AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಟ್​ ಆಫ್​ ಆದಾಗ ಅರವಿಂದ್​-ದಿವ್ಯಾ ಕಣ್​ ಕಣ್ಣ ಸಲಿಗೆ! ಕದ್ದು ನೋಡಿದ ಶಮಂತ್​-ರಘು

Bigg Boss Kannada: ರಾತ್ರಿ ವೇಳೆ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಏನೆಲ್ಲ ಮಾಡುತ್ತಾರೆ ಎಂಬುದನ್ನು ಶಮಂತ್​ ಬ್ರೋ ಗೌಡ ಮತ್ತು ರಘು ಗೌಡ ಕದ್ದು ನೋಡಿದ್ದಾರೆ! ರಾತ್ರಿ ನಡೆದ ಸಂಗತಿಯ ಬಗ್ಗೆ ಬೆಳಗ್ಗೆ ಮನೆಯ ಇತರೆ ಸದಸ್ಯರಿಗೆ ಅವರು ವರದಿ ಒಪ್ಪಿಸಿದ್ದಾರೆ.

ಲೈಟ್​ ಆಫ್​ ಆದಾಗ ಅರವಿಂದ್​-ದಿವ್ಯಾ ಕಣ್​ ಕಣ್ಣ ಸಲಿಗೆ! ಕದ್ದು ನೋಡಿದ ಶಮಂತ್​-ರಘು
ಅರವಿಂದ್​ - ದಿವ್ಯಾ ಉರುಡುಗ
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on: Apr 10, 2021 | 3:31 PM

Share

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದು ಕಡೆಯಾದರೆ, ಲವ್​ ಸ್ಟೋರಿಗಳು ಇನ್ನೊಂದು ಕಡೆ ಹೈಲೈಟ್ ಆಗುತ್ತಿವೆ. ಅದರಲ್ಲೂ ಅರವಿಂದ್​ ಕೆ.ಪಿ. ಹಾಗೂ ದಿವ್ಯಾ ಉರುಡುಗ ನಡುವಿನ ಆಪ್ತತತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದು ಮನೆಯ ಸದಸ್ಯರ ಕಣ್ಣು ಕುಕ್ಕುತ್ತಿದೆ. ವೀಕ್ಷಕರ ವಲಯದಲ್ಲೂ ಈ ಬಗ್ಗೆ ಚರ್ಚೆ ಜೋರಾಗಿದೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿಹಕ್ಕಿಗಳು ತಮ್ಮ ಪಾಡಿಗೆ ತಾವು ಹಾಯಾಗಿವೆ. ಇತ್ತೀಚೆಗೆ ದೊಡ್ಮನೆಯಲ್ಲಿ ಅವರಿಬ್ಬರ ಒಂದು ವಿಲಕ್ಷಣ ವರ್ತನೆ ಬೆಳಕಿಗೆ ಬಂದಿದೆ.

ಬಿಗ್​ ಬಾಸ್​ ಮನೆಯಲ್ಲಿ ರಾತ್ರಿ ಬೆಡ್​ ರೂಮ್​ ಲೈಟ್​ ಆಫ್​ ಆದ ಬಳಿಕ ಎಲ್ಲರೂ ಮಲಗುತ್ತಾರೆ. ಇನ್ನೊಬ್ಬರ ನಿದ್ರೆಗೆ ತೊಂದರೆ ಆಗಬಾರದು ಎಂದು ಪಿಸುಮಾತಿನಲ್ಲಿ ಸಂವಹನ ನಡೆಸುತ್ತಾರೆ. ಇಂಥ ಸಮಯದಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಕಣ್ಸನ್ನೆಯಲ್ಲೇ ಏನೇನೋ ಮಾತನಾಡಿಕೊಂಡಿದ್ದಾರೆ. ಏ.9ರ ಎಪಿಸೋಡ್​ನಲ್ಲಿ ಈ ದೃಶ್ಯಗಳು ಪ್ರಸಾರ ಆಗಿವೆ. ಇಬ್ಬರ ನಡುವೆ ಆಪ್ತತೆ ಹೆಚ್ಚಿದೆ ಎಂಬುದಕ್ಕೆ ಈ ಸಂಗತಿಯೇ ಸಾಕ್ಷಿ ಒದಗಿಸುತ್ತಿದೆ.

ಅಷ್ಟೇ ಅಲ್ಲ, ರಾತ್ರಿ ವೇಳೆ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಏನೆಲ್ಲ ಮಾಡುತ್ತಾರೆ ಎಂಬುದನ್ನು ಶಮಂತ್​ ಬ್ರೋ ಗೌಡ ಮತ್ತು ರಘು ಗೌಡ ಕದ್ದು ನೋಡಿದ್ದಾರೆ! ರಾತ್ರಿ ನಡೆದ ಸಂಗತಿಯ ಬಗ್ಗೆ ಬೆಳಗ್ಗೆ ಮನೆಯ ಇತರೆ ಸದಸ್ಯರಿಗೆ ಅವರು ವರದಿ ಒಪ್ಪಿಸಿದ್ದಾರೆ. ‘ದಿವ್ಯಾ ಉರುಡುಗ ಪದೇ ಪದೇ ಹೋಗಿ ಅರವಿಂದ್​ರನ್ನು ಮುಟ್ಟಿ ಬರುತ್ತಿದ್ದರು. ಸೊಳ್ಳೆ ಇರಬಹುದು ಎಂದುಕೊಂಡು ಅರವಿಂದ್​ ತೋಳಿಗೆ ಹೊಡೆದುಕೊಂಡರು’ ಎಂದು ರಘು ಮತ್ತು ಶಮಂತ್​ ಎಲ್ಲವನ್ನೂ ಬಹಿರಂಗ ಮಾಡಿದ್ದಾರೆ.

‘ಮಸಲ್​ ತೋರಿಸುವ ಸಲುವಾಗಿ ಅರವಿಂದ್​ ಆ ರೀತಿ ತೋಳಿಗೆ ಹೊಡೆದುಕೊಂಡಿರುತ್ತಾರೆ. ಒಂದು ನವಿಲು ಇನ್ನೊಂದು ನವಿಲನ್ನು ಆಕರ್ಷಿಸಲು ಗರಿ ಬಿಚ್ಚುತ್ತದೆ. ಇದೂ ಕೂಡ ಹಂಗೆ. ಇಬ್ಬರೂ ಆಚೆ ಹೋಗಿ ಮಾತನಾಡಬಹುದು. ಆದರೆ ಬೆಡ್​ ಮೇಲೆ ಕುಳಿತು ಮಾತನಾಡುವ ಮಜವೇ ಬೇರೆ’ ಎಂದು ರಘು ಕಾಮಿಡಿ ಮಾಡಿದ್ದಾರೆ. ಇದನ್ನೆಲ್ಲ ಕೇಳಿಸಿಕೊಂಡು ದಿವ್ಯಾ ಉರುಡುಗ ನಾಚಿ ನೀರಾಗಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿಯ ಲಿಪ್​ಲಾಕ್​ ವಿಡಿಯೋ ವೈರಲ್! ಪೂರ್ತಿ ಎಪಿಸೋಡ್​ ಪ್ರಸಾರ ಯಾವಾಗ?

ಮಂಜು ಬೇಡಿಕೆ ಈಡೇರಿಸಿದ ಬಿಗ್​ ಬಾಸ್​; ಒಂದೇ ದಿನ ಇಬ್ಬರು ಹೆಣ್ಮಕ್ಳು ವೈಲ್ಡ್​ ಕಾರ್ಡ್​ ಎಂಟ್ರಿ!

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ