ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಕ್ಯಾಪ್ಟನ್​ ಆಗಿದ್ದಾರೆ. ಹೀಗಾಗಿ, ಅವರು ಮನೆಯವರನ್ನು ಸಂಪೂರ್ಣವಾಗಿ ಕಂಟ್ರೋಲ್​ಗೆ ತೆಗೆದುಕೊಳ್ಳೋಕೆ ಮುಂದಾಗುತ್ತಿದ್ದಾರೆ.

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ
ಪ್ರಶಾಂತ್​-ಕಿಚ್ಚ ಸುದೀಪ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 12, 2021 | 8:34 AM

ಬಿಗ್​ ಬಾಸ್​ ಮನೆಯ ಸದಸ್ಯರು ಪ್ರಶಾಂತ್​ ಸಂಬರಗಿ ಮೇಲೆ ಸಾಲು ಸಾಲು ಆರೋಪ ಮಾಡುತ್ತಲೇ ಇರುತ್ತಾರೆ. ಕೆಲವೊಂದು ಮನೆಯಲ್ಲೇ ಬಗೆಹರಿದರೆ, ಇನ್ನೂ ಕೆಲವು ಸುದೀಪ್​ ಎದುರು ಚರ್ಚೆಗೆ ಬರುತ್ತದೆ. ಆದರೆ, ಈ ಬಾರಿ ಸ್ವತಃ ಸುದೀಪ್​ ಅವರೇ ಪ್ರಶಾಂತ್​ ವಿಚಾರ ಎತ್ತಿಕೊಂಡು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸರಿಯಾಗಿ ಮಾತಿನ ಚಾಟಿ ಬೀಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಕ್ಯಾಪ್ಟನ್​ ಆಗಿದ್ದಾರೆ. ಹೀಗಾಗಿ, ಅವರು ಮನೆಯವರನ್ನು ಸಂಪೂರ್ಣವಾಗಿ ಕಂಟ್ರೋಲ್​ಗೆ ತೆಗೆದುಕೊಳ್ಳೋಕೆ ಮುಂದಾಗುತ್ತಿದ್ದಾರೆ. ಎಲ್ಲರೂ ತಾವು ಹೇಳಿದಂತೆ ಕೇಳಬೇಕು ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಇದರ ಭಾಗವಾಗಿ ಅವರು ಕೆಲವು ಸುಳ್ಳುಗಳನ್ನು ಹೇಳಿದ್ದಾರೆ. ಇದು ಸುದೀಪ್​ ಗಮನಕ್ಕೆ ಬಂದಿದೆ.

ಬಿಗ್​ ಬಾಸ್​ ಇತ್ತೀಚೆಗೆ ಟಾಸ್ಕ್​ ಒಂದನ್ನು ನೀಡಿದ್ದರು. ಅದನ್ನು ಹೇಳೋಕೆ ಕನ್​ಫೆಷನ್​ ರೂಂಗೆ ಪ್ರಶಾಂತ್​ ಅವರನ್ನು ಕರೆಯಲಾಗಿತ್ತು. ಆಗ ಬಿಗ್​ ಬಿಗ್​ ಬಾಸ್​ ಟಾಸ್ಕ್​ ಬಗ್ಗೆ ಹೇಳಿದ್ದರು. ಆಗ ನಮಗೆ ಊಟ ಆಗಿಲ್ಲ, 10 ನಿಮಿಷ ಟೈಂ ಕೊಡಿ ಎಂದು ಪ್ರಶಾಂತ್​ ಕೇಳಿದ್ದರು. ಆದರೆ, ಕನ್​ಫೆಷನ್​ ರೂಂನಿಂದ ಹೊರ ಬಂದ ಪ್ರಶಾಂತ್​, ಬಿಗ್​ ಬಾಸ್ ಹೇಳಿದಾರೆ, 10 ನಿಮಿಷ ಮಾತ್ರ ಟೈಂ ಇದೆ. ಅಷ್ಟರಲ್ಲಿ ರೆಡಿ ಆಗಿ ಎಂದು ಹೇಳಿದ್ದರು. ಇದನ್ನು ಸುದೀಪ್​ ಉಲ್ಲೇಖಿಸಿದ್ದಾರೆ.

ಇನ್ನು, ಬಿಗ್​ ಬಾಸ್​ ಮನೆಯಲ್ಲಿ ದಿಂಬಿನ ಫೈಟ್​ ನಡೆಯುತ್ತಿತ್ತು. ಹೀಗೆ ಮಾಡಬಾರದು ಎಂದು ಬಿಗ್​ ಬಾಸ್​ ಹೇಳಿದಾರೆ ಅಂತ ಪ್ರಶಾಂತ್​ ಹೇಳುವ ಮೂಲಕ ಮನೆಯವರನ್ನು ಸುಮ್ಮನಿರಿಸಿದ್ದರು. ಇದಕ್ಕೂ ಸುದೀಪ್​ ಅಸಮಾಧಾನ ಹೊರ ಹಾಕಿದ್ದಾರೆ.

ಬಿಗ್​ ಬಾಸ್ ಕೋಟ್​ ಮಾಡಿ ಹೇಳುವಾಗ ಎಚ್ಚರವಾಗಿರಿ. ಬಿಗ್​ ಬಾಸ್​ ಏನು ಹೇಳಿದ್ದಾರೋ ಅದನ್ನು ಮಾತ್ರ ಹೇಳಬೇಕು. ನೀವೇ ಲೈನ್ ಕ್ರಿಯೇಟ್​ ಮಾಡಿ ಹೇಳಬಾರದು. ಹಾಗೆ ಹೇಳೋದು ತಪ್ಪಾಗುತ್ತದೆ ಎಂದು ಅಚ್ಚರಿಸಿದರು. ಇದಕ್ಕೆ ಸಮಜಾಯಿಶಿ ಕೊಡೋಕೆ ಹೋದ ಪ್ರಶಾಂತ್​ಗೆ, ತಪ್ಪು ತಪ್ಪೇ ಎಂದು ಹೇಳುವ ಮೂಲಕ ಸುದೀಪ್​​ ಸುಮ್ಮನಾಗಿಸಿದರು.

ಇದನ್ನೂ ಓದಿ: ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!

ತಪ್ಪಾಗಿದೆ ಕ್ಷಮಿಸಿ; ಸುದೀಪ್​ ನೇರ ಪ್ರಶ್ನೆಗೆ ಹಣ್ಣುಗಾಯಿ ನೀರುಗಾಯಿ ಆದ ಸಂಬರಗಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ