AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಂತ್​ ಉಳಿದುಕೊಂಡಿದ್ದು ಸರಿ ಇದೆ; ಮನೆಯಿಂದ ಹೊರ ಬರುವಾಗ ಭಾವುಕರಾದ ಅಶ್ವತ್ಥ್​

ಮನೆಯಲ್ಲಿ ಎಲ್ಲರೂ ಇವರನ್ನು ತಂದೆ ರೀತಿಯಲ್ಲಿ ನೋಡುತ್ತಿದ್ದರು. ಇದೇ ಭಾವನಾತ್ಮಕ ಅಂಶ ಶಂಕರ್​ ಅವರು ಎರಡು ವಾರ ಎಲಿಮಿನೇಷ್​ನಗೆ ನಾಮಿನೇಟ್​ ಆಗುವುದನ್ನು ತಪ್ಪಿಸಿತ್ತು.

ಶಮಂತ್​ ಉಳಿದುಕೊಂಡಿದ್ದು ಸರಿ ಇದೆ; ಮನೆಯಿಂದ ಹೊರ ಬರುವಾಗ ಭಾವುಕರಾದ ಅಶ್ವತ್ಥ್​
ಶಂಕರ್​ ಅಶ್ವತ್ಥ್​
ರಾಜೇಶ್ ದುಗ್ಗುಮನೆ
|

Updated on:Apr 04, 2021 | 10:38 PM

Share

ಬಿಗ್​ ಬಾಸ್​ ಮನೆಯಲ್ಲಿ ಐದನೇ ವಾರದ ಎಲಿಮಿನೇಷನ್​ ಪೂರ್ಣಗೊಂಡಿದೆ. ಕಳೆದ ವಾರ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿ ಜೈಲು ಸೇರಿದ್ದ ಶಂಕರ್​ ಅಶ್ವತ್ಥ್​ ಈ ವಾರ ಮನೆಯಿಂದ ಹೊರ ಬಿದ್ದಿದ್ದಾರೆ. ಅವರು ಮನೆಯಿಂದ ಹೊರಗೆ ಹೋಗೋಕೆ ಬಲವಾದ ಕಾರಣ ಕೂಡ ಇದೆ. 

ಈ ಬಾರಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದ ಸ್ಪರ್ಧಿಗಳಲ್ಲಿ ಶಂಕರ್​ ಅಶ್ವತ್ಥ್​ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಇದು ಅವರಿಗೆ ಲಾಭವಾಗಿತ್ತು. ಮನೆಯಲ್ಲಿ ಎಲ್ಲರೂ ಇವರನ್ನು ತಂದೆ ರೀತಿಯಲ್ಲಿ ನೋಡುತ್ತಿದ್ದರು. ಇದೇ ಭಾವನಾತ್ಮಕ ಅಂಶ ಶಂಕರ್​ ಅವರು ಎರಡು ವಾರ ಎಲಿಮಿನೇಷ್​ನಗೆ ನಾಮಿನೇಟ್​ ಆಗುವುದನ್ನು ತಪ್ಪಿಸಿತ್ತು.

ಇತರ ಸ್ಪರ್ಧಿಗಳ ಜೊತೆಗೆ ವಯಸ್ಸಿನ ಅಂತರ ಇರುವುದರಿಂದ ಶಂಕರ್​ ಅಶ್ವತ್ಥ್​ ಅವರು ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಇದು ಅನೇಕ ಬಾರಿ ಸಾಬೀತಾಗಿದೆ. ಶಂಕರ್​ ಒಮ್ಮೊಮ್ಮೆ ಅವರ ಪಾಡಿಗೆ ಅವರು ಇದ್ದುಬಿಡುತ್ತಿದ್ದರು. ಇನ್ನು, ಸತತ ಎರಡು ವಾರ ಶಂಕರ್​ ಅಶ್ವತ್ಥ್​ ಅವರು ಕಳಪೆ ಪ್ರದರ್ಶನ ನೀಡಿದರು. ಮನೆಯ ಎಲ್ಲ ಸದಸ್ಯರು ಅವರಿಗೆ ಕಳಪೆ ಹಣೆಪಟ್ಟಿ ನೀಡಿದ್ದರಿಂದ ಎರಡು ಬಾರಿ ಅವರು ಜೈಲಿಗೆ ಹೋಗಬೇಕಾಯಿತು.

ಟಾಸ್ಕ್​ವೊಂದರಲ್ಲಿ ದಿವ್ಯಾ ಸುರೇಶ್​ ಮತ್ತು ವೈಷ್ಣವಿ ನಡುವೆ ಪೈಪೋಟಿ ನಡೆಯುತ್ತಿತ್ತು. ಸ್ವಿಮಿಂಗ್​ ಪೂಲ್​ನಲ್ಲಿ ಇಬ್ಬರೂ ನಿಂತುಕೊಂಡಿರುವಾಗ ಆ ಆಟವನ್ನು ನಿಲ್ಲಿಸಲು ಶಂಕರ್​ ಅಶ್ವತ್ಥ್​ ಪೂಲ್​ಗೆ ಹಾರಿ ವೈಷ್ಣವಿ ಅವರನ್ನು ಬೀಳಿಸಿದರು. ಅವರ ಈ ವರ್ತನೆಯಿಂದ ಅನೇಕರಿಗೆ ಬೇಸರ ಆಗಿತ್ತು. ಹೀಗಾಗಿ ಅವರು ಮನೆಯಿಂದ ಹೊರ ಬಂದಿದ್ದಾರೆ. ಬರುವಾಗ, ಶಮಂತ್​ ಉಳಿದುಕೊಂಡಿದ್ದು ಸರಿ ಇದೆ ಎಂದಿದ್ದಾರೆ.

ದಿನದಿಂದ ದಿನಕ್ಕೆ ಟಾಸ್ಕ್​ಗಳ ಸ್ವರೂಪ ತೀವ್ರವಾಗುತ್ತಲೇ ಇದೆ. ವಯಸ್ಸಿನ ಕಾರಣದಿಂದ ಶಂಕರ್​ ಅಶ್ವತ್ಥ್​ ಅವರು ಟಾಸ್ಕ್​ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಷ್ಟ ಆಗುತ್ತಿತ್ತು. ಇದು ಅನೇಕ ಬಾರಿ ಸಾಬೀತು ಕೂಡ ಆಗಿದೆ. ಸದ್ಯ 13 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್​ ಅವರು ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಅವರ ಆಗಮನದಿಂದಾಗಿ ಮನೆಯ ವಾತಾವರಣದಲ್ಲಿ ಬದಲಾವಣೆ ಬಂದಿದೆ. ಸದ್ಯ ಕ್ಯಾಪ್ಟನ್​ ಆಗಿ ಮಂಜು ಪಾವಗಡ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ

Published On - 10:23 pm, Sun, 4 April 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ