ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?
ದಿವ್ಯಾ ಉರುಡುಗ-ಅರವಿಂದ್ ಕೆಪಿ

ಅಚ್ಚರಿ ಎಂಬಂತೆ ಅರವಿಂದ್​ಗೆ ದಿವ್ಯಾ ಉರುಡುಗ ಹತ್ತಿರವಾಗಿದ್ದರು. ಜೋಡಿ ಟಾಸ್ಕ್​ ಪೂರ್ಣಗೊಂಡ ನಂತರ ಇಬ್ಬರೂ ಒಟ್ಟಾಗಿರುತ್ತಿದ್ದಾರೆ. ಇವರಿಬ್ಬರ ನಡುವೆ ಬಲವಾದ ಸೆಳೆತವಿದೆ ಎಂಬುದನ್ನು ಮನೆಯವರು ಹೇಳುವುದು ಮಾತ್ರವಲ್ಲ ಇವರೂ ಒಪ್ಪಿಕೊಂಡಿದ್ದಾರೆ.

Rajesh Duggumane

|

Apr 01, 2021 | 7:26 PM

ಉಡುಪಿ ಮೂಲದ ಅರವಿಂದ್ ಕೆ.ಪಿ. ಬಿಗ್​ ಬಾಸ್​ ಮನೆ ಪ್ರವೇಶಿಸಿದಾಗ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳು ಮೂಡಿದ್ದವು. ವೃತ್ತಿಪರ ಬೈಕರ್ ಆಗಿರುವ ಅವರ ಕ್ರೀಡಾಸ್ಫೂರ್ತಿ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಅವರ ಗಾಂಭೀರ್ಯತೆ ಎಲ್ಲರಿಗೂ ಇಷ್ಟವಾಗಿತ್ತು. ಆದರೆ, ಈಗ ಅರವಿಂದ್​ ಕೆ.ಪಿ. ಬಿಗ್​ ಬಾಸ್​ ಮನೆಯಲ್ಲಿ ಮೊದಲಿನ ರೀತಿ ಇಲ್ಲ. ಪ್ರೀತಿಯ ಸೆಳೆತದಲ್ಲಿ ಅವರು ದಿಕ್ಕು ತಪ್ಪುತ್ತಿದ್ದಾರೆ. ಈ ಮಾತನ್ನು ನಾವು ಹೇಳುತ್ತಿಲ್ಲ. ಹೀಗೆ ಅಭಿಪ್ರಾಯ ಹೊರ ಹಾಕಿದ್ದು ಪ್ರೇಕ್ಷಕರು. ಬಿಗ್​ ಬಾಸ್​ ಮನೆ ಪ್ರವೇಶಿಸುವಾಗ ಒಂದು ಹೂವಿನ ಬೊಕ್ಕೆ ನೀಡಿ ಅದನ್ನು ಮನೆಯ ಒಳಗೆ ಯಾರಿಗಾದರೂ ನೀಡಿ ಎಂದು ಕಿಚ್ಚ ಸುದೀಪ್​ ಹೇಳಿದ್ದರು. ಈ ಹೂಗುಚ್ಚವನ್ನು ದಿವ್ಯಾ ಸುರೇಶ್​ಗೆ ನೀಡಬೇಕು ಎನ್ನುವುದು ಅರವಿಂದ್ ಉದ್ದೇಶವಾಗಿತ್ತು. ಆದರೆ, ಮಂಜುಗೆ ದಿವ್ಯಾ ಸುರೇಶ್​ ಹತ್ತಿರವಾಗಿದ್ದರು.

ಅಚ್ಚರಿ ಎಂಬಂತೆ ಅರವಿಂದ್​ಗೆ ದಿವ್ಯಾ ಉರುಡುಗ ಹತ್ತಿರವಾಗಿದ್ದರು. ಜೋಡಿ ಟಾಸ್ಕ್​ ಪೂರ್ಣಗೊಂಡ ನಂತರ ಇಬ್ಬರೂ ಒಟ್ಟಾಗಿರುತ್ತಿದ್ದಾರೆ. ಇವರಿಬ್ಬರ ನಡುವೆ ಬಲವಾದ ಸೆಳೆತವಿದೆ ಎಂಬುದನ್ನು ಮನೆಯವರು ಹೇಳುವುದು ಮಾತ್ರವಲ್ಲ ಇವರೂ ಒಪ್ಪಿಕೊಂಡಿದ್ದಾರೆ. ಮನೆಯಿಂದ ಹೊರ ಬಿದ್ದ ನಂತರ ಇಬ್ಬರ ಮದುವೆ ನಡೆದರೂ ಅಚ್ಚರಿ ಇಲ್ಲ ಎನ್ನುವಷ್ಟು ಇಬ್ಬರೂ ಹತ್ತಿರವಾಗಿದ್ದಾರೆ.

ಆದರೆ, ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್​ ತಮ್ಮ ಮೂಲ ಉದ್ದೇಶ ಮರೆತಿರುವುದು ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಯಾವುದೇ ಗೇಮ್​ ಇರಲಿ, ಅವರು ಉತ್ತಮವಾಗಿ ಆಡುತ್ತಾರೆ. ಆದರೆ, ಕೆಲವೊಮ್ಮೆ ಆಟದ ಬಗ್ಗೆ ತೋರಿಸುವುದಕ್ಕಿಂತ ಆಸಕ್ತಿಯನ್ನು ದಿವ್ಯಾಗೆ ತೋರಿಸುತ್ತಿದ್ದಾರೆ.

ಆಟ ಆಡುವಾಗ ದಿವ್ಯಾಗೆ ಯಾರಾದರೂ ಮೈಮುಟ್ಟಿದರೆ ಅಥವಾ ಅವರ ಜತೆಗೆ ತಪ್ಪಾಗಿ ನಡೆದುಕೊಂಡರೆ ಅರವಿಂದ್​ ನೇರವಾಗಿ ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ನಾನು ಅವರ ಮೈಮುಟ್ಟಿದೆ ಎಂದು ನಿನಗೆ ಬೇಸರವೇ ಎಂದು ಪ್ರಶಾಂತ್​ ಸಂಬರಗಿ ಅರವಿಂದ್​ಗೆ ನೇರವಾಗಿ ಪ್ರಶ್ನಿಸಿದ್ದು ಉತ್ತಮ ಉದಾಹರಣೆ.

ಪ್ರತಿ ಸ್ಪರ್ಧಿಯೂ ತಾನು ಬಿಗ್​ ಬಾಸ್ ಗೆಲ್ಲಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಬಂದಿರುತ್ತಾರೆ. ಅರವಿಂದ್​ ಅವರಲ್ಲಿ ಈ ಆಸೆ ಅದಮ್ಯವಾಗಿತ್ತು. ಆದರೆ, ಇತ್ತೀಚೆಗೆ ಅವರ ಆದ್ಯತೆ ಬದಲಾಗುತ್ತಿರುವುದು ವೀಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಈ ಬಾರಿ ಅವರು ಡೇಂಜರ್​ ಜೋನ್​ನಲ್ಲಿ ಇರುವುದರಿಂದ ಅತ್ಯುತ್ತಮ ಪರ್ಫಾರ್ಮೆನ್ಸ್​ ಕೊಡಲೇಬೇಕಿದೆ.

ಇದನ್ನೂ ಓದಿ: ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?

Bigg Boss Kannada: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು?

Follow us on

Related Stories

Most Read Stories

Click on your DTH Provider to Add TV9 Kannada