Bigg Boss Elimination: ಆರನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು ಇವರೇ..?
ಈ ವಾರ ಶಮಂತ್ ಬ್ರೋ ಗೌಡ, ಅರವಿಂದ್ ಕೆ.ಪಿ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ.
ಬಿಗ್ ಬಾಸ್ ವಾರದಿಂದ ವಾರಕ್ಕೆ ಹೆಚ್ಚು ಕಳೆಗಟ್ಟುತ್ತಿದೆ. ಐದು ಸ್ಪರ್ಧಿಗಳು ಈಗಾಗಲೇ ಮನೆಯಿಂದ ಹೊರ ಹೋದರೆ, ಮೂರು ಸ್ಪರ್ಧಿಗಳು ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸ್ಪರ್ಧಿಗಳು ಆಗಮಿಸಿರುವುದರಿಂದ ಮನೆಯಲ್ಲಿ ಒಂದಷ್ಟು ಸ್ಪರ್ಧಿಗಳಿಗೆ ಹೊಂದಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಆರನೇ ವಾರದ ಎಲಿಮಿನೇಷನ್ ಹತ್ತಿರವಾಗಿದೆ. 15 ಸ್ಪರ್ಧಿಗಳ ಪೈಕಿ ಈ ವಾರ ಓರ್ವ ಸ್ಪರ್ಧಿ ಮನೆಯಿಂದ ಹೊರ ಹೋಗಲಿದ್ದಾರೆ. ಈ ವಾರ ಶಮಂತ್ ಬ್ರೋ ಗೌಡ, ಅರವಿಂದ್ ಕೆ.ಪಿ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ.
ಅರವಿಂದ್ ಕೆ.ಪಿ ಕೂಡ ಈ ವಾರ ನಾಮಿನೇಷನ್ ಆಗಿದ್ದಾರೆ. ಅವರು, ಸ್ಟ್ರಾಂಗ್ ಸ್ಪರ್ಧಿ ಎನ್ನುವ ಕಾರಣಕ್ಕೆ ಕೆಲವರು ಅವರ ಹೆಸರನ್ನು ತೆಗೆದುಕೊಂಡಿದ್ದರು. ಸ್ಪರ್ಧಿಗಳೇ ಒಪ್ಪಿಕೊಂಡಂತೆ ಅವರು ಸ್ಟ್ರಾಂಗ್ ಸ್ಪರ್ಧಿ. ಹೀಗಾಗಿ, ಅವರು ಮನೆಯಿಂದ ಹೊರ ಹೋಗೋದು ಅಸಾಧ್ಯ. ಪ್ರಶಾಂತ್ ಸಂಬರಗಿ ತಮ್ಮ ರಾಜಕೀಯದ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ, ಈ ವಾರ ಅವರು ಸೇಫ್ ಆಗೋದು ಬಹುತೇಕ ಖಚಿತ. ಮಹಿಳಾ ಸ್ಪರ್ಧಿಗಳ ಪೈಕಿ, ದಿವ್ಯಾ ಸುರೇಶ್, ಶುಭಾ ಪೂಂಜಾ ನಾಮಿನೇಟ್ ಆಗಿದ್ದಾರೆ. ಆದರೆ, ಈ ಮೂವರು ಪ್ರತಿ ವಾರ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಹೀಗಾಗಿ, ಈ ಮೂವರು ಕೂಡ ಈ ವಾರ ಬಚಾವ್ ಆಗುವ ಎಲ್ಲಾ ಸಾಧ್ಯತೆ ಇದೆ.
View this post on Instagram
ನಿಧಿ ಸುಬ್ಬಯ್ಯ ಈ ವಾರ ಸ್ವಲ್ಪ ಕಳಪೆ ಪ್ರದರ್ಶನ ನೀಡಿದ್ದಾರೆ. ಆದರೆ, ಸಿನಿಮಾ ರಂಗದಿಂದ ಬಂದ ಹಿನ್ನೆಲೆಯಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹೀಗಾಗಿ ಅವರು ಈ ವಾರ ಬಚಾವ್ ಆಗುವ ಎಲ್ಲಾ ಸಾಧ್ಯತೆ ಇದೆ.
ಕಳೆದ ವಾರ ಎಲಿಮಿನೇಷನ್ನಿಂದ ಜಸ್ಟ್ ಮಿಸ್ ಆಗಿದ್ದ ಶಮಂತ್ ಬ್ರೋ ಗೌಡ ಈ ವಾರವೂ ನಾಮಿನೇಟ್ ಆಗಿದ್ದಾರೆ. ಅವರು ತುಂಬಾನೇ ಸ್ಲೋ, ನಮ್ಮ ವೇಗಕ್ಕೆ ಅವರು ಹೊಂದಿಕೊಳ್ಳುತ್ತಿಲ್ಲ ಎನ್ನುವ ಕಾರಣ ನೀಡಿ ಅವರನ್ನು ನಾಮಿನೇಟ್ ಮಾಡಲಾಗಿತ್ತು. ಆರು ವಾರಗಳ ಪೈಕಿ ಒಂದು ವಾರ ಅವರು ಉತ್ತಮ ಪ್ರದರ್ಶನ ನೀಡಿದ್ದು ಹೊರತುಪಡಿಸಿದರೆ ಮತ್ತೆಲ್ಲ ವಾರವೂ ಅವರು ನೀಡಿದ್ದು ಕಳಪೆ ಪ್ರದರ್ಶನವನ್ನೇ. ಹೀಗಾಗಿ, ಈ ವಾರ ಶಮಂತ್ ಅವರೇ ಮನೆಯಿಂದ ಹೊರ ಹೋಗಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದ್ದು, ನಟಿ ವೈಜಯಂತಿ ಅಡಿಗ ಬಿಗ್ ಬಾಸ್ನಿಂದ ಹೊರನಡೆದಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಯ ಲಿಪ್ಲಾಕ್ ವಿಡಿಯೋ ವೈರಲ್! ಪೂರ್ತಿ ಎಪಿಸೋಡ್ ಪ್ರಸಾರ ಯಾವಾಗ?
Published On - 3:33 pm, Sat, 10 April 21