ಬೇರೆ ಬೇರೆ ತಂಡದಲ್ಲಿದ್ರೂ ದಿವ್ಯಾ-ದಿವ್ಯಾ ಹೊಸ ಗೇಮ್ ಪ್ಲಾನ್; ರೋಲ್ ಮಾಡೆಲ್ ಆಗೋ ಆಸೆಯಲ್ಲಿ ದಿವ್ಯಾ ಉರುಡುಗ

ಈ ಮೊದಲು ಅಷ್ಟೊಂದು ಕ್ಲೋಸ್ ಆಗಿರದಿದ್ದ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಈಗ ತುಂಬಾ ಕ್ಲೋಸ್ ಆಗಿ ಮಾತನಾಡಿದ್ದಾರೆ. ಅವರಿಬ್ಬರು ಜೊತೆಗೆ ಕೂತು, ತುಂಬಾ ಖುಷಿಯಿಂದ ಮಾತನಾಡಿರುವ ವಿಡಿಯೋ ತುಣುಕನ್ನು ವಾಹಿನಿ ಹಂಚಿಕೊಂಡಿದೆ.

ಬೇರೆ ಬೇರೆ ತಂಡದಲ್ಲಿದ್ರೂ ದಿವ್ಯಾ-ದಿವ್ಯಾ ಹೊಸ ಗೇಮ್ ಪ್ಲಾನ್; ರೋಲ್ ಮಾಡೆಲ್ ಆಗೋ ಆಸೆಯಲ್ಲಿ ದಿವ್ಯಾ ಉರುಡುಗ
ದಿವ್ಯಾ ಉರುಡುಗ-ದಿವ್ಯಾ ಸುರೇಶ್
Follow us
TV9 Web
| Updated By: ganapathi bhat

Updated on:Apr 05, 2022 | 12:45 PM

ಬಿಗ್​ಬಾಸ್ ಮನೆಯಲ್ಲಿ ಒಮ್ಮೆ ಒಬ್ಬರಿಗೊಬ್ಬರು ಕಿತ್ತಾಡಿಕೊಂಡರೆ ಮತ್ತೊಮ್ಮೆ ಒಂದಾಗಿಬಿಡುತ್ತಾರೆ. ಪರಸ್ಪರ ಜಗಳ ಮಾಡಿ ನಂತರ ಗೆಳೆಯ-ಗೆಳತಿಯರಾಗುತ್ತಾರೆ. ಒಬ್ಬರಿಗೆ ಮತ್ತೊಬ್ಬರು ಆಗಲ್ಲ ಎಂದು ಬದುಕೋಕೆ ಬಿಗ್ ಬಾಸ್ ಬಿಡೋದಿಲ್ಲ. ಅಂಥ ಸಂದರ್ಭಕ್ಕೆ ಸರಿಯಾಗಿ ಯಾವುದೋ ಒಂದು ಟಾಸ್ಕ್ ಕೊಟ್ಟು ಬಿಗ್ ಬಾಸ್ ಮನೆಯ ಚಿತ್ರಣವನ್ನೇ ಬದಲಾಯಿಸಿಬಿಡುತ್ತಾರೆ. ಈ ಸೀಸನ್​ನಲ್ಲೂ ಅಂಥ ಕೆಲವು ಘಟನೆಗಳು ನಡೆದಿವೆ.

ಮೊದಮೊದಲು ಯಾರ ಜೊತೆಗೂ ಮಾತಾಡದೆ ಇರುತ್ತಿದ್ದ ವೈಷ್ಣವಿ, ಟಾಸ್ಕ್ ಬಳಿಕ ರಘು ಗೌಡಗೆ ಕ್ಲೋಸ್ ಆಗಿದ್ದರು. ಅವರಿಬ್ಬರೂ ಉತ್ತಮ ಗೆಳೆಯರಾಗಿ ಪರಸ್ಪರ ಖುಷಿ-ನೋವು ಹಂಚಿಕೊಂಡಿದ್ದರು. ಮೊದಲು ತುಂಬಾ ಒಟ್ಟಾಗಿ ಇರುತ್ತಿದ್ದ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಈ ನಡುವೆ ಯಾಕೋ ಸ್ವಲ್ಪ ದೂರವಾಗಿದ್ದರು. ಹೀಗೆ ಸಂಬಂಧಗಳು ಹಾವು ಏಣಿ ಆಟದಂತೆ ತನ್ನ ರೂಪ-ಸ್ಥಿತಿ ಬದಲಿಸುತ್ತಾ ಮನೆಯಲ್ಲಿ ಆಶ್ಚರ್ಯ ಅನಿಸುವಂತಹ ಘಟನೆಗಳು ಆಗುವಂತೆ ಮಾಡುತ್ತಿರುತ್ತದೆ.

ಈಗಲೂ ಅಂಥ ಒಂದು ಘಟನೆ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಈ ಮೊದಲು ಅಷ್ಟೊಂದು ಕ್ಲೋಸ್ ಆಗಿರದಿದ್ದ ದಿವ್ಯಾ  ಸುರೇಶ್ ಹಾಗೂ ದಿವ್ಯಾ ಉರುಡುಗ ಈಗ ತುಂಬಾ ಕ್ಲೋಸ್ ಆಗಿ ಮಾತನಾಡಿದ್ದಾರೆ. ಅವರಿಬ್ಬರು ಜೊತೆಗೆ ಕೂತು, ತುಂಬಾ ಖುಷಿಯಿಂದ ಮಾತನಾಡಿರುವ ವಿಡಿಯೋ ತುಣುಕನ್ನು ವಾಹಿನಿ ಹಂಚಿಕೊಂಡಿದೆ.

ಆ ವಿಡಿಯೋದಲ್ಲಿ ಅವರಿಬ್ಬರು ಹೊಸ ಗೇಮ್ ಪ್ಲಾನ್ ಹಾಕಿಕೊಂಡಿದ್ದಾರೆ. ‘ಬೆಸ್ಟ್ ಆಡೋಣ ಬ್ರೋ’ ಎಂದು ದಿವ್ಯಾ ಉರುಡುಗ ದಿವ್ಯಾ ಸುರೇಶ್​ಗೆ ಸ್ಫೂರ್ತಿ ತುಂಬಿದ್ದಾರೆ. ಹೊರಗಡೆ ನೋಡೋ ಹುಡುಗೀರಿಗೆಲ್ಲ ನಮ್ಮನ್ನ ನೋಡಿ ಆಸೆ ಆಗಬೇಕು. ನಮ್ಮ ಹಾಗೆ ಆಗ್ಬೇಕು ಅಂತ ಅವ್ರಿಗೆ ಅನಿಸಬೇಕು ಎಂದು ತಮ್ಮ ಕನಸು ತೋಡಿಕೊಂಡಿದ್ದಾರೆ. ಇದಕ್ಕೆ ದಿವ್ಯಾ ಸುರೇಶ್ ಕೂಡ ಸಮ್ಮತಿ ಸೂಚಿಸಿದ್ದಾರೆ.

DIVYA SURESH DIVYA URUDUGA

ದಿವ್ಯಾ ಉರುಡುಗ-ದಿವ್ಯಾ ಸುರೇಶ್

ಈಗ ನಡೆಯುತ್ತಿರೋ ಆಟದಲ್ಲಿ ಪರಸ್ಪರ ಬೇರೆ ತಂಡದಲ್ಲಿ ಇರುವ ದಿವ್ಯಾ-ದಿವ್ಯಾ, ಟಾಸ್ಕ್​ನ ಗಲಾಟೆ, ಜಗಳ, ಮನಸ್ತಾಪಗಳನ್ನು ಅಲ್ಲೇ ಬಿಡೋಣ. ಬೇರೆವ್ರ ರೀತಿ ಕಿರುಚಾಡೋದು ಬೇಡ ಅಂದಿದ್ದಾರೆ. ಆದ್ರೆ ಈ ವಿಷ್ಯಕ್ಕೆ ಕೆಲವು ಅಭಿಮಾನಿಗಳು ಖುಷಿಪಟ್ಟಿದ್ರೆ, ಇನ್ನು ಕೆಲವರು ಬೈದುಕೊಂಡಿದ್ದಾರೆ. ನೀವಿಬ್ರು ವೈಷ್ಣವಿನ ನೋಡಿ ಕಲಿಬೇಕು ಎಂದು ಹೇಳಿದ್ದಾರೆ. ಈ ರೀತಿ ಗೇಮ್ ಪ್ಲಾನ್ ಮಾಡ್ಕೊಂಡು ಆಟ ಆಡೊ ತಂತ್ರ ಇದು ಅಂತಲೂ ಜನರು ಆಡಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಗುಟ್ಟಾಗಿ ನಡೆಯುತ್ತಿದ್ದ ನಾಮಿನೇಷನ್​ ಈಗ ಬಟಾಬಯಲು! ಯಾರಿಗೆಲ್ಲ ಕಾದಿದೆ ಅಪಾಯ?

ಇದನ್ನೂ ಓದಿ: ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​

(Bigg Boss Kannada 8 Divya Suresh Divya Uruduga new game plan Divya wants to become Role Model)

Published On - 7:38 pm, Tue, 6 April 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ