AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?

ಚಾಕೋಲೇಟ್​ ಕೊಡುವಾಗ ಕ್ಯಾಪ್ಟನ್​ ವಿಶ್ವ ನಿಯಮಗಳನ್ನು ಓದಿದ್ದರು. ಈ ನಿಯಮದ ಪ್ರಕಾರ ಚಾಕೋಲೇಟ್​ಗಳನ್ನು ಎದುರಾಳಿ ತಂಡದವರು ತಿನ್ನುವಂತಿಲ್ಲ. ಚಾಕೋಲೇಟ್​ ನೋಡಿದ ದಿವ್ಯಾ ಉರುಡುಗ ಬಾಯಿ ಚಪ್ಪರಿಸುತ್ತಿದ್ದರು.

ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?
ದಿವ್ಯಾ ಉರುಡುಗ
ರಾಜೇಶ್ ದುಗ್ಗುಮನೆ
| Edited By: |

Updated on: Mar 31, 2021 | 7:27 AM

Share

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಗೆದ್ದ ‘ಜಾತ್ರೆ ಗ್ಯಾಂಗ್​’ ತಂಡಕ್ಕೆ ಬಿಗ್​ ಬಾಸ್​ ಚಾಕೋಲೆಟ್​ ನೀಡಿತ್ತು. ಚಾಕೋಲೆಟ್​ ಕೊಡುವ ಮೊದಲು ಬಿಗ್​ ಬಾಸ್ ಕೆಲ ಷರತ್ತುಗಲನ್ನು ವಿಧಿಸಿತ್ತು. ಆದರೆ, ಇದನ್ನು ಮನೆಯ ಕ್ಯಾಪ್ಟನ್​ ವಿಶ್ವ ಸರಿಯಾಗಿ ಓದಿ ಹೇಳಿದ್ದರು. ಆದರೆ, ಹೀಗೆ ಹೇಳಿದ ಹೊರತಾಗಿಯೂ ದಿವ್ಯಾ ಉರುಡುಗ ನಿಯಮ ಉಲ್ಲಂಘನೆ ಮಾಡಿದ್ದಾರೆ. ಸೋಮವಾರ (ಮಾರ್ಚ್​ 29) ಬಿಗ್​ ಬಾಸ್​ ಟಾಸ್ಕ್​ ಒಂದನ್ನು ನೀಡಿದ್ದರು. ಈ ಟಾಸ್ಕ್​ನಲ್ಲಿ ಬಲೂನ್ ಒಡೆದು ಅದರಲ್ಲಿರುವ ಚಿನ್ನದ ಗಟ್ಟಿ ಮಾದರಿಯ ವಸ್ತುವನ್ನು ಸಂಗ್ರಹಿಸಬೇಕು. ಹೆಚ್ಚು ಸಂಗ್ರಹಿಸಿದವರು ಗೆದ್ದಂತೆ. ಈ ಗೇಮ್​ನಲ್ಲಿ ಶುಭಾ ಪೂಂಜಾ ನೇತೃತ್ವದ ಜಾತ್ರೆ ಗ್ಯಾಂಗ್​ ಗೆದ್ದಿತ್ತು. ಇದಕ್ಕಾಗಿ, ಬಿಗ್​ ಬಾಸ್​ ಚಾಕೊಲೇಟ್​ಗಳನ್ನು ಕಳುಹಿಸಿಕೊಟ್ಟಿದ್ದರು.

ಚಾಕೋಲೇಟ್​ ಕೊಡುವಾಗ ಕ್ಯಾಪ್ಟನ್​ ವಿಶ್ವ ನಿಯಮಗಳನ್ನು ಓದಿದ್ದರು. ಈ ನಿಯಮದ ಪ್ರಕಾರ ಚಾಕೋಲೇಟ್​ಗಳನ್ನು ಎದುರಾಳಿ ತಂಡದವರು ತಿನ್ನುವಂತಿಲ್ಲ. ಚಾಕೋಲೇಟ್​ ನೋಡಿದ ದಿವ್ಯಾ ಉರುಡುಗ ಬಾಯಿ ಚಪ್ಪರಿಸುತ್ತಿದ್ದರು. ನನಗೂ ಚಾಕೋಲೇಟ್​ ಬೇಕು ಎಂದು ಪದೇ ಪದೇ ಹೇಳಿಕೊಂಡರು.

ಮಂಗಳವಾರದ (ಮಾರ್ಚ್​ 30) ಸಂಚಿಕೆಯಲ್ಲಿ ದಿವ್ಯಾ ಉರುಡುಗ ಜಾತ್ರೆ ಗ್ಯಾಂಗ್​ಗೆ ನೀಡಿದ ಚಾಕೋಲೇಟ್​ಅನ್ನು ಅಡಗಿಸಿ ಇಟ್ಟಿದ್ದರು. ನಂತರ, ನಾವು ಚಾಕೋಲೇಟ್​ ತಿಂದಿಲ್ಲ. ಇದನ್ನು ಅಡಗಿಸಿ ಮಾತ್ರ ಇಟ್ಟಿದ್ದೆ. ಇದು ಬಿಗ್​ ಬಾಸ್​ ನಿಯಮ ಉಲ್ಲಂಘಿಸಿದಂತಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅತ್ತ ಶುಭಾ ತಂಡದವರು, ಚಾಕೋಲೇಟ್​ಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಅಡಗಿಸಿಟ್ಟ ಚಾಕೋಲೇಟ್​ ಪ್ರಶಾಂತ್​ ಕೈಗೆ ಸಿಕ್ಕಿದೆ. ಅಲ್ಲದೆ ಅವರು ಬೇರೆಯದೇ ರೀತಿಯ ಆರೋಪ ಮಾಡಿದ್ದಾರೆ. ಚಾಕೋಲೇಟ್​ ಅಡಗಿಸಿಟ್ಟ ದಿವ್ಯಾ ಅದನ್ನು ತಿಂದಿದ್ದಾರೆ ಅದಕ್ಕೆ ಬಿಗ್​ ಬಾಸ್​ ಶಿಕ್ಷೆ ನೀಡಬೇಕು ಎಂದು ಕೋರಿದ್ದಾರೆ. ಇತ್ತ ದಿವ್ಯಾ ನಾನು ಚಾಕೋಲೇಟ್​ ಮೂಸಿ ಕೂಡ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ನನ್ನ ಜೀವನದಲ್ಲಿ ದಿವ್ಯಾಗೆ ಶಾಶ್ವತ ಸ್ಥಾನ; ಮೊದಲು ಇವರೇ, ಕೊನೆಯೂ ಇವರೇ’! ಮಂಜು ಲವ್​ ಇನ್ನಷ್ಟು ಸೀರಿಯಸ್​

ಡ್ರಗ್​ ಕೇಸ್​ನಲ್ಲಿ ಮಾಜಿ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​; ಎನ್​​ಸಿಬಿಯಿಂದ ವಿಚಾರಣೆ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?