AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಇನ್ನೊಬ್ಬಳು ಹುಡುಗಿ ಬೇಕಿತ್ತು ಎಂದ ಮಂಜು! ಕಿಚ್ಚನ ತಿರುಗೇಟಿಗೆ ಲ್ಯಾಗ್​ ಗಪ್​ಚುಪ್​

Kichcha Sudeep: ಪ್ರತಿ ವೀಕೆಂಡ್​ನಲ್ಲಿ ಖುಷಿಖುಷಿಯಾಗಿ ಮಾತನಾಡುವ ಸುದೀಪ್​ ಅವರು ಏ.3ರಂದು ಯಾಕೋ ಕೊಂಚ ಗರಂ ಆಗಿದ್ದರು. ಮಂಜು ಆಡಿದ ಮಾತಿಗೆ ನಕ್ಕು ಸುಮ್ಮನಾಗುವ ಬದಲು ಸುದೀಪ್​ ಸ್ವಲ್ಪ ಅಸಮಾಧಾನ ತೋರಿಸಿದ್ದಾರೆ.

Bigg Boss Kannada: ಇನ್ನೊಬ್ಬಳು ಹುಡುಗಿ ಬೇಕಿತ್ತು ಎಂದ ಮಂಜು! ಕಿಚ್ಚನ ತಿರುಗೇಟಿಗೆ ಲ್ಯಾಗ್​ ಗಪ್​ಚುಪ್​
ಮಂಜು ಪಾವಗಡ
ಮದನ್​ ಕುಮಾರ್​
| Edited By: |

Updated on: Apr 04, 2021 | 4:43 PM

Share

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಅವರು ಹೆಚ್ಚು ಗಮನ ಸೆಳೆಯುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರ ಮಾತುಗಳಿಂದ ಎಲ್ಲರಿಗೂ ಮನರಂಜನೆ ಸಿಗುತ್ತದೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ಮಂಜು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕಾಗುತ್ತದೆ. ಐದನೇ ವಾರದ ವೀಕೆಂಡ್​ ಪಂಚಾಯಿತಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಸುದೀಪ್​ ಜೊತೆ ಮಾತನಾಡುವಾಗ ಮಂಜು ಎಡವಿದ್ದಾರೆ.

ಸದ್ಯ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್​ ಅವರು​ ದೊಡ್ಮನೆಗೆ ಪ್ರವೇಶ ನೀಡಿದ್ದಾರೆ. ಅವರ ಎಂಟ್ರಿ ಹೇಗಿತ್ತು ಎಂಬ ಬಗ್ಗೆ ಮನೆಯ ಎಲ್ಲ ಸದಸ್ಯರ ಬಳಿ ಸುದೀಪ್ ಅಭಿಪ್ರಾಯ ಕೇಳಿದ್ದಾರೆ. ಆಗ ಮಂಜು ಪಾವಗಡ ನೀಡಿದ ಉತ್ತರ ತುಂಬ ಫನ್ನಿಯಾಗಿತ್ತು. ಆದರೆ ಅದಕ್ಕೆ ನಕ್ಕು ಸುಮ್ಮನಾಗುವ ಬದಲು ಸುದೀಪ್​ ಸ್ವಲ್ಪ ಅಸಮಾಧಾನ ತೋರಿಸಿದ್ದಾರೆ.

‘ಚಕ್ರವರ್ತಿ ಚಂದ್ರಚೂಡ್​ ಬದಲಿಗೆ ವೈಲ್ಡ್​ ಕಾರ್ಡ್​ ಮೂಲಕ ಯಾರಾದರೂ ಹುಡುಗಿ ಬರಬಹುದಿತ್ತು ಎಂದುಕೊಂಡಿದ್ದೆ’ ಎಂದು ಮಂಜು ಹೇಳಿದರು. ‘ನಿಮಗೆ ಬಿಗ್​ ಬಾಸ್​ ಎಂದರೆ ಹೇಗೆ ಕಾಣಿಸುತ್ತಿದೆ?’ ಎಂದು ಸುದೀಪ್​ ತಿರಗೇಟು ನೀಡಿದರು. ‘ಮನೆಯಲ್ಲಿ ಹೆಣ್ಮಕ್ಕಳು ಇದ್ದರೆ ಓಡಾಡಿಕೊಂಡಿರುತ್ತಾರೆ. ನೋಡೋಕೆ ಚೆನ್ನಾಗಿರುತ್ತದೆ’ ಅಂತ ಮಂಜು ಸಮರ್ಥನೆ ಮಾಡಿಕೊಂಡರು. ‘ಇಷ್ಟು ಜನರಲ್ಲಿ ಯಾರು ಓಡಾಡಿಕೊಂಡಿದ್ದರೆ ನಿಮಗೆ ಖುಷಿ ಎನಿಸುತ್ತದೆ’ ಎಂದು ಸುದೀಪ್​ ಕೇಳಿದ್ದಕ್ಕೆ ದಿವ್ಯಾ ಸುರೇಶ್​ ಹೆಸರನ್ನು ಮಂಜು ಹೇಳಿದರು. ‘ಒಬ್ಬರು ಇದಾರಲ್ಲಾ ಸಾಕು ಬಿಡಿ’ ಎಂದರು ಸುದೀಪ್​.

ಇನ್ನು, ವೈಲ್ಡ್​ ಕಾರ್ಡ್​ ಬಗ್ಗೆ ವಿಶ್ವನಾಥ್​ ಮತ್ತು ದಿವ್ಯಾ ಕೂಡ ಪ್ರತಿಕ್ರಿಯೆ ನೀಡಿದರು. ‘35 ದಿನ ಹೋರಾಟ ಮಾಡಿ ನಾವು ಈ ಹಂತವನ್ನು ತಲುಪಿದ್ದೇನೆ. ಈಗ ಯಾರೋ ಬಂದು ಮಧ್ಯದಲ್ಲಿ ಆಟ ಶುರು ಮಾಡುವುದು ನ್ಯಾಯವಲ್ಲ ಎನಿಸುತ್ತದೆ’ ಎಂದು ವಿಶ್ವ ಹೇಳಿದ್ದಾರೆ. ಚಕ್ರವರ್ತಿ ಚಂದ್ರಚೂಡ್​ ಬಂದಮೇಲೆ ಕಷ್ಟ ಎನಿಸುತ್ತಿದೆ ಎಂದು ದಿವ್ಯಾ ಸುರೇಶ್​ ಹೇಳಿದ್ದಾರೆ.

ಪ್ರತಿ ವೀಕೆಂಡ್​ನಲ್ಲಿ ಖುಷಿಖುಷಿಯಾಗಿ ಮಾತನಾಡುವ ಸುದೀಪ್​ ಅವರು ಏ.3ರಂದು ಯಾಕೋ ಕೊಂಚ ಗರಂ ಆಗಿದ್ದರು. ಮಂಜು ದ್ವೇಷದ ಆಟ ಆಡಿದ್ದನ್ನು ಹಾಗೂ ಉಡಾಫೆಯ ಮಾತಾಡಿದನ್ನು ಕೂಡ ಸುದೀಪ್​ ಖಂಡಿಸಿದ್ದರು. ಇದೇ ವಿಚಾರಕ್ಕಾಗಿ ದಿವ್ಯಾಗೂ ಕಿಚ್ಚ ಕ್ಲಾಸ್​ ತೆಗೆದುಕೊಂಡರು. ನಂತರ ದಿವ್ಯಾ ಮತ್ತು ಮಂಜು ಕ್ಷಮೆ ಕೇಳಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ವೈಲ್ಡ್​ ಕಾರ್ಡ್​ ಎಂಟ್ರಿ ಬೇಡ; ಬಿಗ್​ ಬಾಸ್​ ಮನೆಯಲ್ಲಿ ಹೊಸ ಬೇಡಿಕೆ ಇಟ್ಟ ಸ್ಪರ್ಧಿಗಳು

(Bigg Boss Kannada updates: Kichcha Sudeep receives hilarious comment from Manju Pavagada about Chakravarthy Chandrachud wild card entry)

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More