ದಿವ್ಯಾ ಸುರೇಶ್​ ಮಾಡಿದ ಈ ತಪ್ಪನ್ನು ಮಂಜು ಯಾವತ್ತೂ ಕ್ಷಮಿಸಲ್ಲ!

ಮಂಜುವಿನಿಂದ ದಿವ್ಯಾರನ್ನು ದೂರ ಮಾಡಬೇಕು ಎನ್ನುವ ತಂತ್ರ ಫಲಿಸಿದಂತೆ ಕಾಣುತ್ತಿದೆ. ದಿವ್ಯಾ ನಿಧಾನವಾಗಿ ಪ್ರಶಾಂತ್​ ಕಡೆ ವಾಲುತ್ತಿದ್ದಾರೆ.

ದಿವ್ಯಾ ಸುರೇಶ್​ ಮಾಡಿದ ಈ ತಪ್ಪನ್ನು ಮಂಜು ಯಾವತ್ತೂ ಕ್ಷಮಿಸಲ್ಲ!
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on: Apr 06, 2021 | 7:01 AM

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ನಡುವೆ ನಿಧಾನವಾಗಿ ವೈಮನಸ್ಸು ಬೆಳೆಯುತ್ತಿದೆ. ಇದಕ್ಕೆ ಪ್ರಶಾಂತ್​ ಸಂಬರಗಿ ನೇರ ಕಾರಣ ಎಂದರೆ ತಪ್ಪಾಗಲಾರದು. ಪ್ರಶಾಂತ್​ ಮನೆಯಲ್ಲಿ ಮಾಡುತ್ತಿರುವ ಕೆಲ ತಂತ್ರಗಳಿಂದ ಮಂಜು ಬಗ್ಗೆ ದಿವ್ಯಾಗೆ ಬೇರೆಯದೇ ಅಭಿಪ್ರಾಯ ಬೆಳೆಯುತ್ತಿದೆ. ಪ್ರಶಾಂತ್​ ಮಾಡುತ್ತಿರುವ ಒಳಸಂಚು ಮಂಜುಗೆ ನಿಧಾನವಾಗಿ ಅರ್ಥವಾಗುತ್ತಿದೆ. ಆದರೆ, ದಿವ್ಯಾ ಸುರೇಶ್​ಗೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ-ದಿವ್ಯಾ ಸುರೇಶ್​ ಒಟ್ಟಾಗಿದ್ದರು. ಇವರ ಒಗ್ಗಟ್ಟನ್ನು ಮುರಿಯೋಕೆ ಪ್ರಶಾಂತ್​ ನಿರಂತರವಾಗಿ ಪ್ರಯತ್ನಪಡುತ್ತಲೇ ಇದ್ದಾರೆ. ಇದೇ ಕಾರಣಕ್ಕೆ, ಮಂಜುವಿನ ಬಾಲ ದಿವ್ಯಾ ಎಂದು ಪುನರುಚ್ಛರಿಸುತ್ತಲೇ ಬಂದಿದ್ದಾರೆ. ಇದನ್ನು ಅದೆಷ್ಟು ಬಾರಿ ಹೇಳಿದ್ದಾರೆ ಎಂದರೆ, ನಾನು ಮಂಜುವಿನ ಬಾಲವೇ ಇರಬಹುದು ಎನ್ನುವಂತೆ ಭಾಸವಾಗುತ್ತಿದೆ. ಮಂಜುವಿನಿಂದ ದಿವ್ಯಾರನ್ನು ದೂರ ಮಾಡಬೇಕು ಎನ್ನುವ ತಂತ್ರ ಫಲಿಸಿದಂತೆ ಕಾಣುತ್ತಿದೆ. ದಿವ್ಯಾ ನಿಧಾನವಾಗಿ ಪ್ರಶಾಂತ್​ ಕಡೆ ವಾಲುತ್ತಿದ್ದಾರೆ. ಅಷ್ಟೇ ಅಲ್ಲ, ಮಂಜುವಿನಿಂದ ದೂರವೇ ಇರಲು ಪ್ರಯತ್ನಿಸುತ್ತಿರುವ ಅವರು ಪ್ರಶಾಂತ್​ಗೆ ಹತ್ತಿರವಾಗುತ್ತಿದ್ದಾರೆ.

ಅತ್ತ, ದಿವ್ಯಾ ಸುರೇಶ್​ ವಿರುದ್ಧವೇ ಪ್ರಶಾಂತ್​ ಕತ್ತಿ ಮಸೆಯುತ್ತಿದ್ದಾರೆ. ಬ್ರೋ ಗೌಡ ಅವರನ್ನು ಮಂಜು ಎತ್ತಿ ಕಟ್ಟುತ್ತಿದ್ದಾರೆ. ಆದರೆ, ಈ ಯಾವ ವಿಚಾರಗಳೂ ದಿವ್ಯಾ ಸುರೇಶ್​ಗೆ ಗೊತ್ತೇ ಆಗುತ್ತಿಲ್ಲ.

ಬಿಗ್ ಬಾಸ್​ ಮನೆಯಲ್ಲಿ ಮಂಜು ತಂಡ ಮಾಡಿಕೊಂಡಿದ್ದಾರೆ. ಎಲ್ಲರೂ ಅವರ ಪರವಾಗಿಯೇ ಇದ್ದಾರೆ ಎಂಬುದು ಚಕ್ರವರ್ತಿ ಚಂದ್ರಚೂಡ್​ ಭಾವನೆ. ಪ್ರಶಾಂತ್​ಗೂ ಇದು ಹೌದೆನ್ನಿಸಿದೆ. ಹೀಗಾಗಿ, ಆ ತಂಡದಿಂದ ಒಬ್ಬರನ್ನು ತಮ್ಮ ಕಡೆ ಸೆಳೆದುಕೊಳ್ಳೋಕೆ ಪ್ಲಾನ್​ ಹಾಕುತ್ತಿದ್ದಾರೆ. ಒಂದೊಮ್ಮೆ ಈ ಯೋಜನೆಗೆ ಬಲಿಯಾಗಿ ಪ್ರಶಾಂತ್​ ಕಡೆ ದಿವ್ಯಾ ಸಂಪೂರ್ಣವಾಗಿ ವಾಲಿದರೆ ಈ ತಪ್ಪನ್ನು ಮಂಜು ಎಂದಿಗೂ ಕ್ಷಮಿಸುವುದಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​

ಮಂಜುನ ಪ್ರೀತಿಸ್ತೀನಿ ಎನ್ನುತ್ತ ಸುದೀಪ್​ ಎದುರಲ್ಲೇ ಟ್ವಿಸ್ಟ್​ ಕೊಟ್ಟ ದಿವ್ಯಾ! ಅಬ್ಬಬ್ಬಾ ಸಖತ್​ ಚಾಲಾಕಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ