ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​

ಅರವಿಂದ್ ಕೆ.ಪಿ ಕೂಡ ಈ ವಾರ ನಾಮಿನೇಷನ್​ ಆಗಿದ್ದಾರೆ. ಅವರು, ಸ್ಟ್ರಾಂಗ್​ ಸ್ಪರ್ಧಿ ಎನ್ನುವ ಕಾರಣ ನೀಡಿದರು. ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ ಮೇಲೂ ನಾಮಿನೇಟ್​ ತೂಗುಗತ್ತಿ ಇದೆ.

ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​
ರಘು ಗೌಡ-ನಿಧಿ ಸುಬ್ಬಯ್ಯ
Follow us
ರಾಜೇಶ್ ದುಗ್ಗುಮನೆ
|

Updated on: Apr 05, 2021 | 10:32 PM

ಬಿಗ್​ ಬಾಸ್​ ಮನೆಯಲ್ಲಿ ಆರನೇ ವಾರದ ಎಲಿಮಿನೇಷನ್​ಗೆ ನಾಮಿನೇಷನ್​ ನಡೆದಿದೆ. ಒಟ್ಟು ಏಳು ಜನರ ಮೇಲೆ ಎಲಿಮಿನೇಷನ್​​ ತೂಗುಗತ್ತಿ ತೂಗುತ್ತಿದೆ. ಈ ಬಾರಿಯ ನಾಮಿನೇಷನ್​ ವೇಳೆ ರಘು ಗೌಡ ಹೆಸರನ್ನು ನಿಧಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಇದನ್ನು ಬಿಗ್​ ಬಾಸ್​ ಸ್ವೀಕರಿಸಲೇ ಇಲ್ಲ. ಇದು ಏಕೆ ಎನ್ನುವ ಪ್ರಶ್ನೆಯನ್ನು ಕೂಡ ನಿಧಿ ಕೇಳಿದರು. ಆದರೆ, ಯಾರೂ ಇದಕ್ಕೆ ಉತ್ತರ ಕೊಟ್ಟಿಲ್ಲ. ಹಾಗಾದ್ರೆ ಹೀಗೆಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಬಾರಿ ನಾಮಿನೇಷನ್​ಗೆ ನಾಯಕ ಮಂಜು ಪಾವಗಡ, ನೇರವಾಗಿ ನಾಮಿನೇಟ್​ ಆದ ನಿಧಿ ಸುಬ್ಬಯ್ಯ ಹಾಗೂ ಈ ವಾರವಷ್ಟೇ ಬಂದ ಚಕ್ರವರ್ತಿ ಚಂದ್ರಚೂಡ ಅವರ ಹೆಸರನ್ನು ಎತ್ತಿಕೊಳ್ಳುವಂತಿರಲಿಲ್ಲ. ಹೀಗಾಗಿ, ಮನೆಯಲ್ಲಿ ಬಹುತೇಕರು ಶಮಂತ್​ ಬ್ರೋ ಗೌಡ ಅವರ ಹೆಸರನ್ನು ಆಯ್ಕೆ ಮಾಡಿಕೊಂಡರು. ಅವರು ತುಂಬಾನೇ ಸ್ಲೋ, ನಮ್ಮ ವೇಗಕ್ಕೆ ಅವರು ಹೊಂದಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಅರವಿಂದ್ ಕೆ.ಪಿ ಕೂಡ ಈ ವಾರ ನಾಮಿನೇಷನ್​ ಆಗಿದ್ದಾರೆ. ಅವರು, ಸ್ಟ್ರಾಂಗ್​ ಸ್ಪರ್ಧಿ ಎನ್ನುವ ಕಾರಣ ನೀಡಿದರು. ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ ಮೇಲೂ ಎಲಿಮಿನೇಷನ್​​ ತೂಗುಗತ್ತಿ ಇದೆ. ನಿಧಿ ಸುಬ್ಬಯ್ಯ ಅವರನ್ನು ಶಂಕರ್ ಅಶ್ವತ್ಥ್​ ನೇರವಾಗಿ ನಾಮಿನೇಟ್​ ಮಾಡಿದ್ದರು.

ಮನೆಯ ನಾಯಕ ಮಂಜುಗೆ ಒಬ್ಬರನ್ನು ನಾಮಿನೇಟ್​ ಮಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ, ರಾಜೀವ್​ ಅವರನ್ನು ಮಂಜು ಡೇಂಜರ್​ ಜೋನ್​ಗೆ ತಳ್ಳಿದರು. ಇದೇ ವೇಳೆ ರಘು ಹೆಸರನ್ನು ಶುಭಾ ನಾಮಿನೇಟ್​ ಮಾಡಿದ್ದರು. ಆದರೆ, ಅವರ ಹೆಸರು ನಾಮಿನೇಟ್​ ಲಿಸ್ಟ್​ಗೆ ಬಂದೇ ಇಲ್ಲ.

ಇದಕ್ಕೂ ಕಾರಣವಿದೆ. ಎಲಿಮಿನೇಷನ್​ಗೆ ನಾಮಿನೇಟ್​ ಆಗಬೇಕು ಎಂದರೆ ಎರಡಕ್ಕಿಂತ ಹೆಚ್ಚು ಜನರು ಅವರ ಹೆಸರನ್ನು ತೆಗೆದುಕೊಳ್ಳಬೇಕು. ರಘು ಹೆಸರನ್ನು ಎತ್ತಿಕೊಂದಿದ್ದು ಶುಭಾ ಮಾತ್ರ. ಹೀಗಾಗಿ, ರಘು ಹೆಸರು ನಾಮಿನೇಟ್​ ಲಿಸ್ಟ್​ಗೆ ಬಂದಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳೋಕೆ ಸಿದ್ಧವಾಗಿದೆ ಪ್ಲ್ಯಾನ್​! ಸಂಬರಗಿ-ಚಂದ್ರಚೂಡ್​ ಕಿಂಗ್​ಪಿನ್​​

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್