AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಮಹಿಮಾ ಮುಖದಲ್ಲಿತ್ತು 67 ಗಾಜಿನ ಚೂರುಗಳು! ಭೀಕರ ಅಪಘಾತದ ಕರಾಳ ನೆನಪು

ಕಾರಿನ ಗಾಜು ಒಡೆದು ಮಹಿಮಾ ಚೌಧರಿ ಮುಖಕ್ಕೆ ಅಪ್ಪಳಿಸಿತು. ಇದರಿಂದ ಅವರ ಮುಖ ತೀವ್ರವಾಗಿ ಗಾಯಗೊಂಡಿತು. ಒಬ್ಬ ನಟಿಗೆ ಇದಕ್ಕಿಂತ ದೊಡ್ಡ ಶಾಪ ಬೇರೊಂದಿಲ್ಲ!

ನಟಿ ಮಹಿಮಾ ಮುಖದಲ್ಲಿತ್ತು 67 ಗಾಜಿನ ಚೂರುಗಳು! ಭೀಕರ ಅಪಘಾತದ ಕರಾಳ ನೆನಪು
ಅಜಯ್​ ದೇವಗನ್​ - ಮಹಿಮಾ ಚೌಧರಿ
ಮದನ್​ ಕುಮಾರ್​
|

Updated on: Apr 06, 2021 | 9:10 AM

Share

ಬಾಲಿವುಡ್​ ನಟಿ ಮಹಿಮಾ ಚೌಧರಿ ಅವರು 1997ರಲ್ಲಿ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದರು. ಶಾರುಖ್​ ಖಾನ್​ ನಟನೆಯ ‘ಪರ್ದೇಸ್​’ ಸಿನಿಮಾದಲ್ಲಿ ಅವರು ಮೊದಲು ಅಭಿನಯಿಸಿದರು. ಆದರೆ ಚಿತ್ರರಂಗದಲ್ಲಿ ಇನ್ನೇನು ಬೆಳೆಯಬೇಕು ಎಂಬಷ್ಟರಲ್ಲಿ ಅವರಿಗೆ ಒಂದು ಆಘಾತ ಎದುರಾಯಿತು. 1999ರ ಸಮಯದಲ್ಲಿ ಅವರು ‘ದಿಲ್​ ಕ್ಯಾ ಕರೇ’ ಸಿನಿಮಾ ಶೂಟಿಂಗ್​ಗೆ ತೆರಳುತ್ತಿದ್ದಾಗ ರಸ್ತೆ ಅಪಘಾತವಾಯಿತು. ಆ ದುರ್ಘಟನೆ ನಡೆದಿದ್ದು ಬೆಂಗಳೂರಿನಲ್ಲಿ! ಅಂಥ ಕಷ್ಟದ ಸಂದರ್ಭದಲ್ಲಿ ಮಹಿಮಾ ಸಹಾಯಕ್ಕೆ ಬಂದಿದ್ದು ನಟ ಅಜಯ್​ ದೇವಗನ್​. ಆ ದಿನಗಳನ್ನು ಮಹಿಮಾ ಈಗ ಮತ್ತೆ ನೆನಪು ಮಾಡಿಕೊಂಡಿದ್ದಾರೆ.

‘ದಿಲ್​ ಕ್ಯಾ ಕರೇ’ ಸಿನಿಮಾದ ಶೂಟಿಂಗ್​ಗಾಗಿ ತೆರಳುತ್ತಿದ್ದಾಗ ಮಹಿಮಾ ಪ್ರಯಾಣಿಸುತ್ತಿದ್ದ ಕಾರಿಗೆ ಒಂದು ಹಾಲಿನ ಟ್ರಕ್​ ಡಿಕ್ಕಿ ಹೊಡೆಯಿತು. ಕಾರು ಪಲ್ಟಿ ಆಯಿತು. ಮಹಿಮಾಗೆ ಮೂಳೆ ಮುರಿಯಲಿಲ್ಲವಾದರೂ ಮುಖಕ್ಕೆ ಗಂಭೀರವಾಗಿ ಪೆಟ್ಟಾಯಿತು. ಕಾರಿನ ಗಾಜು ಒಡೆದು ಮುಖಕ್ಕೆ ಅಪ್ಪಳಿಸಿತು. ಇದರಿಂದ ಅವರ ಮುಖ ತೀವ್ರವಾಗಿ ಗಾಯಗೊಂಡಿತು. ಒಬ್ಬ ನಟಿಗೆ ಇದಕ್ಕಿಂತ ದೊಡ್ಡ ಶಾಪ ಬೇರೊಂದಿಲ್ಲ. ಅಂಥ ಕಠಿಣ ಸಂದರ್ಭವನ್ನು ಎದುರಿಸಲು ಅವರಿಗೆ ಬೆಂಬಲವಾಗಿ ನಿಂತವರು ಅಜಯ್​ ದೇವಗನ್ ಮತ್ತು ಅವರ ಪತ್ನಿ ಕಾಜೋಲ್​.

ಮಹಿಮಾ ನಟಿಸುತ್ತಿದ್ದ ದಿಲ್​ ಕ್ಯಾ ಕರೇ ಸಿನಿಮಾದಲ್ಲಿ ಅಜಯ್​ ದೇವಗನ್​ ಮತ್ತು ಕಾಜೋಲ್​ ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದರು. ಆ ಸಿನಿಮಾದ ನಿರ್ಮಾಪಕರಲ್ಲಿ ಅಜಯ್​ ದೇವಗನ್​ ಕೂಡ ಒಬ್ಬರಾಗಿದ್ದರು. ಹಾಗಾಗಿ ಮಹಿಮಾ ಅವರ ಚಿಕಿತ್ಸೆ ಜವಾಬ್ದಾರಿಯನ್ನು ಅಜಯ್​ ದೇವಗನ್​ ಅವರೇ ವಹಿಸಿಕೊಂಡರು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವುದು ಬೇಡ ಎಂದು ಅವರನ್ನು ಮುಂಬೈಗೆ ಕಳಿಸಿದರು.

ಅಪಘಾತ ಆದಾಗ ನನ್ನನ್ನು ಆಸ್ಪತ್ರೆಗೆ ಸೇರಿದರು ಯಾರೂ ಸಹಾಯ ಮಾಡಲಿಲ್ಲ. ನಂತರ ನನ್ನ ತಾಯಿ ಮತ್ತು ಅಜಯ್​ ದೇವಗನ್​ ಬಂದರು. ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡು ಭಯವಾಯಿತು. ಸರ್ಜರಿ ಮಾಡಿ ನನ್ನ ಮುಖದಿಂದ 67 ಗಾಜಿನ ಚೂರುಗಳನ್ನು ಹೊರತೆಗೆಯಲಾಯಿತು. ಆ ಘಟನೆಯಿಂದ ನನ್ನ ಬದುಕೇ ಬದಲಾಯಿತು’ ಎಂದು ಮಹಿಮಾ ನೆನಪಿಸಿಕೊಂಡಿದ್ದಾರೆ.

ಆ ಸಂದರ್ಭದಲ್ಲಿ ಮಹಿಮಾ ಕೈಯಲ್ಲಿ ಹಲವು ಸಿನಿಮಾಗಳಿದ್ದವು. ಆದರೆ ಅವುಗಳನ್ನು ಬಿಡಬೇಕಾಯಿತು. ತಮಗೆ ಈ ರೀತಿ ಅಪಘಾತ ಆಗಿದೆ ಎಂಬುದು ಜನರಿಗೆ ಗೊತ್ತಾಗದೇ ಇರಲಿ ಎಂದು ಮಹಿಮಾ ಬಯಸಿದರು. ಒಂದು ವೇಳೆ ಈ ರೀತಿ ಆಗಿದೆ ಎಂಬುದು ಎಲ್ಲರಿಗೂ ಗೊತ್ತಾದರೆ ಚಿತ್ರರಂಗದಲ್ಲಿ ತಮ್ಮ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂಬ ಚಿಂತೆ ಮಹಿಮಾಗೆ ಕಾಡುತ್ತಿತ್ತು. ಹಾಗಾಗಿ ಈ ಘಟನೆ ಬಗ್ಗೆ ಯಾರಿಗೂ ಗೊತ್ತಾಗದಂತೆ ಅಜಯ್​ ದೇವಗನ್​ ನೋಡಿಕೊಂಡರು ಎಂಬುದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಮಹಿಮಾ ಮೆಲುಕು ಹಾಕಿದ್ದಾರೆ.

ಮತ್ತೆ ತಾನು ಚಿತ್ರರಂಗಕ್ಕೆ ಮರಳುತ್ತೇವೆ ಎಂಬ ಭರವಸೆಯನ್ನೇ ಮಹಿಮಾ ಕಳೆದುಕೊಂಡಿದ್ದರು. ಆದರೆ ಅಜಯ್​ ದೇವಗನ್​ ನೀಡಿದ ಬೆಂಬಲದಿಂದಾಗಿ ಮಹಿಮಾ ಮತ್ತೆ ಸಕ್ರಿಯರಾದರು. ಆ ಬಳಿಕ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದರು. ಲಜ್ಜಾ, ದಿಲ್​ ಹೈ ತುಮ್ಹಾರಾ, ದಾಗ್​, ಪ್ಯಾರ್​ ಕೋಯಿ ಖೇಲ್​ ನಹಿ ಮುಂತಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. 2006ರಲ್ಲಿ ಬಾಬಿ ಮುಖರ್ಜಿ ಜೊತೆ ಮಹಿಮಾ ದಾಂಪತ್ಯ ಜೀವಕ್ಕೆ ಕಾಲಿಟ್ಟರು. 2013ರಲ್ಲಿ ಅವರು ವಿಚ್ಛೇದನ ಪಡೆದುಕೊಂಡರು.

ಇದನ್ನೂ ಓದಿ: ಹೆಸರು ಬದಲಾಯಿಸಿಕೊಂಡ ಅಜಯ್​ ದೇವಗನ್​; ಇನ್ಮುಂದೆ ಇವರು ಸುದರ್ಶನ್​! ಇಂಥ ನಿರ್ಧಾರ ಯಾಕೆ?

(Actress Mahima Chaudhry recalls horrific accident and praises Ajay Devgn for helping)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ