ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?

ಟಾಸ್ಕ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಬಿಗ್​ ಬಾಸ್​ ನೀಡಿದ್ದ ಚಿಕನ್​ ಅನ್ನು ಹಿಂಪಡೆದಿದ್ದರು. ಇದಾದ ನಂತರ ಅನೇಕ ಬಾರಿ ಶುಭಾ ನನಗೆ ಚಿಕನ್​ ಬೇಕು ಎಂದು ಕ್ಯಾಮೆರಾ ಮುಂದೆ ಬಂದು ಗೋಗರೆದಿದ್ದರು.

  • TV9 Web Team
  • Published On - 6:45 AM, 8 Apr 2021
ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?
ದಿವ್ಯಾ ಉರುಡುಗ-ಅರವಿಂದ್ ಕೆಪಿ

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ನಡುವಣ ಪ್ರೀತಿ ವಿಚಾರ ಬಿಗ್​ ಬಾಸ್​ ಮನೆಯ ಸದ್ಯದ ಹಾಟ್ ಟಾಪಿಕ್​. ಅವರ ನಡುವೆ ನಡೆವ ಸಾಕಷ್ಟು ವಿಚಾರಗಳು ಬಿಗ್​ ಬಾಸ್​ ಮನೆಯಲ್ಲಿ ಹೈಲೈಟ್​ ಆಗುತ್ತಿದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಇದೇ ಮಾದರಿಯ ಘಟನೆ ಒಂದು ನಡೆದಿದೆ. ಇವರ ಪ್ರೀತಿ ನೋಡಿ ಮನೆ ಮಂದಿಯೆಲ್ಲ ಅಚ್ಚರಿ ಹೊರ ಹಾಕಿದ್ದಾರೆ.

ಟಾಸ್ಕ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಬಿಗ್​ ಬಾಸ್​ ನೀಡಿದ್ದ ಚಿಕನ್​ ಅನ್ನು ಹಿಂಪಡೆದಿದ್ದರು. ಇದಾದ ನಂತರ ಅನೇಕ ಬಾರಿ ಶುಭಾ ನನಗೆ ಚಿಕನ್​ ಬೇಕು ಎಂದು ಕ್ಯಾಮೆರಾ ಮುಂದೆ ಬಂದು ಗೋಗರೆದಿದ್ದರು. ಅಂತೆಯೇ ಒಂದು ಪ್ಲೇಟ್​ ಚಿಕನ್​ ನೀಡಲಾಯಿತು. ಇದನ್ನು ಒಂದು ಗಂಟೆ ಹಿಡಿದೇ ನಿಲ್ಲಬೇಕಿತ್ತು. ಪ್ರತಿ ಒಂದು ಗಂಟೆಗೆ ಇದು ಬೇರೆಯವರ ಕೈಗೆ ವರ್ಗಾವಣೆ ಆಗಬೇಕು.

ರಾತ್ರಿ 11 ಗಂಟೆ ವೇಳೆಗೆ ಈ ಪ್ಲೇಟ್​ ದಿವ್ಯಾ ಉರುಡುಗ ಕೈಗೆ ವರ್ಗಾವಣೆ ಆಗಿತ್ತು. ಅವರಿಗೆ ಹಸಿವಾದ್ದರಿಂದ ಊಟ ಮಾಡಬೇಕು ಎಂದರು. ಆಗ ಅರವಿಂದ್​ ಒಂದು ಪ್ಲೇಟ್​ನಲ್ಲಿ ಅನ್ನ ಮತ್ತು ರಸಂ ಹಾಕಿಕೊಂಡು ಬಂದರು. ಅಷ್ಟೇ ಅಲ್ಲ, ಸ್ಫೂನ್​ ಮೂಲಕ ದಿವ್ಯಾಗೆ ಊಟ ಮಾಡಿಸಿದ್ದಾರೆ. ಇದನ್ನು ನೋಡಿದ ಮನೆ ಮಂದಿಯೆಲ್ಲರೂ ಅರವಿಂದ್ ಕಾಲೆಳೆದಿದ್ದಾರೆ. ಊಟ ಮಾಡಿಸಪ್ಪ, ಊಟ ಮಾಡಿಸಪ್ಪ ಎಂದು ಕೊಂಕು ಮಾಡಿದ್ದಾರೆ. ಅರವಿಂದ್​ ಅವರು ಊಟ ಮಾಡಿಸುತ್ತಿದ್ದಂತೆ ದಿವ್ಯಾ ಖುಷಿಯಾಗಿದ್ದಾರೆ. ಅದು ಅವರ ಮುಖದಲ್ಲೂ ಎದ್ದು ಕಾಣುತ್ತಿತ್ತು.   ಒಟ್ಟಿನಲ್ಲಿ ಇಬ್ಬರ ಪ್ರೇಮ ವಿಚಾರ ಸದ್ಯ ಮನೆ ತುಂಬೆಲ್ಲ ಚರ್ಚೆ ಆಗುತ್ತಿದೆ. ಆದರೆ, ಈ ಜೋಡಿ ಮಾತ್ರ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಬೇರೆ ಬೇರೆ ತಂಡದಲ್ಲಿದ್ರೂ ದಿವ್ಯಾ-ದಿವ್ಯಾ ಹೊಸ ಗೇಮ್ ಪ್ಲಾನ್; ರೋಲ್ ಮಾಡೆಲ್ ಆಗೋ ಆಸೆಯಲ್ಲಿ ದಿವ್ಯಾ ಉರುಡುಗ

ಮಂಜು- ದಿವ್ಯಾ ಸುರೇಶ್‌ದು ಆಗಲ್ಲ, ಸಮಾನತೆ ಕಾಣಲ್ಲ : ಶಂಕರ್ ಅಶ್ವಥ್