ಕುಡಿದ ಮತ್ತಿನಲ್ಲಿ ಜಗಳ ಮಾಡಿ ಹೊಡೆತ ತಿಂದ್ರಾ ಅಜಯ್​ ದೇವಗನ್​? ವಿಡಿಯೋ ವೈರಲ್​!

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದನ್ನು ಕಂಡವರು ಅಜಯ್​ ದೇವಗನ್​ ಮೇಲೆ ಅನುಮಾನದ ನೋಟ ಬೀರುತ್ತಿದ್ದಾರೆ. ನಿಜಕ್ಕೂ ನಡೆದಿದ್ದು ಏನು ಎಂಬ ಪ್ರಶ್ನೆ ಮೂಡಿದೆ.

ಕುಡಿದ ಮತ್ತಿನಲ್ಲಿ ಜಗಳ ಮಾಡಿ ಹೊಡೆತ ತಿಂದ್ರಾ ಅಜಯ್​ ದೇವಗನ್​? ವಿಡಿಯೋ ವೈರಲ್​!
ಅಜಯ್​ ದೇವಗನ್​
Follow us
ಮದನ್​ ಕುಮಾರ್​
| Updated By: guruganesh bhat

Updated on: Mar 29, 2021 | 2:16 PM

ಬಾಲಿವುಡ್​ ನಟ ಅಜಯ್​ ದೇವಗನ್​ ಅವರಿಗೆ ಸ್ವಲ್ಪ ಕೋಪ ಜಾಸ್ತಿ ಎಂಬುದು ಗೊತ್ತಿರುವ ವಿಚಾರ. ಹಾಗಂತ ಅವರು ಸಾರ್ವಜನಿಕವಾಗಿ ಜಗಳ ಮಾಡಿಕೊಳ್ಳುವ ಮಟ್ಟಕ್ಕೆ ಇಳಿಯುತ್ತಾರಾ? ಸದ್ಯಕ್ಕಂತೂ ಅಂಥ ಘಟನೆ ನಡೆದಿಲ್ಲ. ಆದರೆ ಈಗ ಸೋಶಿಯಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಸಖತ್​ ವೈರಲ್​ ಆಗಿದೆ. ಅದರಲ್ಲಿ ಒಬ್ಬ ವ್ಯಕ್ತಿಯನ್ನು ಒಂದಷ್ಟು ಜನರು ಮನಬಂದಂತೆ ಥಳಿಸುತ್ತಿದ್ದಾರೆ. ಹೊಡೆತ ತಿನ್ನುತ್ತಿರುವ ವ್ಯಕ್ತಿ ಅಜಯ್​ ದೇವಗನ್​ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಅಜಯ್​ ದೇವಗನ್​ ಕಡೆಯಿಂದ ಪ್ರತಿಕ್ರಿಯೆ ಬರುವುದಕ್ಕೂ ಮುನ್ನವೇ ಜಗಳದ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಮಾಲ್​ವೊಂದರ ಎದುರಿನಲ್ಲಿ ಪಾನಮತ್ತರಾದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಪಾರ್ಟಿ ಮಾಡಿದ ಬಳಿಕ ಐಷಾರಾಮಿ ಕಾರುಗಳ ಪಕ್ಕದಲ್ಲಿ ಒಂದಷ್ಟು ಜನರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಆ ಗುಂಪಿನಲ್ಲಿ ಅಜಯ್​ ದೇವಗನ್​ ಕೂಡ ಇದ್ದಾರೆ ಎಂಬ ಸುದ್ದಿ ಹಬ್ಬಿದೆ.

ಆದರೆ ಈ ವಿಡಿಯೋಗೆ ಸಂಬಂಧಿಸಿದಂತೆ ಅಜಯ್​ ದೇವಗನ್​ ತಂಡದವರು ಸ್ಪಷ್ಟನೆ ನೀಡಿದ್ದಾರೆ. ವೈರಲ್​ ವಿಡಿಯೋದಲ್ಲಿ ಇರುವುದು ಅಜಯ್​ ದೇವಗನ್​ ಅಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಳೆದ 14 ತಿಂಗಳಿನಿಂದ ಅಜಯ್​ ದೇವಗನ್​ ಅವರು ದೆಹಲಿಗೆ ತೆರಳಿಲ್ಲ. ‘ತಾನಾಜಿ: ದಿ ಅನ್​ಸಂಗ್​ ವಾರಿಯರ್​’ ಸಿನಿಮಾದ ಪ್ರಮೋಷನ್​ಗಾಗಿ ಅವರು ಕೊನೇ ಬಾರಿ ದೆಹಲಿಗೆ ತೆರಳಿದ್ದು 2020ರ ಜನವರಿಯಲ್ಲಿ’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ. ಒಟ್ಟಿನಲ್ಲಿ ಈ ವಿಡಿಯೋದಲ್ಲಿ ಇರುವ ವ್ಯಕ್ತಿ ಅಜಯ್​ ದೇವಗನ್​ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಸಾಕಷ್ಟು ಸಿನಿಮಾಗಳಲ್ಲಿ ಅಜಯ್​ ಬ್ಯುಸಿ ಆಗಿದ್ದಾರೆ. ಅಭಿಷೇಕ್​ ಬಚ್ಚನ್​ ನಟನೆಯ ‘ದಿ ಬಿಗ್​ ಬುಲ್​’ ಚಿತ್ರಕ್ಕೆ ಅವರು ಹಣ ಹೂಡಿದ್ದು, ಅದರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದಲ್ಲಿ ಅವರಿಗೆ ಒಂದು ವಿಶೇಷ ಪಾತ್ರವಿದೆ. ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲೂ ಅತಿಥಿ ಪಾತ್ರ ಮಾಡಿದ್ದಾರೆ. ಇದಲ್ಲದೆ, ‘ಭುಜ್​’, ‘ಮೈದಾನ್​‘ ಮುಂತಾದ ಸಿನಿಮಾಗಳು ಅಜಯ್​ ದೇವಗನ್​ ಕೈಯಲ್ಲಿವೆ.

ಇದನ್ನೂ ಓದಿ: ಹೆಸರು ಬದಲಾಯಿಸಿಕೊಂಡ ಅಜಯ್​ ದೇವಗನ್​; ಇನ್ಮುಂದೆ ಇವರು ಸುದರ್ಶನ್​! ಇಂಥ ನಿರ್ಧಾರ ಯಾಕೆ?