AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ​19ನೇ ವಯಸ್ಸಿಗೆ ಇದು ದೊಡ್ಡದು ಅಂದುಕೊಂಡ್ರಾ? ವಿಶ್ವನಿಗೆ ಸುದೀಪ್​ ಮಾತಿನ ಪಂಚ್​!

Kichcha Sudeep: ವಿಶ್ವ ಕ್ಯಾಪ್ಟನ್​ ಆಗಿದ್ದಾಗ ಮನೆಯ ಸದಸ್ಯರಿಗೆ ಸ್ವಲ್ಪ ಕಷ್ಟದ ಟಾಸ್ಕ್​ಗಳನ್ನು ನೀಡಲಾಗಿತ್ತು. ಈ ಎಲ್ಲ ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿಶ್ವ ಯಾಕೋ ವಿಫಲರಾದರು. ಆ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಆಗಿದೆ.

Bigg Boss Kannada: ​19ನೇ ವಯಸ್ಸಿಗೆ ಇದು ದೊಡ್ಡದು ಅಂದುಕೊಂಡ್ರಾ? ವಿಶ್ವನಿಗೆ ಸುದೀಪ್​ ಮಾತಿನ ಪಂಚ್​!
ವಿಶ್ವನಾಥ್​ - ಕಿಚ್ಚ ಸುದೀಪ್​ ಬಿಗ್​ ಬಾಸ್​
ಮದನ್​ ಕುಮಾರ್​
| Edited By: |

Updated on: Apr 04, 2021 | 5:42 PM

Share

ಈ ಬಾರಿ ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಸ್ಪರ್ಧಿಗಳ ಪೈಕಿ ವಿಶ್ವನಾಥ್​ ಅತಿ ಕಿರಿಯ ವ್ಯಕ್ತಿ. ಗಾಯಕನಾಗಿರುವ ಅವರ ವಯಸ್ಸು ಕೇವಲ 19. ಅವರ ಜೊತೆ ಈಗ ಹಣಾಹಣಿ ನಡೆಸುತ್ತಿರುವವರೆಲ್ಲ ದೊಡ್ಡವರು. ಹಾಗಿದ್ದರೂ ಕೂಡ ವಿಶ್ವನಾಥ್​ ಚೆನ್ನಾಗಿ ಆಡುತ್ತಿದ್ದಾರೆ. ಎಷ್ಟರಮಟ್ಟಿಗೆಂದರೆ ಅವರಿಗೆ ಕ್ಯಾಪ್ಟನ್​ ಆಗುವ ಅವಕಾಶ ಕೂಡ ಸಿಕ್ಕಿತು. ಆದರೆ ಅವರು ಆ ಜವಾಬ್ದಾರಿ ನಿಭಾಯಿಸುವಲ್ಲಿ ಎಡವಿದರು ಎಂಬುದು ಕೂಡ ಅಷ್ಟೇ ನಿಜ. ಈ ಬಗ್ಗೆ ಸುದೀಪ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವ ಕ್ಯಾಪ್ಟನ್​ ಆಗಿದ್ದಾಗ ಮನೆಯ ಸದಸ್ಯರಿಗೆ ಸ್ವಲ್ಪ ಕಷ್ಟದ ಟಾಸ್ಕ್​ಗಳನ್ನು ನೀಡಲಾಗಿತ್ತು. ಪ್ರಶಾಂತ್​ ಸಂಬರಗಿ, ಶಂಕರ್​ ಅಶ್ವತ್ಥ್​ ಮುಂತಾದ ಹಿರಿಯರು ತುಂಬ ಆಕ್ರಮಣಕಾರಿಯಾಗಿ ನಡೆದುಕೊಂಡರು. ಅರವಿಂದ್​ ಮತ್ತು ಪ್ರಶಾಂತ್​ ನಡುವೆ ಮಾತಿಕ ಚಕಮಕಿ ಆಯಿತು. ಈ ಎಲ್ಲ ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿಶ್ವನಾಥ್​ ಸ್ವಲ್ಪ ವಿಫಲರಾದರು. ಅದರ ಬಗ್ಗೆ ವೀಕೆಂಡ್​ನ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ.

‘ನಿಮಗೆ ಕ್ಯಾಪ್ಟನ್​ ಆಗಿರೋಕೆ ಬರುತ್ತಿಲ್ಲ ಅಥವಾ ನಿಮ್ಮನ್ನು ಕ್ಯಾಪ್ಟನ್​ ಆಗಿ ಯಾರೂ ಸೀರಿಯಸ್​ ಆಗಿ ಪರಿಗಣಿಸಿಲ್ಲ. ನನಗೆ ಇದರಲ್ಲಿ ಎರಡನೆಯದು ಹೌದು ಎನಿಸುತ್ತಿದೆ. ಅವರು ನಿಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರೆ ಅದು ಅವರ ತಪ್ಪು. ಆದರೆ 19ನೇ ವಯಸ್ಸಿನವರು ಕ್ಯಾಪ್ಟನ್​ ಆಗಬಾರದು ಅಂತ ಎಲ್ಲದರೂ ನಿಯಮ ಇದೆಯಾ? 19ನೇ ವಯಸ್ಸಿಗೆ ಇಲ್ಲಿಯವರೆಗೆ ಬಂದಿದ್ದೇನೆ. ಇದೇ ದೊಡ್ಡದು. ಇಷ್ಟೇ ಸಾಕು ಎಂದುಕೊಂಡಿದ್ದೀರಾ’ ಎಂದು ವಿಶ್ವನಿಗೆ ಸುದೀಪ್​ ಪ್ರಶ್ನಿಸಿದರು.

‘ಇಲ್ಲ’ ಎಂಬ ಉತ್ತರ ವಿಶ್ವ ಅವರ ಕಡೆಯಿಂದ ಬಂತು. ‘ಹಾಗಾದರೆ ನಿಮ್ಮನ್ನು ತಡೆದಿದ್ದು ಯಾರು? ನಾಯಕತ್ವದಲ್ಲಿ ಒಂದು ಕ್ವಾಲಿಟಿ ಬೇಕು. ನಿರ್ಧಾರ ತಪ್ಪೋ ಸರಿಯೋ ಎಂಬುದನ್ನು ಆಮೇಲೆ ನೋಡಿಕೊಳ್ಳೋಣ. ಮೊದಲು ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಆ ನಿರ್ಧಾರ ತೆಗೆದುಕೊಂಡ ಮೇಲೆ ಅದಕ್ಕೆ ಬದ್ಧರಾಗಿ ನಿಲ್ಲಬೇಕು. ಅದು ನಾಯಕರ ಗುಣ. ಇಲ್ಲಿ ಎಲ್ಲರೂ ಮನುಷ್ಯರೇ. ಕ್ಯಾಪ್ಟನ್ಸಿಯನ್ನು ನೀವು ಸಂಪಾದಿಸಿರುವುದು. ಮನೆಯ ಜವಾಬ್ದಾರಿ ನಿಮ್ಮ ಮೇಲಿದೆ. ಕ್ಯಾಪ್ಟನ್ಸಿ ಎಂದರೆ ಬರೀ ಇಮ್ಯೂನಿಟಿ, ಬೆಡ್​ರೂಮ್​ ಮತ್ತು ಕಾಫಿ ಅಷ್ಟೇ ಅಲ್ಲ’ ಎಂದು ಸುದೀಪ್​ ಛಾಟಿ ಬೀಸಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ವೈಲ್ಡ್​ ಕಾರ್ಡ್​ ಎಂಟ್ರಿ ಬೇಡ; ಬಿಗ್​ ಬಾಸ್​ ಮನೆಯಲ್ಲಿ ಹೊಸ ಬೇಡಿಕೆ ಇಟ್ಟ ಸ್ಪರ್ಧಿಗಳು

(Bigg Boss Kannada updates: Kichcha Sudeep criticizes Vishwanath captaincy in BBK8)

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು