್ದಾರೆ. ಆ ಮೂಲಕ ರಾವಣನಿಗೇ ಹೆಮ್ಮೆ ಆಗುವ ರೀತಿಯಲ್ಲಿ ಯಶ್ ನಟಿಸಿದ್ದಾರೆ ಮತ್ತು ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕುನಾಲ್ ಒಂದೇ ವಾಕ್ಯದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಟ್ರೇಲರ್​​ನಲ್ಲಿ ರಾವಣನದ್ದೇ ಅಬ್ಬರ

ಮತ್ತೊಬ್ಬ ಬಳಕೆದಾರರು ರಣಬೀರ್ ಕಪೂರ್ ಅವರೊಂದಿಗೆ ಕೆಲಸ ಮಾಡಿದ ಅವರ ಅನುಭವದ ಬಗ್ಗೆ ಹೇಳುವಂತೆ ಕೇಳಿದರು. ಅದಕ್ಕೆ ಉತ್ತರಿಸಿದ ಕುನಾಲ್ ಕಪೂರ್, ‘ಗಿಗಾ ಚಾಡ್. ಯಾವುದೇ ಸ್ಟಾರ್‌ಡಮ್‌ನ ಹೊರೆಯಿಲ್ಲದ ನಕ್ಷತ್ರ’ ಎಂದು ಸರಳವಾಗಿ ಒಂದೇ ವಾಕ್ಯದಲ್ಲಿ ಉತ್ತರ ನೀಡಿದ್ದಾರೆ. ಆ ಮೂಲಕ ರಣ್​​ಬೀರ್ ಕಪೂರ್ ಅತ್ಯಂತ ಸರಳವಾದ ವ್ಯಕ್ತಿತ್ವ ಉಳ್ಳ ವ್ಯಕ್ತಿ ಎಂದು ಕುನಾಲ್ ಹೇಳಿದ್ದಾರೆ.

ಕುನಾಲ್ ಕಪೂರ್, ‘ರಾಮಾಯಣ’ ಸಿನಿಮಾನಲ್ಲಿ ದೇವೇಂದ್ರನ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. ರಣಬೀರ್ ಕಪೂರ್ ಶ್ರೀ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ, ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದು, ನಮಿತ್ ಮಲ್ಹೋತ್ರಾ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತರಾದ ಹಾನ್ಸ್ ಜೀಮರ್ ಮತ್ತು ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾದ ಮೊದಲ ಭಾಗ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us