ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳೋಕೆ ಸಿದ್ಧವಾಗಿದೆ ಪ್ಲ್ಯಾನ್​! ಸಂಬರಗಿ-ಚಂದ್ರಚೂಡ್​ ಕಿಂಗ್​ಪಿನ್​​

ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮೊದಲಿನಿಂದಲೂ ಪರಿಚಯವಿತ್ತು. ಹೀಗಾಗಿ, ಇಬ್ಬರೂ ಬಹುಬೇಗ ಆಪ್ತರಾಗಿಬಿಟ್ಟರು.

ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳೋಕೆ ಸಿದ್ಧವಾಗಿದೆ ಪ್ಲ್ಯಾನ್​! ಸಂಬರಗಿ-ಚಂದ್ರಚೂಡ್​ ಕಿಂಗ್​ಪಿನ್​​
ಪ್ರಶಾಂತ್​-ಚಕ್ರವರ್ತಿ
Follow us
ರಾಜೇಶ್ ದುಗ್ಗುಮನೆ
|

Updated on: Apr 05, 2021 | 8:50 PM

ಬಿಗ್​ ಬಾಸ್​ ಮನೆಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಒಗ್ಗಟ್ಟು ಬಂದಿದೆ. ಚಕ್ರವರ್ತಿ ಚಂದ್ರಚೂಡ್​ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟ ನಂತರವಂತೂ ಈ ಒಗ್ಗಟ್ಟು ಮತ್ತಷ್ಟು ಬಲಗೊಂಡಿದೆ. ವೀಕೆಂಡ್​ನಲ್ಲಿ ಈ ಬಗ್ಗೆ ಕಿಚ್ಚ ಸುದೀಪ್​ ಕೂಡ ಹೇಳಿಕೊಂಡಿದ್ದರು. ಈಗ ಒಡೆದು ಆಳೋಕೆ ಮನೆಯಲ್ಲಿ ಪ್ಲ್ಯಾನ್​ ಒಂದು ಸಿದ್ಧವಾಗಿದೆ. ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರೇ ಈ ಪ್ಲ್ಯಾನ್​ನ ಕಿಂಗ್​ಪಿನ್​ಗಳು. ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮೊದಲಿನಿಂದಲೂ ಪರಿಚಯವಿತ್ತು. ಹೀಗಾಗಿ, ಇಬ್ಬರೂ ಬಹುಬೇಗ ಆಪ್ತರಾಗಿಬಿಟ್ಟರು. ಅಷ್ಟೇ ಅಲ್ಲ ಮನೆಯನ್ನು ಒಡೆದು ಆಳೋಕೆ ಇಬ್ಬರೂ ಮಾತುಕತೆ ನಡೆಸಿದ್ದರು. ಈಗ ಇದು ಜಾರಿಗೆ ಬಂದಂತೆ ಕಾಣುತ್ತಿದೆ.

ಕಲರ್ಸ್​ ಕನ್ನಡ ವಾಹಿನಿ ಇಂದು ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳುವುದು ಹೇಗೆ? ಯಾರ ವೀಕ್​ನೆಸ್​ ಏನು? ಏನು ಮಾಡಿದರೆ ಯಾರು ನಮ್ಮ ಟೀಂಗೆ ಬರುತ್ತಾರೆ ಎನ್ನುವ ಬಗ್ಗೆ ಪ್ರಶಾಂತ್​-ಚಕ್ರವರ್ತಿ ಮಾತುಕತೆ ನಡೆಸಿದ್ದಾರೆ.

ಮಂಜು ಬಗ್ಗೆ ಚಂದ್ರಚೂಡ್ ಮೊದಲಿನಿಂದಲೂ ಅಸಮಾಧಾನ ಹೊಂದಿದ್ದಾರೆ. ಇತ್ತೀಚೆಗೆ ಇಬ್ಬರ ನಡುವೆ ವಾಗ್ವಾದ ಕೂಡ ಏರ್ಪಟ್ಟಿತ್ತು. ಹೀಗಾಗಿ, ಮಂಜು ಬುದ್ಧಿ ತುಂಬಾನೇ ಕ್ರೂರವಾಗಿದೆ ಎನ್ನುವ ಅಭಿಪ್ರಾಯವನ್ನು ಚಂದ್ರಚೂಡ್​ ವ್ಯಕ್ತಪಡಿಸಿದ್ದಾರೆ. ರಾಜೀವ್​ ವಾಟರ್​​ ಬಾಯ್​​, ಶಕ್ತಿ ಯಾರಿಗೆ ಹೆಚ್ಚಿದೆಯೋ ಅವರ ಕಡೆ ವಾಲುವ ಗುಣ ಅರವಿಂದ್​​ನದ್ದು ಎಂದಿದ್ದಾರೆ ಅವರು.

ರಘು, ಶಮಂತ್​, ವಿಶ್ವ ಅಂತರ್​ಪಿಶಾಚಿಗಳು ಎಂದು ಚಂದ್ರಚೂಡ್​ ಕರೆದಿದ್ದಾರೆ. ಈ ಮೂವರು ಯಾವುದೇ ಟೀಂಗೆ ಸೇರಿದವರಲ್ಲ, ಎಲ್ಲರ ಜತೆಯೂ ಬರೆಯುತ್ತಾರೆ. ಹೀಗಾಗಿ, ಅವರು ಈ ಅಭಿಪ್ರಾಯ ಹೊರ ಹಾಕಿದ್ದಾರೆ. ನಾವಿಬ್ಬರೂ ರಾಜ ಕೂತ ಹಾಗೆ ಕೂತು, ಇದನ್ನು ಕೆಡಿಸಲೇಬೇಕು. ಅವರ ಟೀಂ ನಿಂದ ಒಂದು ವಿಕೆಟ್​ ಆಚೆ ಹೋದರೆ ಸಾಕು ಎಂದಿದ್ದಾರೆ ಚಂದ್ರಚೂಡ್​. ಈ ಮೂಲಕ ಮನೆಯಲ್ಲಿ ಒಡೆದು ಆಳೋಕೆ ಪ್ಲ್ಯಾನ್​ ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ: ‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!

 ‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ