ಪ್ಲೀಸ್ ಬೇರೆಯವರ ಅವಕಾಶ ಕಿತ್ತುಕೊಳ್ಳಬೇಡಿ; ಎಲಿಮಿನೇಟ್ ಆದ ವೈಜಯಂತಿಗೆ ಸುದೀಪ್ ಕಿವಿಮಾತು
ಭಾನುವಾರ (ಏಪ್ರಿಲ್ 11) ಪ್ರಶಾಂತ್, ದಿವ್ಯಾ ಸುರೇಶ್, ಶುಭಾ ಪೂಂಜಾ, ರಾಜೀವ್ ಸೇಫ್ ಆದರು. ಕೊನೆಯಲ್ಲಿ ವೈಜಯಂತಿ ಅಡಿಗ ಅವರು ಬಿಗ್ ಬಾಸ್ನಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಮನೆಯ ಆರನೇ ವಾರದ ಎಲಿಮಿನೇಷನ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಬಿಗ್ ಬಾಸ್ ಮನೆಯಿಂದ ವೈಜಯಂತಿ ಅಡಿಗ ಔಟ್ ಆಗಿದ್ದಾರೆ. ನಾಲ್ಕೇ ದಿನಕ್ಕೆ ಅವರು ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ ಶಮಂತ್ ಬ್ರೋ ಗೌಡ, ಅರವಿಂದ್ ಕೆ.ಪಿ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್ ಮೇಲೆ ಎಲಿಮಿನೇಷನ್ ಆಗಿದ್ದರು. ಆದರೆ, ಕೊನೆಯಲ್ಲಿ ಇದಕ್ಕೆ ಟ್ವಿಸ್ಟ್ ಸಿಕ್ಕಿದೆ.
ಶನಿವಾರ (ಏಪ್ರಿಲ್ 10) ನಿಧಿ ಹಾಗೂ ಅರವಿಂದ್ ಸೇಫ್ ಆಗಿದ್ದರು. ಭಾನುವಾರ (ಏಪ್ರಿಲ್ 11) ಪ್ರಶಾಂತ್, ದಿವ್ಯಾ ಸುರೇಶ್, ಶುಭಾ ಪೂಂಜಾ, ರಾಜೀವ್ ಕೂಡ ಸೇಫ್ ಆದರು. ಕಡಿಮೆ ಮತ ಸಿಕ್ಕು ಶಮಂತ್ ಎಲಿಮಿನೇಟ್ ಎಂದು ಸುದೀಪ್ ಘೋಷಣೆ ಮಾಡಿದರು. ಆದರೆ, ಸುದೀಪ್ ಒಂದು ಆಯ್ಕೆ ಕೂಡ ನೀಡಿದರು.
ಕೇವಲ ನಾಲ್ಕು ದಿನದ ಹಿಂದೆ ವೈಜಯಂತಿ ಅಡಿಗ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅವರಿಗೆ ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. ಅವರ ಆಗಮನದಿಂದ ಮನೆಯಲ್ಲಿ ಹೆಚ್ಚೇನೂ ಬದಲಾವಣೆ ಆಗಿರಲಿಲ್ಲ. ಎಲ್ಲರೊಂದಿಗೂ ನಗುನಗುತ್ತಲೇ ಮಾತನಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರು ನನಗೆ ಮನೆಯಿಂದ ಹೊರ ಹೋಗಬೇಕು ಎಂದು ಪದೇ ಪದೇ ಹೇಳುತ್ತಿದ್ದರು. ಹೀಗಾಗಿ, ಸುದೀಪ್ ನೀವು ಮನೆಯಿಂದ ಹೊರ ಹೋಗುತ್ತೀರಿ ಎಂದಾದರೆ ನಾವು ಅವಕಾಶ ನೀಡುತ್ತೇವೆ ಎಂದರು.
ಈ ಅವಕಾಶವನ್ನು ವೈಜಯಂತಿ ಒಪ್ಪಿ ಮನೆಯಿಂದ ಹೊರ ನಡೆಯುತ್ತೇನೆ ಎಂದರು. ಇದಕ್ಕೆ ಸುದೀಪ್ ಪ್ರತಿಕ್ರಿಯಿಸಿದರು. ನೀವು ಇಷ್ಟೊಂದು ಶ್ರಮ ಹಾಕಿ ಬಂದಿದ್ದೀರಿ. ವೈಜಯಂತಿ ಅವರೇ ನಿಮ್ಮ ಜಾಗದಲ್ಲಿ ಮತ್ತೊಬ್ಬರು ಬರಬಹುದಿತ್ತು. ನೀವು ಮತ್ತೊಬ್ಬರ ಅವಕಾಶ ಕಿತ್ತುಕೊಂಡಂತೆ. ಹೀಗೆ ಮಾಡಬೇಡಿ ಎಂದು ಸುದೀಪ್ ಹೇಳಿದರು. ನಾನು ಮನೆಯಿಂದ ಹೊರ ಬರುತ್ತಿರುವುದಕ್ಕೆ ನನ್ನದೇ ಆದ ಕಾರಣವಿದೆ. ದಯವಿಟ್ಟು ಬೇರೆ ರೀತಿಯಲ್ಲಿ ತೆಗೆದುಕೊಳ್ಳಬೇಡಿ ಎಂದು ವೈಜಯಂತಿ ಹೇಳಿದರು. ಸೇಫ್ ಆದ ಶಮಂತ್ ಮುಂದಿನ ವಾರದ ನಾಮಿನೇಷನ್ಗೆ ನೇರವಾಗಿ ನಾಮಿನೇಟ್ ಆದರು. ಈ ಬೆಳವಣಿಗೆಯಿಂದ ಸಹಜವಾಗಿಯೇ ಮನೆಯೊಳಗಿನ ಇತರೆ ಸದಸ್ಯರಿಗೆ ಅಚ್ಚರಿ ಆಗಿದೆ.
ವೈಜಯಂತಿ ಮಾತ್ರವಲ್ಲದೆ ನಟಿ ಪ್ರಿಯಾಂಕಾ ತಿಮ್ಮೇಶ್ ಹಾಗೂ ಪತ್ರಕರ್ತ ಚಕ್ರವತ್ರಿ ಚಂದ್ರಚೂಡ್ ಅವರು ಅವರು ಸಹ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಬಂದಿದ್ದರು. ಸದ್ಯ ಅವರು ಆಟ ಮುಂದುವರಿಸಿದ್ದಾರೆ.
ಇದನ್ನೂ ಒದಿ: Bigg Boss Elimination: ಆರನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು ಇವರೇ..
Published On - 10:28 pm, Sun, 11 April 21