Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ರಶ್ಮಿಕಾಗೆ ಬಾಲಿವುಡ್​ನಲ್ಲಿ ಬೆಂಬಲವಾಗಿ ನಿಂತ ಸಿದ್ಧಾರ್ಥ್ ಮಲ್ಹೋತ್ರ! ಅನುಭವ ಹಂಚಿಕೊಂಡ ಕಿರಿಕ್​ ಬೆಡಗಿ

Mission Majnu | Sidharth Malhotra: ಕನ್ನಡದಿಂದ ಬಣ್ಣದ ಬದುಕು ಆರಂಭಿಸಿ ಈಗ ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಬಿ-ಟೌನ್​ ನಟ ಸಿದ್ಧಾರ್ಥ್ ಮಲ್ಹೋತ್ರ ಬೆಂಬಲವಾಗಿ ನಿಂತಿದ್ದಾರೆ. ಮಿಷನ್​ ಮಜ್ನು ಸಿನಿಮಾದ ಮೊದಲ ಹಂತದ ಶೂಟಿಂಗ್​ನಲ್ಲಿ ಇಬ್ಬರೂ ಪಾಲ್ಗೊಂಡಿದ್ದಾರೆ.

Rashmika Mandanna: ರಶ್ಮಿಕಾಗೆ ಬಾಲಿವುಡ್​ನಲ್ಲಿ ಬೆಂಬಲವಾಗಿ ನಿಂತ ಸಿದ್ಧಾರ್ಥ್ ಮಲ್ಹೋತ್ರ! ಅನುಭವ ಹಂಚಿಕೊಂಡ ಕಿರಿಕ್​ ಬೆಡಗಿ
ರಶ್ಮಿಕಾ ಮಂದಣ್ಣ - ಸಿದ್ಧಾರ್ಥ್​ ಮಲ್ಹೋತ್ರಾ
Follow us
ಮದನ್​ ಕುಮಾರ್​
| Updated By: Digi Tech Desk

Updated on: Apr 10, 2021 | 1:30 PM

ನಟಿ ರಶ್ಮಿಕಾ ಮಂದಣ್ಣ ಅವರು ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಜನಮನ ಗೆದ್ದ ಬಳಿಕ ಅವರು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿ ಅವರಿಗೆ ಮೊದಲ ಸಿನಿಮಾದಲ್ಲಿ ಸ್ಟಾರ್​ ನಟ ಸಿದ್ಧಾರ್ಥ್​ ಮಲ್ಹೋತ್ರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕಿತು. ಈಗಾಗಲೇ ಒಂದು ಹಂತದ ಶೂಟಿಂಗ್​ನಲ್ಲಿ ಪಾಲ್ಗೊಂಡಿರುವ ರಶ್ಮಿಕಾ ಅವರು ಸಿದ್ಧಾರ್ಥ್​ ಜೊತೆಗಿನ ಶೂಟಿಂಗ್​ ಅನುಭವದ ಬಗ್ಗೆ ಮಾಧ್ಯಮಗಳೊಂದಿಗೆ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮತ್ತು ಸಿದ್ಧಾರ್ಥ್​ ಮಲ್ಹೋತ್ರ ಜೋಡಿಯಾಗಿ ನಟಿಸುತ್ತಿರುವ ಸಿನಿಮಾ ಹೆಸರು ‘ಮಿಷನ್​ ಮಜ್ನು’. ರೆಟ್ರೋ ಕಥೆಯುಳ್ಳ ಈ ಚಿತ್ರಕ್ಕೆ ಲಖನೌನಲ್ಲಿ ಶೂಟಿಂಗ್​ ನಡೆದಿದೆ. 1970ರ ಕಾಲವನ್ನು ಹೋಲುವಂತಹ ಸೆಟ್​ ಹಾಕಿ ಚಿತ್ರೀಕರಣ ಮಾಡಲಾಗಿದೆ. ಆ ಅನುಭವಗಳ ಬಗ್ಗೆ ಹೇಳಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಸಿದ್ಧಾರ್ಥ್​ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

‘ಸಿದ್ಧಾರ್ಥ್​ ನನ್ನ ಸೀನಿಯರ್​ ಹಾಗೂ ಅದ್ಭುತ ವ್ಯಕ್ತಿ. ಅವರೊಬ್ಬ ಸ್ಟಾರ್​ ಆಗಿದ್ದರೂ ಕೂಡ ತುಂಬ ವಿನಮ್ರವಾಗಿದ್ದಾರೆ. ಸಹಾಯ ಮಾಡುವ ಗುಣ ಇದೆ. ಸಂಭಾಷಣೆಗಳ ವಿಚಾರದಲ್ಲಿ ಅವರು ನನಗೆ ಮಾರ್ಗದರ್ಶನ ಮಾಡಿದ್ದಾರೆ. ಅಭಿನಯದಲ್ಲೂ ಸಹಾಯ ಮಾಡಿದ್ದಾರೆ. ನಾನು ನಟಿಸುವಾಗ ನನ್ನ ಸಹ ನಟರು ಹೇಗೆ ಫೀಲ್​ ಮಾಡುತ್ತಾರೆ ಎಂಬುದನ್ನು ನಾನು ಗಮನಿಸುತ್ತೇನೆ. ಅವರು ಸರಿಯಾಗಿ ಪ್ರತಿಕ್ರಿಯಿಸಿದರೆ ನಾನು ಪ್ರೇಕ್ಷಕರಿಗೂ ನನ್ನ ಭಾವನೆಗಳನ್ನು ದಾಟಿಸಬಲ್ಲೆ ಎಂಬುದು ಗೊತ್ತಾಗುತ್ತದೆ’ ಎಂದು ರಶ್ಮಿಕಾ ಹೇಳಿದ್ದಾರೆ.

‘ಸಿದ್ಧಾರ್ಥ್​ ನನ್ನ ಪರವಾಗಿ ಯಾವಾಗಲೂ ಇರುತ್ತಾರೆ. ಒಂದು ದೃಶ್ಯದಲ್ಲಿ ಏನು ಮಾಡಬಹುದು ಅಂತ ನಾವು ಚರ್ಚೆ ಮಾಡುತ್ತಲೇ ಇರುತ್ತೇವೆ. ನಾನು ಮೊದಲೇ ತಯಾರಿ ಮಾಡಿಕೊಂಡಿರುತ್ತೇನೆ. ಆದರೂ ನಮ್ಮ ನಡುವಿನ ಚರ್ಚೆಯಿಂದ ಸಹಾಯ ಆಗುತ್ತದೆ. ನಾವು ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದೇವೆ. ಬೇರೆ ವಿಚಾರಗಳ ಬಗ್ಗೆ ಮಾತನಾಡಲು ತುಂಬ ಕಡಿಮೆ ಸಮಯ ಸಿಗುತ್ತದೆ. ಆಗ ನಾನು ಹಲವು ವಿಷಯಗಳ ಬಗ್ಗೆ ಅವರ ಬಳಿ ಸಲಹೆ ಕೇಳುತ್ತೇನೆ’ ಎಂಬುದು ರಶ್ಮಿಕಾ ಮಾತುಗಳು.

ಈ ಸಿನಿಮಾದ ಕೆಲಸಗಳು ಮುಗಿಯುವ ಮುನ್ನವೇ ರಶ್ಮಿಕಾ ಇನ್ನೊಂದು ಬಾಲಿವುಡ್​ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಅದರಲ್ಲಿ ಅವರು ಅಮಿತಾಭ್​ ಬಚ್ಚನ್​ಗೆ ಮಗಳಾಗಿ ಕಾಣಿಸಿಕೊಳ್ಳಲಿರುವುದು ವಿಶೇಷ. ಆ ಚಿತ್ರಕ್ಕೆ ‘ಗುಡ್​ ಬೈ’ ಎಂದು ಶೀರ್ಷಿಕೆ ಇಟ್ಟಿದ್ದು, ರಶ್ಮಿಕಾಗೆ ಜೋಡಿಯಾಗಿ ‘ತಪ್ಪಡ್​’ ಖ್ಯಾತಿಯ ನಟಿ ಪಾವೈಲ್​ ಗುಲಾಟಿ ಅಭಿನಯಿಸಲಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಒಟ್ಟಿನಲ್ಲಿ ರಶ್ಮಿಕಾ ಬಾಲಿವುಡ್​ ಪಯಣ ಭರ್ಜರಿಯಾಗಿ ಶುರುವಾಗಿದೆ.

ಇದನ್ನೂ ಓದಿ: ‘ಇದು ನನಗೆ ಚೆನ್ನಾಗಿ ನೆನಪಿದೆ’: ರಕ್ಷಿತ್​ಗೆ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ ಮಂದಣ್ಣ!

Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬದುಕು ಬದಲಾಯಿಸಿದ ಐದು ಪ್ರಮುಖ ಘಟನೆಗಳು!​

(Rashmika Mandanna talks about her Mission Majnu co star Sidharth Malhotra)

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ