ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಾಜಲ್​; ಅಬ್ಬಾ ಅವರು ಮಾಡಿದ ಸಹಾಯ ಮರೆಯಂಗಿಲ್ಲ!

ಶನಿವಾರ (ಏಪ್ರಿಲ್​ 3) ಹೈದರಾಬಾದಿನ ಎಂ ಫಾರ್ಮಸಿ ವಿದ್ಯಾರ್ಥಿನಿ ಸುಮಾ ಟ್ವೀಟ್​ ಒಂದನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಈ ಕಷ್ಟಕ್ಕೆ ಕಾಜಲ್​ ಸ್ಪಂದಿಸಿದ್ದಾರೆ.

ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಾಜಲ್​; ಅಬ್ಬಾ ಅವರು ಮಾಡಿದ ಸಹಾಯ ಮರೆಯಂಗಿಲ್ಲ!
ಕಾಜಲ್​ ಅಗರ್​ವಾಲ್​​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 04, 2021 | 4:34 PM

ಅನೇಕ ಸ್ಟಾರ್​ ನಟ-ನಟಿಯರು ಅಭಿಮಾನಿಗಳಿಗೆ ಸಹಾಯ ಮಾಡುತ್ತಾರೆ. ಅಭಿಮಾನಿಗಳು ಟ್ವಿಟರ್​ನಲ್ಲಿ ಇಡುವ ಬೇಡಿಕೆಗೆ ಸ್ಟಾರ್​ಗಳು ಸ್ಪಂದಿಸಿದ ಉದಾಹರಣೆ ಇದೆ. ಇದಕ್ಕೆ ಈಗ ತಾಜಾ ಉದಾಹರಣೆ ಕಾಜಲ್​ ಅಗರ್​ವಾಲ್​​. ಕಷ್ಟ ಎಂದು ಹೇಳಿಕೊಂಡ ಅಭಿಮಾನಿಗೆ ಹಿಂದು-ಮುಂದು ನೋಡದೇ ಕಾಜಲ್​ ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಶನಿವಾರ (ಏಪ್ರಿಲ್​ 3) ಹೈದರಾಬಾದಿನ ಎಂ ಫಾರ್ಮಸಿ ವಿದ್ಯಾರ್ಥಿನಿ ಸುಮಾ ಎಂಬುವವರು ಟ್ವೀಟ್​ ಒಂದನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ ಅವರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸುಮಾ ಪಾರ್ಟ್​ ಟೈಮ್​ ಕೆಲಸ ಮಾಡುತ್ತಲೇ ಕಾಲೇಜಿಗೂ ಹೋಗುತ್ತಿದ್ದರು. ಆದರೆ, ಇತ್ತೀಚೆಗೆ ಅವರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಕಾಲೇಜ್​ನ ಫೀಸ್​ ತುಂಬಲು ಅವರ ಬಳಿ ಸಾಧ್ಯವಾಗಿಯೇ ಇಲ್ಲ.

ಕಾಲೇಜ್​ ಸೇರಬೇಕು ಎಂದರೆ 83,000 ಸಾವಿರ ರೂಪಾಯಿ ಹಣ ಪಾವತಿಸಬೇಕಿತ್ತು. ಇದಕ್ಕೆ ಸಹಾಯ ಮಾಡುವಂತೆ ಟ್ವಿಟರ್​ನಲ್ಲಿ ಕಾಜಲ್​ ಬಳಿ ಸುಮಾ ಮನವಿ ಮಾಡಿದ್ದಾರೆ. ಇದಕ್ಕೆ ಕಾಜಲ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವೀಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಕಾಜಲ್​ ವಕ್ತಾರರು ಸುಮಾ ಅವರನ್ನು ಕಾಂಟ್ಯಾಕ್ಟ್ ಮಾಡಿದ್ದಾರೆ. ಅವರ ಬ್ಯಾಂಕ್​ ಖಾತೆ ಮಾಹಿತಿ ಪಡೆದು ಒಂದು ಲಕ್ಷ ರೂಪಾಯಿ ಹಣ ಪಾವತಿ ಮಾಡಿದ್ದಾರೆ.

ಈ ವಿಚಾರ ತಿಳಿದು ಹುಡುಗಿ ಕಡೆಯವರು ಸಖತ್​ ಖುಷಿ ಆಗಿದ್ದಾರೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲ, ಕಾಜಲ್​ ಮಾಡಿದ ಸಹಾಯಕ್ಕೆ ಎಲ್ಲರೂ ತಲೆ ಬಾಗಿದ್ದಾರೆ.

ಕಳೆದ ವರ್ಷ ಕಾಜಲ್​ ಅಗರ್​ವಾಲ್​ ಹಸಮಣೆ ಏರಿದ್ದರು. ಇದಾದ ನಂತರ ಅವರು ಹನಿಮೂನ್​ಗೂ ತೆರಳಿದ್ದರು. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: 30 ವರ್ಷಗಳಿಂದಲೂ ಶ್ವಾಸನಾಳದ ಅಸ್ತಮಾದಿಂದ ಬಳಲುತ್ತಿದ್ದಾರೆ ಖ್ಯಾತ ನಟಿ ಕಾಜಲ್​ ಅಗರ್​ವಾಲ್

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್