ದಿವ್ಯಾರನ್ನು ರಕ್ಷಿಸಲು ಹೋಗಿ ಎಲ್ಲರ ಮೇಲೆ ಸಿಟ್ಟಾಗುತ್ತಿರುವ ಅರವಿಂದ್​ಗೆ ಸುದೀಪ್​ ಖಡಕ್​ ವಾರ್ನಿಂಗ್​

ಈ ವಾರ ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಅರವಿಂದ್​ ಟೀಂ ಸೋತಿತ್ತು. ಇದಕ್ಕೆ ಅವರು ತುಂಬಾನೇ ಬೇಸರಗೊಂಡಿದ್ದರು.

ದಿವ್ಯಾರನ್ನು ರಕ್ಷಿಸಲು ಹೋಗಿ ಎಲ್ಲರ ಮೇಲೆ ಸಿಟ್ಟಾಗುತ್ತಿರುವ ಅರವಿಂದ್​ಗೆ ಸುದೀಪ್​ ಖಡಕ್​ ವಾರ್ನಿಂಗ್​
ಅರವಿಂದ್​-ಸುದೀಪ್​
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on: Apr 05, 2021 | 7:26 AM

ಬಿಗ್​ ಬಾಸ್​ ಮನೆಯಲ್ಲಿರುವ ಅರವಿಂದ್ ಕೆ.ಪಿ. ಕ್ರೀಡಾಕ್ಷೇತ್ರದ​ ಹಿನ್ನೆಲೆಯಿಂದ ಬಂದವರು. ಹೀಗಾಗಿ, ಅವರು ಎಲ್ಲಾ ಟಾಸ್ಕ್​ನಲ್ಲೂ ಕ್ರೀಡಾಸ್ಫೂರ್ತಿ ತೋರುತ್ತಾರೆ ಎಂದು ಅನೇಕರು ನಂಬಿದ್ದರು. ಆದರೆ, ಇದು ನಿಧಾನವಾಗಿ ಬದಲಾಗುತ್ತಿದೆ. ಇತ್ತೀಚಿಗೆ ಅರವಿಂದ್​ ದಿವ್ಯಾ ಉರುಡುಗ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಟಾಸ್ಕ್​ನಲ್ಲಿ ಸೋತಿದ್ದಕ್ಕೆ ಅವರು ತುಂಬಾನೇ ಬೇಸರಗೊಂಡಿದ್ದರು. ಈ ವಿಚಾರವಾಗಿ ಮಾತನಾಡುವಾಗ ಸುದೀಪ್​ ಖಡಕ್​ ಎಚ್ಚರಿಕೆ ನೀಡಿದರು. ಐದನೇ ವಾರ ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಅರವಿಂದ್​ ಟೀಂ ಸೋತಿತ್ತು. ಇದಕ್ಕೆ ಅವರು ತುಂಬಾನೇ ಬೇಸರಗೊಂಡಿದ್ದರು. ಸೋಲು ಕಣ್ಮುಂದೆ ಕಾಣುತ್ತಿದ್ದಂತೆ ಪ್ರಶಾಂತ್​ ವಿರುದ್ಧ ಸಿಟ್ಟಾದರು. ಈ ಎಲ್ಲಾ ವಿಚಾರಗಳನ್ನು ಸುದೀಪ್​ ಗಮನಿಸಿದ್ದಾರೆ. ಅಷ್ಟೇ ಅಲ್ಲ ಆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ವೀಕೆಂಡ್​ನಲ್ಲಿ ಮಾತನಾಡಿದ ಸುದೀಪ್​, ಸೋಲು ಅಂದರೆ ಏನು? ನೀವು ಬೈಕ್​ ರೇಸ್​ ಸೋಲ್ತೀರಾ. ಆದರೆ, ಅದನ್ನು ಕಂಪ್ಲೀಟ್​ ಮಾಡ್ತೀರಾ. ಆಗ ಆ ಸೋಲನ್ನು ಹೇಗೆ ಸ್ವೀಕರಿಸುತ್ತೀರಿ ಎಂದು ಸುದೀಪ್​ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅರವಿಂದ್, ಈ ಸೋಲನ್ನು ನಾನು ಚಾಲೆಂಜ್ ಆಗಿ ಸ್ವೀಕರಿಸುತ್ತೇನೆ. ಮುಂದಿನ ಆಟದಲ್ಲಿ ತಿದ್ದುಕೊಳ್ಳುತ್ತೇನೆ ಎಂದರು.

ಆಗ ಸುದೀಪ್​, ಈ ವಾರ ಕ್ರೀಡಾ ಸ್ಪರ್ಧಿಯ ಮನೋಭಾವ ನಿಮ್ಮಲ್ಲಿ ಕಂಡಿಲ್ಲ. ಸೋಲನ್ನು ನೀವು ಪರ್ಸನಲ್​ ಆಗಿ ತಗೊಂಡ್ರಿ ಅನಿಸುತ್ತೆ ಎಂದರು. ಇದಕ್ಕೆ ತಿದ್ಕೋತಿವಿ ಎನ್ನುವ ಉತ್ತರ ಅರವಿಂದ್​ ಕಡೆಯಿಂದ ಬಂತು. ಸುದೀಪ್​ ಆರೋಪವನ್ನು ಮನೆಯವರು ಕೂಡ ಒಪ್ಪಿಕೊಂಡರು. ಅವರ ನಡೆಯಿಂದ ಹರ್ಟ್​ ಆಗುತ್ತಿದೆ ಎಂದರು.

ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್​ ತಮ್ಮ ಮೂಲ ಉದ್ದೇಶ ಮರೆತಿರುವುದು ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಯಾವುದೇ ಗೇಮ್​ ಇರಲಿ, ಅವರು ಉತ್ತಮವಾಗಿ ಆಡುತ್ತಾರೆ. ಆದರೆ, ಕೆಲವೊಮ್ಮೆ ಆಟದ ಬಗ್ಗೆ ತೋರಿಸುವುದಕ್ಕಿಂತ ಹೆಚ್ಚು ಆಸಕ್ತಿಯನ್ನು ದಿವ್ಯಾಗೆ ತೋರಿಸುತ್ತಿದ್ದಾರೆ. ಆಟ ಆಡುವಾಗ ದಿವ್ಯಾಗೆ ಯಾರಾದರೂ ಮೈಮುಟ್ಟಿದರೆ ಅಥವಾ ಅವರ ಜತೆಗೆ ತಪ್ಪಾಗಿ ನಡೆದುಕೊಂಡರೆ ಅರವಿಂದ್​ ನೇರವಾಗಿ ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಎನ್ನುವ ಆರೋಪ ಇದೆ.

ಇದನ್ನೂ ಓದಿ: ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?