AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ನಲ್ಲಿ ಗುಟ್ಟಾಗಿ ನಡೆಯುತ್ತಿದ್ದ ನಾಮಿನೇಷನ್​ ಈಗ ಬಟಾಬಯಲು! ಯಾರಿಗೆಲ್ಲ ಕಾದಿದೆ ಅಪಾಯ?

Bigg Boss Kannada: ಎಲ್ಲರ ಎದುರಿನಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ ನಾಮಿನೇಟ್​ ಮಾಡಬೇಕಾದ ಧರ್ಮ ಸಂಕಟ ಎದುರಾಯಿತು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಎಲ್ಲರೂ ತಮ್ಮ ಆಯ್ಕೆಯನ್ನು ಹೇಳಿದರು.

ಬಿಗ್​ ಬಾಸ್​ನಲ್ಲಿ ಗುಟ್ಟಾಗಿ ನಡೆಯುತ್ತಿದ್ದ ನಾಮಿನೇಷನ್​ ಈಗ ಬಟಾಬಯಲು! ಯಾರಿಗೆಲ್ಲ ಕಾದಿದೆ ಅಪಾಯ?
ಕಿಚ್ಚ ಸುದೀಪ್​
ಮದನ್​ ಕುಮಾರ್​
|

Updated on: Apr 06, 2021 | 12:47 PM

Share

ಬಿಗ್​ ಬಾಸ್​ ಮನೆಯ ಆಟ ಈಗ 6ನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿ ವಾರವೂ ಎಲಿಮಿನೇಷನ್​ ಎಂಬ ಪದ ಕೇಳಿದರೆ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರು ಆಗುತ್ತದೆ. ಹಾಗಂತ ಯಾರೂ ಈ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಾವು ಎಲಿಮಿನೇಷನ್​ಗೆ ನಾಮಿನೇಟ್​ ಆಗುವುದನ್ನು ತಪ್ಪಿಸಿಕೊಳ್ಳಲು ಎಲ್ಲರೂ ಸಿಕ್ಕಾಪಟ್ಟೆ ಕಸರತ್ತು ನಡೆಸುತ್ತಾರೆ. ಪ್ರತಿ ಸೋಮವಾರ ಬಂದರೆ ಯಾರ ಹೆಸರು ನಾಮಿನೇಷನ್​ ಪಟ್ಟಿಯಲ್ಲಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಪ್ರೇಕ್ಷಕರಿಗೂ ಇರುತ್ತದೆ. ಅದರ ನಿರೀಕ್ಷೆಯಲ್ಲಿದ್ದ ಎಲ್ಲರಿಗೂ ಬಿಗ್​ ಬಾಸ್​ ಈ ವಾರ ಒಂದು ಟ್ವಿಸ್ಟ್ ನೀಡಿದರು.

ಇಷ್ಟು ವಾರಗಳ ಕಾಲ ನಾಮಿನೇಷನ್​ ಪ್ರಕ್ರಿಯೆ ಬೇರೆ ರೀತಿ ನಡೆಯುತ್ತಿತ್ತು. ಸ್ಪರ್ಧಿಗಳೆಲ್ಲರೂ ಒಬ್ಬೊಬ್ಬರಾಗಿಯೇ ಕನ್​ಫೆಷನ್​ ರೂಮ್​ಗೆ ಬಂದು, ಯಾವ ವ್ಯಕ್ತಿ ನಾಮಿನೇಟ್​ ಆಗಬೇಕು ಎಂಬುದನ್ನು ತಿಳಿಸಬೇಕಿತ್ತು. ಯಾರು ಯಾರನ್ನು ನಾಮಿನೇಟ್​ ಮಾಡಿದರು ಎಂಬುದು ಇನ್ನುಳಿದ ಸ್ಪರ್ಧಿಗಳಿಗೆ ಗೊತ್ತಾಗುತ್ತಿರಲಿಲ್ಲ. ರಹಸ್ಯವಾಗಿಯೇ ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ 6ನೇ ವಾರದಲ್ಲಿ ರೂಲ್ಸ್​ ಬದಲಾಗಿದೆ.

ಬೆಳಗ್ಗೆ ಎದ್ದು ದಿನದ ಚಟುವಟಿಕೆಗಳಿಗೆ ಸಿದ್ಧರಾಗುತ್ತಿದ್ದ ಎಲ್ಲ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಸಡನ್ನಾಗಿ ಒಂದು ಆದೇಶ ನೀಡಿದರು. ನಿಂತ ಸ್ಥಳದಿಂದಲೇ ಈ ವಾರದ ನಾಮಿನೇಷನ್​ಗೆ ಹೆಸರುಗಳನ್ನು ಸೂಚಿಸಬೇಕು ಎಂದು ಹೇಳಿದರು. ಹಾಗಾಗಿ ಎಲ್ಲರ ಎದುರಿನಲ್ಲಿಯೇ ಯಾವುದೇ ಮುಚ್ಚುಮರೆ ಇಲ್ಲದೆ ನಾಮಿನೇಟ್​ ಮಾಡಬೇಕಾದ ಧರ್ಮ ಸಂಕಟ ಎದುರಾಯಿತು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಎಲ್ಲರೂ ತಮ್ಮ ಆಯ್ಕೆಯನ್ನು ಹೇಳಿದರು.

ಅದರಂತೆ ಶಮಂತ್​ ಬ್ರೋ ಗೌಡ, ಅರವಿಂದ್​ ಕೆ.ಪಿ, ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ, ರಾಜೀವ್​ ಹೆಸರನ್ನು ನಾಮಿನೇಟ್​ ಮಾಡಲಾಯಿತು. ದೊಡ್ಮನೆಯಿಂದ ಹೊರಗೆ ಹೋಗುವುದಕ್ಕೂ ಮುನ್ನ ಶಂಕರ್​ ಅಶ್ವತ್ಥ್​ ಅವರು ನಿಧಿ ಸುಬ್ಬಯ್ಯ ಹೆಸರನ್ನು ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಒಟ್ಟು ಈ ವಾರ 7 ಸ್ಪರ್ಧಿಗಳ ಮೇಲೆ ನಾಮಿನೇಷನ್​ ತೂಗುಗತ್ತಿ ತೂಗುತ್ತಿದೆ.

ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಚಕ್ರವರ್ತಿ ಚಂದ್ರಚೂಡ್​ ಅವರು 5ನೇ ವಾರದಲ್ಲಿ ಬಿಗ್​ ಬಾಸ್​ ಮನೆಯನ್ನು ಪ್ರವೇಶಿಸಿದ್ದಾರೆ. ಅವರ ಆಗಮನದ ಬಳಿಕ ಇತರೆ ಸ್ಪರ್ಧಿಗಳು ಜಾಗೃತರಾಗಿದ್ದಾರೆ. ಪ್ರಶಾಂತ್​ ಸಂಬರಗಿ ಜೊತೆಗೆ ಚಕ್ರವರ್ತಿ ಚಂದ್ರಚೂಡ್​ ಹೆಚ್ಚು ಬೆರೆಯುತ್ತಿದ್ದಾರೆ. ಇಬ್ಬರೂ ಸೇರಿಕೊಂಡು ಮನೆ ಮಂದಿಯ ಒಗ್ಗಟ್ಟು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಆಟ ರಂಗೇರುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳೋಕೆ ಸಿದ್ಧವಾಗಿದೆ ಪ್ಲ್ಯಾನ್​! ಸಂಬರಗಿ-ಚಂದ್ರಚೂಡ್​ ಕಿಂಗ್​ಪಿನ್​​

ಬಿಗ್​ ಬಾಸ್​ ವೇದಿಕೆ ಮೇಲೆ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಅಂದ್ರು ಸುದೀಪ್​!

(Bigg Boss Kannada 8: Shubha Poonja Nidhi Subbaiah Rajeev Prashanth Sambaragi Divya Suresh Shamanth Bro Gowda Aravind KP nominated )

Follow Us
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!