ಬಿಗ್​ ಬಾಸ್​ ವೇದಿಕೆ ಮೇಲೆ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಅಂದ್ರು ಸುದೀಪ್​!

ಬಿಗ್​ ಬಾಸ್​ ಮನೆಯ ಕಡೆಯಿಂದ, ಬಿಗ್​ ಬಾಸ್​ ಸ್ಪರ್ಧಿಗಳ ಪರವಾಗಿ, ಬಿಗ್​ ಬಾಸ್​ ತಂತ್ರಜ್ಞರ ಪರವಾಗಿ ಸುದೀಪ್​ ಆರ್​ಸಿಬಿಗೆ ಆಲ್​ ದಿ ಬೆಸ್ಟ್ ಹೇಳಿದರು. ಇದಕ್ಕೆ ಬಿಗ್​ ಬಾಸ್​ ಸ್ಪರ್ಧಿಗಳು ಕೂಡ ಧ್ವನಿಗೂಡಿಸಿದರು.

ಬಿಗ್​ ಬಾಸ್​ ವೇದಿಕೆ ಮೇಲೆ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಅಂದ್ರು ಸುದೀಪ್​!
ವಿರಾಟ್​ ಕೊಹ್ಲಿ-ಸುದೀಪ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 05, 2021 | 7:19 AM

ಕಳೆದ 13 ಸೀಸನ್​ಗಳಿಂದ ಆರ್​ಸಿಬಿಗೆ ಕಪ್​ ಗೆಲ್ಲೋಕೆ ಸಾಧ್ಯವಾಗಿಲ್ಲ. ಆದರೆ, ಈ ಸಲ ಕಪ್​ ನಮ್ಮದೆ ಎನ್ನುವ ಸ್ಲೋಗನ್​ ಹೇಳೋಕೆ ಆರ್​ಸಿಬಿ ಫ್ಯಾನ್ಸ್​ ಮರೆತಿಲ್ಲ. ಏಪ್ರಿಲ್​ 19ರಿಂದ ಸೀಸನ್​ 14 ಆರಂಭವಾಗುತ್ತಿದೆ. ಐಪಿಎಲ್​ ಆರಂಭಕ್ಕೂ ಮೊದಲು ಕಿಚ್ಚ ಸುದೀಪ್​ ಬಿಗ್​ ಬಾಸ್ ಪರವಾಗಿ ಹಾಗೂ ಬಿಗ್​ ಬಾಸ್​ ಸ್ಪರ್ಧಿಗಳು, ತಂತ್ರಜ್ಞರ ಪರವಾಗಿ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ಶನಿವಾರ (ಏ.3) ಬಿಗ್​ ಬಾಸ್ ಮನೆಯಲ್ಲಿ ಮುಂಜಾನೆ ಐಪಿಎಲ್​ ಆ್ಯಂಥಮ್​ ಗೀತೆಯನ್ನು ಹಾಕಲಾಗಿತ್ತು. ಮನೆಯವರಿಗೆ ಇದು ಐಪಿಎಲ್​ ಸೀಸನ್​ 14ರ ಆ್ಯಂಥಮ್​ ಎಂಬುದು ಗೊತ್ತಾಗಿಲ್ಲ. ಇದನ್ನು ಸುದೀಪ್​ ಭಾನುವಾರ (ಏಪ್ರಿಲ್​ 04) ವಿವರಿಸಿದ್ದಾರೆ. ಶನಿವಾರ ಪ್ರಸಾರವಾದ ಗೀತೆ ಐಪಿಎಲ್​ನದ್ದು ಎಂದು ಹೇಳಿ, ಆ ಹಾಡಿನ ವಿಡಿಯೋ ಕೂಡ ಪ್ರಸಾರ ಮಾಡಿದ್ದರು. ಇದನ್ನು ಕೇಳಿದ ಕೂಡಲೇ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳು ಸಖತ್​ ಎಗ್ಸೈಟ್​ ಆಗಿದ್ದಾರೆ.

ಮೊದಲ ಮ್ಯಾಚ್​ ಆರ್​ಸಿಬಿ vs ಮುಂಬೈ ನಡುವೆ ನಡೆಯಲಿದೆ ಎಂದು ಸುದೀಪ್​ ಮಾಹಿತಿ ನೀಡಿದರು. ರಘು ಗೌಡ ಆರ್​ಸಿಬಿ ಫ್ಯಾನ್​. ಕಳೆದ ಐಪಿಎಲ್​ ಸೀಸನ್​ನಲ್ಲಿ ಆರ್​ಸಿಬಿ ಬಗ್ಗೆ ಸಾಕಷ್ಟು ಪೋಸ್ಟ್​ ಹಾಕಿದ್ದಾರೆ. ಹೀಗಾಗಿ, ಅವರು ಈ ವಿಚಾರ ಕೇಳುತ್ತಿದ್ದಂತೆ ಸಖತ್​ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ, ಆರ್​ಸಿಬಿಗೆ ಆಲ್​ ​ದಿ ಬೆಸ್ಟ್​ ಎಂದು ​ಜೈಕಾರ ಹಾಕಿದ್ದಾರೆ.

ಬಿಗ್​ ಬಾಸ್​ ಮನೆಯ ಕಡೆಯಿಂದ, ಬಿಗ್​ ಬಾಸ್​ ಸ್ಪರ್ಧಿಗಳ ಪರವಾಗಿ, ಬಿಗ್​ ಬಾಸ್​ ತಂತ್ರಜ್ಞರ ಪರವಾಗಿ ಸುದೀಪ್​ ಆರ್​ಸಿಬಿಗೆ ಆಲ್​ ದಿ ಬೆಸ್ಟ್ ಹೇಳಿದರು. ಇದಕ್ಕೆ ಬಿಗ್​ ಬಾಸ್​ ಸ್ಪರ್ಧಿಗಳು ಕೂಡ ಧ್ವನಿಗೂಡಿಸಿದರು.

ಇನ್ನು, ಕಿಚ್ಚ ಸುದೀಪ್​ ಕೂಡ ಕ್ರಿಕೆಟ್ ಪ್ರಿಯರು. ಸ್ಯಾಂಡಲ್​ವುಡ್​ನಲ್ಲಿ ಕ್ರಿಕೆಟ್​ ಮ್ಯಾಚ್​ ನಡೆಸೋಕೆ ಇವರದೇ ನೇತೃತ್ವ. ಹೀಗಾಗಿ, ಇವರಿಗೆ ಕ್ರಿಕೆಟ್​ ಮೇಲೆ ಹೆಚ್ಚು ಆಸಕ್ತಿ ಇದೆ. ಆರ್​ಸಿಬಿ ಅವರ ಫೇವರಿಟ್​ ತಂಡ.

ಇದನ್ನೂ ಓದಿ: Bigg Boss Kannada: ​19ನೇ ವಯಸ್ಸಿಗೆ ಇದು ದೊಡ್ಡದು ಅಂದುಕೊಂಡ್ರಾ? ವಿಶ್ವನಿಗೆ ಸುದೀಪ್​ ಮಾತಿನ ಪಂಚ್​!