ಎಲಿಮಿನೇಷನ್ ಬಳಿಕ ಕಿಚ್ಚನ ಎದುರು ಚಂದ್ರಕಲಾ ಸಂದರ್ಶನ; 5 ನೇರ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ನಟಿ!
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 8ರ ನಾಲ್ಕನೇ ವಾರದ ಎಲಿಮಿನೇಷನ್ನಲ್ಲಿ ಕಿರುತೆರೆ ನಟಿ ಚಂದ್ರಕಲಾ ಮೋಹನ್ ಔಟ್ ಆಗಿದ್ದಾರೆ. ಮನೆಯಿಂದ ಹೊರಬಂದ ಅವರಿಗೆ ಸುದೀಪ್ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಕಿರುತೆರೆಯ ಅನುಭವಿ ನಟಿ ಚಂದ್ರಕಲಾ ಮೋಹನ್ ಅವರು ನಾಲ್ಕನೇ ವಾರ ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಇದ್ದಷ್ಟು ದಿನ ಅವರು ಎಲ್ಲ ಟಾಸ್ಕ್ನಲ್ಲಿಯೂ ಚೆನ್ನಾಗಿ ಆಟ ಆಡಿದ್ದರು. ಆದರೆ ವೀಕ್ಷಕರಿಂದ ಹೆಚ್ಚಿನ ವೋಟ್ ಪಡೆಯುವಲ್ಲಿ ಅವರು ವಿಫಲರಾದರು. ನಾಲ್ಕು ವಾರಗಳ ಅವರ ಬಿಗ್ ಬಾಸ್ ಜರ್ನಿ ಬಗ್ಗೆ ಸುದೀಪ್ ಒಂದು ಸಣ್ಣ ಮಾತುಕತೆ ನಡೆಸಿದ್ದಾರೆ. ಕಿಚ್ಚ ಕೇಳಿದ ಪ್ರಶ್ನೆಗಳಿಗೆ ಚಂದ್ರಕಲಾ ನೇರ ಉತ್ತರ ನೀಡಿದ್ದಾರೆ. ಆ ಸಂಭಾಷಣೆ ವಿವರ ಇಲ್ಲಿದೆ…
ಸುದೀಪ್: ಈ ಮನೆಯಲ್ಲಿ ನಾಲ್ಕು ದಿನ ಉಳಿಯೋದು ಕಷ್ಟ. ಅಂಥದ್ದರಲ್ಲಿ ನಾಲ್ಕು ವಾರ ಚಿಕ್ಕದಲ್ಲ. ನಿಮ್ಮ ಸಾಮರ್ಥ್ಯಕ್ಕೆ ಈ ಅವಧಿ ಕಡಿಮೆ ಆಯ್ತು ಎನಿಸಿತು. ಯಾಕೆ ಹೀಗಾಯ್ತು? ಚಂದ್ರಕಲಾ: ಇನ್ನೂ ನನಗೆ ಟೈಮ್ ಬೇಕಿತ್ತು. ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಿದ್ದೆ. ನಾನು ಮುಂದಕ್ಕೆ ಹೋಗುತ್ತಿದ್ದಾಗ ಕೆಲವೊಬ್ಬರು ಹಿಂದಕ್ಕೆ ತಳ್ಳುತ್ತಿದ್ದರು.
ಸುದೀಪ್: ಹಾಗೆ ಹಿಡಿದು ಹಿಂದಕ್ಕೆ ತಳ್ಳುವವರು ಯಾರು? ಚಂದ್ರಕಲಾ: ಕೆಲವರ ಬಗ್ಗೆ ನನಗೆ ಹಾಗೆ ಅನಿಸಿತು. ಅವರ ಬಗ್ಗೆ ಮಾತನಾಡೋಕೆ ಇಷ್ಟ ಇಲ್ಲ. ಯಾಕೆಂದರೆ ಎಲ್ಲರೂ ನನ್ನ ಫ್ರೆಂಡ್ಸ್ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಾರೆ. ಎಲ್ಲರ ಥರ ನಾನು ಇರಬೇಕು ಎಂದೇನಿಲ್ಲ. ನಾನು ಬದಲಾಗೋಕೆ ಆಗಲ್ಲ. ನನಗೆ ಕೆಲವು ಮಾತು ಇಷ್ಟ ಆಗಲ್ಲ. ಅತಿಯಾಗಿ ಪ್ರತಿಕ್ರಿಯೆ ನೀಡೋದು ಕೂಡ ಇಷ್ಟ ಆಗಲ್ಲ.
ಸುದೀಪ್: ಬಿಗ್ ಬಾಸ್ ಮನೆಯಲ್ಲಿ ವಯಸ್ಸು ಮತ್ತು ಅನುಭವ ಮುಖ್ಯ ಆಗುತ್ತಾ? ಯಾಕೆಂದರೆ ಶಂಕರ್ ಅಶ್ವತ್ಥ್ ಬಿಟ್ಟರೆ ನೀವೇ ಹಿರಿಯರಾಗಿದ್ರಿ.. ಚಂದ್ರಕಲಾ: ವಯಸ್ಸು ಮುಖ್ಯವಾಗುವುದಿಲ್ಲ. ನಮ್ಮ ಬುದ್ಧಿ ಶಕ್ತಿ ಮತ್ತು ಯೋಚನೆ ಮಾಡುವ ರೀತಿ ಮುಖ್ಯವಾಗುತ್ತದೆ.
ಸುದೀಪ್: ಒಂದು ವಾರ ನೀವು ಕಿಚನ್ನಿಂದ ಹೊರಗಿದ್ರಿ. ಅದು ನಿಮ್ಮ ಆಟಕ್ಕೆ ಬೇಕಿತ್ತು ಅನಿಸುತ್ತಾ? ಚಂದ್ರಕಲಾ: ನನಗೆ ಅದು ಬೇಡವಾಗಿತ್ತು. ಬಿಗ್ ಬಾಸ್ ಮನೆಯೊಳಗೆ ಬರುವಾಗಲೇ ನಾನು ನನ್ನ ಟ್ಯಾಲೆಂಟ್ ಚೆನ್ನಾಗಿ ಬಳಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಬರುತ್ತಿದ್ದಂತೆಯೇ ನನ್ನನ್ನು ಕಿಚನ್ಗೆ ಹಾಕಿದರು. 2 ಮತ್ತು 3ನೇ ವಾರವೂ ಅದು ಮುಂದುವರಿಯಿತು. ಅದರಿಂದ ನನಗೆ ತೊಂದರೆ ಆಯಿತು.
ಸುದೀಪ್: ಎಷ್ಟೋ ಸಂದರ್ಭಗಳಲ್ಲಿ ನಿಮ್ಮ ವಯಸ್ಸು 15 ವರ್ಷ ಕಡಿಮೆ ಆದಂತೆ ಅನಿಸಿತು. ನೀವು ಇರುವುದೇ ಹಾಗೆನಾ? ಅಥವಾ ಸಂದರ್ಭ ಹಾಗೆ ಮಾಡಿಸಿತಾ? ಚಂದ್ರಕಲಾ: ನಾನು ಇರುವುದೇ ಹಾಗೆ. ಎಲ್ಲವನ್ನೂ ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಯಾಕೆಂದರೆ ಜೀವನದಲ್ಲಿ ತುಂಬ ಕಷ್ಟ ನೋಡಿಕೊಂಡು ಬಂದಿರುವುದರಿಂದ ಮತ್ತೆ ಮತ್ತೆ ಅದೇ ವಿಚಾರಗಳನ್ನು ಹೇಳಿಕೊಂಡು ಗೋಳಾಡೋಕೆ ಇಷ್ಟ ಇಲ್ಲ. ನಾನಿರೋದೇ ಹಾಗೆ. ಬಿಗ್ ಬಾಸ್ಗಾಗಿ ಬದಲಾಗಿಲ್ಲ. ಇನ್ನೂ ಹೆಚ್ಚಿನ ಎನರ್ಜಿ ನನಗಿದೆ.
ಇದನ್ನೂ ಓದಿ: ‘ಸ್ಕರ್ಟ್ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್ ಬಾಸ್ ಚಂದ್ರಕಲಾ ಬದುಕಿನ ಕಹಿ ಘಟನೆ!
13ನೇ ವಯಸ್ಸಿಗೆ ಮದುವೆ, 14ಕ್ಕೆ ಮಗು! ಇದು ಬಿಗ್ ಬಾಸ್ ಚಂದ್ರಕಲಾ ರಿಯಲ್ ಲೈಫ್ ಕಷ್ಟದ ಕಥೆ!