ದ್ವೇಷದ ಆಟ, ಉಡಾಫೆ ಮಾತಿನಿಂದ ಮೆರೆಯುತ್ತಿದ್ದ ಮಂಜು​ಗೆ ಕ್ಲಾಸ್​ ತೆಗೆದುಕೊಂಡ ಸುದೀಪ್​!

ದ್ವೇಷದ ಆಟ ಆಡಿದ್ದನ್ನು ಮತ್ತು ಕ್ಯಾಪ್ಟನ್​ ಜವಾಬ್ದಾರಿಯನ್ನು ಮರೆತು ಉಡಾಫೆಯಲ್ಲಿ ಮಾತನಾಡಿದ್ದನ್ನು ಮಂಜು ಒಪ್ಪಿಕೊಂಡರು. ಅಲ್ಲದೆ, ಚಕ್ರವರ್ತಿ ಚಂದ್ರಚೂಡ್​ ಬಳಿ ಹೋಗಿ ಅವರು ಕ್ಷಮೆ ಕೂಡ ಕೇಳಿದರು.

ದ್ವೇಷದ ಆಟ, ಉಡಾಫೆ ಮಾತಿನಿಂದ ಮೆರೆಯುತ್ತಿದ್ದ ಮಂಜು​ಗೆ ಕ್ಲಾಸ್​ ತೆಗೆದುಕೊಂಡ ಸುದೀಪ್​!
ಸುದೀಪ್​ - ಮಂಜು ಪಾವಗಡ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Apr 04, 2021 | 3:35 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅತ್ಯುತ್ತಮ ಸ್ಪರ್ಧಿ ಯಾರು ಎಂಬ ಪ್ರಶ್ನೆ ಎದುರಾದರೆ ಮಂಜು ಪಾವಗಡ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತದೆ. ವೀಕ್ಷಕರು ಕೂಡ ಮಂಜುಗೆ ಹೆಚ್ಚು ವೋಟ್​ ಮಾಡುತ್ತಿದ್ದಾರೆ. ಮನೆಯೊಳಗಿನ ಸದಸ್ಯರ ಅಭಿಪ್ರಾಯದಲ್ಲೂ ಮಂಜು ದಿ ಬೆಸ್ಟ್​. ಹಾಗಂತ ಮಂಜು ಮಾಡುವ ಎಲ್ಲ ಕೆಲಸವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ಮಾಡಿದ ತಪ್ಪನ್ನು ಸುದೀಪ್​ ಖಂಡಿಸಿದ್ದಾರೆ. ವೀಕೆಂಡ್​ ಎಪಿಸೋಡ್​ನಲ್ಲಿ ಕಿಚ್ಚ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಐದನೇ ವಾರದಲ್ಲಿ ಮಂಜು ಪಾವಗಡ ಕ್ಯಾಪ್ಟನ್​ ಆಗಿ ಆಯ್ಕೆಯಾದರು. ಹಾಗಾಗಿ ಅವರಿಗೆ ವಿಶೇಷವಾದ ಬೆಡ್​ರೂಮ್​ ಸಿಕ್ಕಿತು. ಅಲ್ಲಿ ತನ್ನ ಸ್ನೇಹಿತರನ್ನೆಲ್ಲ ಸೇರಿಸಿಕೊಂಡು ಮಂಜು ಹರಟೆ ಹೊಡಿದಿದ್ದಾರೆ. ಅದು ಕೂಡ ರಾತ್ರಿ ಹೊತ್ತು ಮನೆಯ ಲೈಟ್​ ಆಫ್​ ಆದಮೇಲೆ. ಇದರಿಂದಾಗಿ ಇತರೆ ಸದಸ್ಯರ ನಿದ್ರೆಗೆ ತೊಂದರೆ ಆಗಿದೆ. ಅವರ ಗಲಾಟೆ ತಾಳಲಾರದೆ ಅರವಿಂದ್​ ಕೆ.ಪಿ. ಮತ್ತು ಚಕ್ರವರ್ತಿ ಚಂದ್ರಚೂಡ್​ ಅವರು ಗಾರ್ಡನ್​ ಏರಿಯಾಗೆ ಬಂದು ಮಲಗುವಂತಾಯಿತು.

ಇದೇ ವಿಚಾರವನ್ನು ಇಟ್ಟುಕೊಂಡು ವೀಕೆಂಡ್​ನಲ್ಲಿ ಸುದೀಪ್​ ಚರ್ಚೆ ಮಾಡಿದ್ದಾರೆ. ನೀವು ಮಾಡಿದ್ದು ಸರೀನಾ ಎಂದು ಮಂಜುಗೆ ಕಿಚ್ಚ ಪ್ರಶ್ನೆ ಮಾಡಿದರು. ‘ನಿಮ್ಮ ಮಾತುಕತೆಯಿಂದ ತೊಂದರೆ ಆಗಿದ್ದಕ್ಕೆ ಅರವಿಂದ್​ ಮತ್ತು ಚಕ್ರವರ್ತಿ ಚಂದ್ರಚೂಡ್​ ಹೊರಗೆ ಹೋಗಿ ಗಾರ್ಡನ್​ ಏರಿಯಾದಲ್ಲಿ ಮಲಗಿದ್ದು ನಿಮ್ಮ ಗಮನಕ್ಕೆ ಬರುತ್ತದೆ. ಆದರೆ ನೀವು ಉಡಾಫೆಯಲ್ಲಿ ಮಾತನಾಡಿದ್ರಿ. ಸ್ಪರ್ಧಿಯಾಗಿ ನೀವು ಹಾಗೆ ಮಾತನಾಡಿದ್ರೆ ನಡೆಯುತ್ತಿತ್ತು. ಆದರೆ ಕ್ಯಾಪ್ಟನ್​ ಆಗಿ ಹಾಗೆ ನಡೆದುಕೊಳ್ಳಬಾರದಾಗಿತ್ತು’ ಎಂದು ಕಿಚ್ಚ ಛಾಟಿ ಬೀಸಿದ್ದಾರೆ.

ಟಾಸ್ಕ್​ ಒಂದರಲ್ಲಿ ಔಟ್​ ಆದಮೇಲೂ ಕೂಡ ಮಂಜು ಪಾಲ್ಗೊಂಡಿದ್ದರು. ಅದನ್ನು ಗಮನಿಸಿರುವ ಸುದೀಪ್​ ಅವರು ಮಂಜುಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ‘ಹಠ, ಕೋಪ ಸಹಜ. ಆದರೆ ಇಂಥ ವರ್ತನೆಯನ್ನು ದ್ವೇಷ ಎನ್ನುತ್ತಾರೆ. ಆಟ ಎನ್ನುವುದಿಲ್ಲ’ ಎಂದು ಖಾರವಾಗಿಯೇ ಹೇಳಿದ್ದಾರೆ. ಒಟ್ಟಿನಲ್ಲಿ ದ್ವೇಷದ ಆಟ ಆಡಿದ್ದನ್ನು ಮತ್ತು ಕ್ಯಾಪ್ಟನ್​ ಜವಾಬ್ದಾರಿಯನ್ನು ಮರೆತು ಉಡಾಫೆಯಲ್ಲಿ ಮಾತನಾಡಿದ್ದನ್ನು ಮಂಜು ಒಪ್ಪಿಕೊಂಡರು. ಅಲ್ಲದೆ, ಚಕ್ರವರ್ತಿ ಚಂದ್ರಚೂಡ್​ ಬಳಿ ಹೋಗಿ ಅವರು ಕ್ಷಮೆ ಕೂಡ ಕೇಳಿದರು.

ರಾತ್ರಿ ದೊಡ್ಡದಾಗಿ ಮಾತನಾಡಿದ ವಿಚಾರದಲ್ಲಿ ಮಂಜು ಅವರ ಪರವಾಗಿ ದಿವ್ಯಾ ಸುರೇಶ್​ ವಾದ ಮಾಡಿದ್ದರು. ಅದನ್ನೂ ಸುದೀಪ್​ ವಿರೋಧಿಸಿದ್ದಾರೆ. ‘ಬೇಕಿದ್ದರೆ ಅವರು ಗಾರ್ಡನ್​ ಏರಿಯಾದಲ್ಲಿ ಹೋಗಿ ಮಲಗಿಕೊಳ್ಳಲಿ ಎಂದು ನೀವು ಹೇಳಿದ್ದು ಸರಿಯೇ? ನಿಮಗೆ ಇದೆಲ್ಲ ಅರ್ಥವಾಗಬೇಕು’ ಎಂದು ಕಿಚ್ಚ ಹೇಳಿದ ನಂತರ ದಿವ್ಯಾ ಸಹ ಕ್ಷಮೆ ಕೇಳಿದರು.

ಇದನ್ನೂ ಓದಿ: ‘ಆ ಡೋರ್​ ಓಪನ್​ ಆದರೆ ಸಾವಿನ ಕದ ತೆರೆದಂತಾಗುತ್ತದೆ’: ಮಂಜು ಪಾವಗಡ ಹೀಗೆ ಬೆಚ್ಚಿ ಬಿದ್ದಿದ್ಯಾಕೆ?

‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!

(Bigg Boss Kannada updates: Kichcha Sudeep warns Manju Pavagada and Divya suresh for their irresponsible Behavior)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್